L. Gundappa
Publisher - ಐಬಿಹೆಚ್ ಪ್ರಕಾಶನ
Regular price
Rs. 350.00
Regular price
Rs. 350.00
Sale price
Rs. 350.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಎಲ್. ಗುಂಡಪ್ಪನವರು ಹಿರಿಯ ವಿದ್ವಾಂಸರು, ಅವರು ಬಿ.ಎಂ.ಶ್ರೀಯವರ ಶಿಷ್ಯರು. ಸಂಸ್ಕೃತ, ಕನ್ನಡ, ಇಂಗ್ಲಿಷ್ ಮತ್ತು ತಮಿಳಿನ ಪ್ರಾಚೀನ ಸಾಹಿತ್ಯದಲ್ಲಿ ಅವರದು ದೊಡ್ಡ ಹೆಸರು, ತಮಿಳಿನ 'ತಿರುಕ್ಕುರಳ್" ಗ್ರಂಥವನ್ನು ಅನುವಾದಿಸಿ, ಅದರ ಶ್ರೇಷ್ಠತೆಯನ್ನು ಕನ್ನಡಿಗರಿಗೆ ಉಣಬಡಿಸಿದರು. ಪಂಪನ ಆದಿಪುರಾಣವನ್ನು ಸಂಗ್ರಹಿಸಿ ತಮ್ಮ ವಿದ್ವತ್ತನ್ನು ಸಮಸ್ತ ಕನ್ನಡಿಗರಿಗೆ ಅರ್ಪಿಸಿದವರು, ಸಂಸ್ಕೃತ ನಾಟಕಕಾರ ಭಾಸನ ನಾಟಕಗಳನ್ನು ಕನ್ನಡಕ್ಕೆ ಕನ್ನಡಿ ಹಿಡಿದು ದಾರಿ ತೋರಿಸಿದವರು, ಮಹಾ ಕಾದಂಬರಿಕಾರ ಲಿಯೋ ಟಾಲ್ ಸ್ಟಾಯ್ ಅವರ ಕಥೆಗಳನ್ನು ಕನ್ನಡಕ್ಕೆ ತರುವ ಮೂಲಕ ಇಂಗ್ಲಿಷಿನ ದೊಡ್ಡ ಸಂಪತ್ತೊಂದನ್ನು ಕನ್ನಡಿಗರ ಮಡಿಲಿಗೆ ಹಾಕಿದವರು, ಇದು ಮಹಾಪಂಡಿತರೂ ಸೂಕ್ಷ್ಮಜ್ಞರೂ ಆದ ದಿ| ಎಲ್, ಗುಂಡಪ್ಪ ಇಂಥ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ಕನ್ನಡ, ಸಂಸ್ಕೃತ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಿಗೆ ತೋರಿಸಿದ ಗೌರವ ನಮಗೆಲ್ಲರಿಗೂ ದಾರಿದೀಪವಾಗಿದೆ.
ಇಲ್ಲಿಯ ಇಪ್ಪತ್ತಮೂರು ಕಥೆಗಳು ಕನ್ನಡಕ್ಕೆ ತೀರ ಹೊಸವು, ಅವು ಜೀವಂತ ಕಥೆಗಳು, ಎಲ್. ಗುಂಡಪ್ಪನವರು ಅಧಿಕೃತ ಭಾಷಾಂತರವೊಂದನ್ನು ಮನಸ್ಸಿನಲ್ಲಿ ಹಿಡಿದು, ಕನ್ನಡಕ್ಕೆ ತಂದಿದ್ದಾರೆ. ಟಾಲ್ ಸ್ಟಾಯ್ ಅವರ ಸುಸಂಸ್ಕೃತ ಮನೋಧರ್ಮ, ಅವರ ಧಾರ್ಮಿಕ ನಂಬಿಕೆ, ಜನಪರ ಮನಸ್ಸು, ಉದಾರವಾದ ಮಾನವೀಯತೆ ಇವುಗಳೆಲ್ಲವೂ ಈ ಕಥೆಗಳಲ್ಲಿ ಹರಡಿಕೊಂಡಿವೆ. ಈ ಕಥೆಗಳನ್ನು ಓದಿದಷ್ಟೂ ಮತ್ತೂ ಓದಬೇಕೆಂಬ ಅಪೇಕ್ಷೆ ಯಾರಿಗಾದರೂ ಮೂಡುತ್ತದೆ. ಇದು ಕನ್ನಡದ ಕಥೆಯೆಂಬಂತೆ ಗೋಚರಿಸುತ್ತವೆ. ಈ ಕಥೆಗಳ ಓದು ಕನ್ನಡಿಗರಿಗೆ ಹೊಸ ಚೈತನ್ಯ ನೀಡಬಲ್ಲವು ಎಂಬ ವಿಶ್ವಾಸ ನನ್ನದು.
- ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ