Dr. Sridhara Hegde Bhadran
ಸುಜ್ಜಾನದ ಅಡಿಗೆ
ಸುಜ್ಜಾನದ ಅಡಿಗೆ
Publisher -
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
- Free Shipping Above ₹250
- Cash on Delivery (COD) Available
Pages - 162
Type - Paperback
ಕನಕದಾಸರು ಭಾರತ ಕಂಡ ಪ್ರಮುಖ ದಾರ್ಶನಿಕ, ಸಮಾಜ ಸುಧಾರಕ, ಕಾವ್ಯದ ದಾರಿ ಇದನ್ನು ಸಾಧಿಸುವುದಕ್ಕೆ ಅವರು ಕಂಡು ಕೊಂಡ ಉಪಾಧಿ. ನೂರಾರು ಸತ್ವಶಾಲಿ ಕೀರ್ತನೆಗಳ ಜತೆಗೆ ಹಲವು ಮೌಲಿಕ ಕಾವ್ಯಕೃತಿಗಳನ್ನೂ ಈ ದಾರಿಯಲ್ಲಿ ನೀಡಿದ ಕವಿ ಕನಕದಾಸರು. ಭಾರತೀಯ ವೇದೋಪನಿಷತ್ತುಗಳು, ತತ್ತ್ವಶಾಸ್ತ್ರ, ಮೀಮಾಂಸ, ಕಾವ್ಯ ಪರಂಪರೆಗಳನ್ನು ಅರಿತುಕೊಂಡ ಕನಕದಾಸರಿಗೆ ವರ್ತಮಾನದ ಸಾಮಾಜಿಕ ವ್ಯವಸ್ಥೆಯ ಬಗೆಗೆ ಚಿಕಿತ್ಸಕ ದೃಷ್ಟಿಕೋನವೂ ಇತ್ತು. ಆದ್ದರಿಂದಲೇ ಅವರ ಕೀರ್ತನೆಗಳು, ಕಾವ್ಯಗಳು ಬದುಕಿನ ಪಕ್ವತೆಯಿಂದ ಮೂಡಿದ ದರ್ಶನಗಳಾಗಿವೆ. ಈ ಕೃತಿಯ ಮೂಲಕ ಡಾ. ಶ್ರೀಧರ ಹೆಗಡೆ ಭದ್ರನ್ ಅವರು ಕನಕ ಸಾಹಿತ್ಯದ ಓದಿನ ಹಾದಿಯಲ್ಲಿ ನಮ್ಮನ್ನು ಕೈಹಿಡಿದು ಮುನ್ನಡೆಸುತ್ತಾರೆ.
ಭದ್ರನ್ ಅವರದ್ದು ಅಕ್ಕಸಂವಾದದ ವಿಶಿಷ್ಟ ಶೈಲಿ, ಸಾಮಾನ್ಯವಾಗಿ ಕೃತಿಯ ಕುರಿತ ಮಾತು ಹೊಗಳಿಕೆಗೋ, ಟೀಕೆಗೋ ಜಾರಿ ಅದನ್ನೇ ವಿಮರ್ಶೆಯೆಂದು ಸ್ಥಾಪಿಸುವ ಇಂದಿನ ದಿನಗಳ ಕನಕನ ಅಂತರ್ಯವನ್ನು ಅರಳಿಸಿ ತೋರುವ 'ನಿಜದ ಕನಕ' ಇಲ್ಲಿದ್ದಾನೆ ಎಂದು ಕಾಣಿಸುವ ಪ್ರಯತ್ನವನ್ನು ಶ್ರೀಧರರು ಮಾಡಿದ್ದಾರೆ. ಈಗಾಗಲೇ ಧಾರವಾಡದ ಕನಕಪೀಠದಲ್ಲಿ ಕನಕ ಸಾಹಿತ್ಯವನ್ನು ಪಾಠ ಮಾಡಿದ, ಆಕಾಶವಾಣಿಯಲ್ಲಿ ಕನಕನ ಕುರಿತು ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ ಲೇಖಕರು ಅದರೆಲ್ಲರ ತಿಳುವಳಿಕೆಯ ನವನೀತವನ್ನು ಇಲ್ಲಿ ಉಣಬಡಿಸಿದ್ದಾರೆ. ಕನಕದಾಸರು ಮಂಡಿಸಿದ ವ್ಯಕ್ತಿ, ಭಕ್ತಿ, ಸಮಾಜ ಮತ್ತು ಅರಿವಿನ ನಾನಾ ಸಂದೇಶಗಳನ್ನು ಓದುಗರಿಗೆ ಮನಮುಟ್ಟುವಂತೆ ಸರಳ ಭಾಷಿಕ ವಿನ್ಯಾಸದಲ್ಲಿ ನಿರೂಪಿಸುವ ಈ ಕೃಷಿ ಸುಜ್ಞಾನದ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ.
ಕನಕರ ಸಾಹಿತ್ಯದ ಪ್ರಮುಖ ಧಾರಗಳಾದ ಭಕ್ತಿ ಮತ್ತು ಸಾಮಾಜಿಕ ಕಳಕಳಿಯೆರಡನ್ನು ಪ್ರತ್ಯೇಕವೆಂದು ಭಾವಿಸದೇ ಒಂದಾಗಿ ಹಣಿದುಕೊಂಡೇ ನೋಡುವ, ತನ್ಮೂಲಕ ಕನಕದಾಸರ ವ್ಯಕ್ತಿತ್ವವನ್ನು ಅರ್ಥಮಾಡುವ ಪ್ರಯತ್ನ ಇಲ್ಲಿನದು. ಅದಕ್ಕೆ ಅವರು ಕನಕರ ಕುರಿತ ಐತಿಹ್ಯಗಳು, ಅವರ ಕಾವ್ಯದ ಕಥೆಗಳು, ಕೀರ್ತನೆಗಳ ಸಾಲುಗಳು, ಕನಕರ ಕುರಿತ ಪೂರ್ವ ಚಿಂತಕರ ಮಾತುಗಳು, ವರ್ತಮಾನದ ಸನ್ನಿವೇಶಗಳು ಹೀಗೆ ಹಲವು ಸಂಗತಿಗಳನ್ನು ಜೋಡಿಸಿಕೊಂಡು ಸಂವಾದಿಸುತ್ತಾರೆ. ನಿಜವಾದ ಅರ್ಥದಲ್ಲಿ ಇದೊಂದು ಕನಕದಾಸರ ಜೊತೆಗಿನ ಆಪ್ಪಸಂವಾದವೇ ಸರಿ. ಎಲ್ಲರಿಗೂ ಉಪಯೋಗವಾಗುವ ಕನಕನನ್ನು ಜನಪ್ರಿಯಗೊಳಿಸುವ ಇಂತಹ ಆಪ್ತ ಕೃತಿಯನ್ನು ನೀಡುತ್ತಿರುವುದಕ್ಕೆ ಶ್ರೀಧರ ಹೆಗಡೆಯವರಿಗೆ ನನ್ನ ಅಭಿನಂದನೆಗಳನ್ನು ಸಮರ್ಪಿಸುವೆ.
-ಡಾ. ಧನಂಜಯ ಕುಂಬ್ಳೆ
ನಿರ್ದೇಶಕರು, ಕನಕದಾಸ ಸಂಶೋಧನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ

Share
Subscribe to our emails
Subscribe to our mailing list for insider news, product launches, and more.