Dr. N. Someshwara
Publisher - ರವೀಂದ್ರ ಪುಸ್ತಕಾಲಯ
Regular price
Rs. 220.00
Regular price
Rs. 220.00
Sale price
Rs. 220.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
“ಮೊಗ್ಗೂಡೆದು ಹೂವಾಗುತ್ತೆ. ಅದರ ಒಡಲಲ್ಲಿ ಮಿಡಿಗಾಯಿ ಮೂಡಿ, ಮೈತುಂಬಿಕೊಳ್ಳುತ್ತೆ, ಈ ಕಾಯಿಯಲ್ಲಿದ್ದ ಹಚ್ಚಹಸಿರು ಮಾಗಿ, ಅದು ದೋರು ಹಣ್ಣಾಗಿ, ತನ್ನಲ್ಲಿ ವಿಶಿಷ್ಟ ರುಚಿಯನ್ನು ಹೊಮ್ಮಿಸುತ್ತೆ. ಬರುಬರುತ್ತ ಇನ್ನಷ್ಟು ಮೆತ್ತಗಾಗಿ ಯಾರೂ ಕಿತ್ತು ತಿನ್ನದೇ ಹೋದಲ್ಲಿ ಕೆಳಗೆ ಬಿದ್ದು ಕೊಳೆಯುತ್ತದೆ. ಆದರೊಳಗಿನ ಬೀಜ ಮುಂಬರುವ ಜೀವವೊಂದಕ್ಕೆ ನಾಂದಿಯಾಗುತ್ತದೆ, ಡಾ. ಲೀಲಾವತಿ ದೇವದಾಸ್ ಅವರ 'ಮುಸ್ಸಂಜೆಯಲ್ಲಿ ಮಾನಿನಿ' ಎಂಬ ಲೇಖನದಲ್ಲಿನ ಕಾವ್ಯಾತ್ಮಕ ಭಾಷೆಯ ಈ ಸಾಲುಗಳು ಹೆಣ್ಣಿನ ಒಟ್ಟು ಸಂತಾನೋತ್ಪತ್ತಿ (ಸೃಷ್ಟಿ) ಪ್ರಕ್ರಿಯೆಗೆ ಕನ್ನಡಿ ಹಿಡಿದಂತಿದೆ!
ಹೆಣ್ಣು ಪ್ರಕೃತಿಯ ಪ್ರತಿರೂಪ. ತಾಯ್ತನ ಹೊಂದುವ ಸೌಭಾಗ್ಯ ಪಡೆದಿರುವ ಆಕೆಯ ಬದುಕು ಸದಾ ಕಾಲವೂ ಸ್ವಾಸ್ಥ್ಯ ಪೂರ್ಣವಾಗಿರಬೇಕು, ಅದು, ಆಕೆಯ ಜನ್ಮಸಿದ್ಧ ಮತ್ತು ಸಂವಿಧಾನ ಪ್ರತಿಪಾದಿತ ಹಕ್ಕು, ಈ ದಿಶೆಯಲ್ಲಿ ನಾವುಗಳಾರೂ ಉಪಕಾರ ಮಾಡುವ ಪ್ರಶ್ನೆಯೇ ಇಲ್ಲ. ಸ್ತ್ರೀ ಸ್ವಾಸ್ಥ್ಯ ಸಂಹಿತೆಯ ಭಾಗವಾಗಿ 'ಸುಣ್ಣ ಹಚ್ಚದಿರಿ ಹೆಣ್ಣು ಕೂಸಿನ ಕಣ್ಣಿಗೆ' ಎಂಬ ಅರ್ಥಗರ್ಭಿತ ಶೀರ್ಷಿಕೆಯ ಈ ಸಂಪಾದಿತ ಇಪ್ಪತ್ತೈದು ಹಿರಿಯ ಕನ್ನಡ ವೈದ್ಯ ಸಾಹಿತಿಗಳ ಲೇಖನಗಳಿವೆ. ಇವೆಲ್ಲವೂ ಸಾರ್ವಕಾಲಿಕವಾಗಿ ಒಪ್ಪಿತಗೊಳ್ಳುವ ಲೇಖನಗಳಾಗಿದ್ದು, ಮಹಿಳಾ ಆರೋಗ್ಯದ ಅರಿವನ್ನು ಮೂಡಿಸುವಲ್ಲಿ ಇವು ಸಫಲಗೊಂಡಿವೆ.
ಇವುಗಳನ್ನು ಅಚ್ಚುಕಟ್ಟಾಗಿ ಸಂಪಾದಿಸಿರುವ ಡಾ. ನಾ. ಸೋಮೇಶ್ವರ ಮತ್ತು ಎಲ್ಲ ಲೇಖಕರಿಗೆ ಅಭಿವಂದನೆಗಳು, ಹಾಗೆಯೇ, ಇಂತಹ ಅತ್ಯಮೂಲ್ಯ ಕೃತಿಯನ್ನು ಸಾಗರದ ತಮ್ಮ ರವೀಂದ್ರ ಪುಸ್ತಕಾಲಯದ ಮೂಲಕ ಕನ್ನಡ ಮನಸ್ಸುಗಳ ಕೈಗಿಡುತ್ತಿರುವ ಹಿರಿಯರಾದ ಶ್ರೀಮತಿ ಶಾಂತಾ ಹಾಗೂ ಶ್ರೀ ವೈ. ಎ. ದಂತಿ ದಂಪತಿಗಳಿಗೆ ಸಾದರ ಪ್ರಣಾಮಗಳು.
- ಮಹಾನಂದಾ ಎಸ್. ದಿಗ್ಗಾಂವಕರ - ಎಸ್. ಎಸ್. ಹಿರೇಮಠ-ಜಾಲಿಹಾಳ