Bharathi Bhat
Publisher - ನವಕರ್ನಾಟಕ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ಇವತ್ತಿನ ಮನೆಗಳಲ್ಲಿ ಮಗುವಿನೊಂದಿಗೆ ಅದರ ತಂದೆ ಮತ್ತು ತಾಯಿ ಮಾತ್ರವೇ ಇರುವುದರಿಂದ ಮಗುವಿನ ಪಾಲನೆಯಲ್ಲಿ ತಾಯಿಯ ಜವಾಬ್ದಾರಿ ಬಹಳ ಜಾಸ್ತಿ ಇರುತ್ತದೆ. ಮಗು ಬೆಳೆಯುತ್ತಿರುವಾಗ ದಿನದಿಂದ ದಿನಕ್ಕೆ ಮೂಡಿಬರುವ ಪ್ರತಿಯೊಂದು ಸಮಸ್ಯೆಗೂ ಆಕೆಯೇ ಪರಿಹಾರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಅಂತಹ ತಾಯಂದಿರಿಗೆ ಸಹಕಾರಿಯಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ. ಮಗುವಿನ ಹುಟ್ಟಿನಿಂದ ತೊಡಗಿ ಶಾಲೆಗೆ ಹೋಗಲು ಸುರುಮಾಡುವಲ್ಲಿವರೆಗೂ ಅದರ ಹುಟ್ಟು, ಆರೈಕೆ, ಆಹಾರ, ಬೆಳವಣಿಗೆ, ಆರೋಗ್ಯ, ಅಪಘಾತಗಳು, ಮನಸ್ಸು (ಭಾವನೆಗಳು), ಮತ್ತು ಕಲಿಕೆಗಳ ಕುರಿತಾಗಿ ತಾಯಿಯ ಮನಸ್ಸಿನಲ್ಲಿ ಮೂಡಬಹುದಾದ ಸಂಶಯಗಳನ್ನು ನಿವಾರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
ಈ ಪುಸ್ತಕವನ್ನು ಬರೆದ ಭಾರತಿ ಭಟ್ ಅವರು ಮೈಸೂರಿನ ಗೀತಾ ಬುಕ್ ಹೌಸ್ ಪ್ರಕಟಿಸಿರುವ 'ಅಡಿಗೆಯ ಒಳಗುಟ್ಟು' (1983, 1988, 2001) ಮತ್ತು ಮನೆಗೆಲಸದ ಒಳಗುಟ್ಟು' (1991, 2001) ಪುಸ್ತಕಗಳ ಮೂಲಕ ಮತ್ತು ಭಾಷಾ ಪ್ರಕಾಶನ ಪ್ರಕಟಿಸಿರುವ 'ನನ್ನ ಬೆಳ್ಳಿಯಂ ಪ್ರವಾಸ' (2000) ಪುಸ್ತಕದ ಮೂಲಕ ಈಗಾಗಲೇ ಓದುಗರಿಗೆ ಪರಿಚಿತರಾಗಿದ್ದಾರೆ.
