Vishweshwara Bhat
ಸುದ್ದಿಮನೆ ಕತೆ
ಸುದ್ದಿಮನೆ ಕತೆ
Publisher - ವೀರಲೋಕ ಬುಕ್ಸ್
Regular price
Rs. 350.00
Regular price
Rs. 350.00
Sale price
Rs. 350.00
Unit price
/
per
- Free Shipping Above ₹250
- Cash on Delivery (COD) Available
Pages - 208
Type - Paperback
ಜಗತ್ತಿನ ಸುದ್ದಿಯೆಲ್ಲಾ ಎಲ್ಲಿಯೇ ಹುಟ್ಟಲಿ, ಕೊನೆಗಾದರೂ ಸುದ್ದಿಮನೆಯಲ್ಲಿ ಬಂದು ಬೀಳಲೇಬೇಕು. ಇಲ್ಲದಿದ್ದರೆ ಅವು ಸುದ್ದಿ ಎಂದು ಕರೆಯಿಸಿಕೊಳ್ಳುವುದಾದರೂ ಹೇಗೆ? ಅಲ್ಲಿ ಬಂದು ಬಿದ್ದವುಗಳನ್ನೆಲ್ಲ ಹೆಕ್ಕಿ, ತಿಕ್ಕಿ, ತೀಡಿ, ಅರೆದು, ಉಜ್ಜಿ, ನುಣುಪು ಮಾಡಿ, ಹೊಳಪು ಕೊಟ್ಟು, ಒಪ್ಪ ಓರಣದಿಂದ ಸಿಂಗರಿಸಿ, ಅಂದ-ಚೆಂದದಿಂದ ವಿನ್ಯಾಸಗೊಳಿಸಿ, ಮಂಗನಟೋಪಿಯಂಥ ಬೆಚ್ಚಗಿನ ಹೆಡ್ ಲೈನ್ ಕೊಟ್ಟು, ಅಕ್ಕರೆಯಿಂದ ಓದುಗರ ಕೈಗಿಡುವ ತನಕ ಸುದ್ದಿಮನೆ ಎಂಬ ನಿದ್ದೆಗೇಡಿ ಕಾರ್ಖಾನೆ ವಿರಮಿಸುವುದಿಲ್ಲ. ಸುದ್ದಿಮನೆ ಪತ್ರಿಕೆಯ ಆತ್ಮವಿದ್ದಂತೆ, ದೇಶ - ವಿದೇಶಗಳಿಂದ ಬರುವ ಸುದ್ದಿಗೆ ಜರಡಿ ಹಿಡಿದು, ಸೋಸಿ, ಬಸಿದು ನಂತರ ಅವುಗಳಿಗೆ ಒಂದು ಅರ್ಥ ಮತ್ತು ರೂಪ ನೀಡುವ, ಓದುಗರಿಗೆ ಅದರ ಮಹತ್ವ ತಿಳಿಸಿಕೊಡುವ ಅಪ್ಪಟ ಸುದ್ದಿ ಕಾಶಿ. ಸುದ್ದಿಯೊಂದು ಗರ್ಭ ಧರಿಸಿ, ಜನ್ಮ ತಾಳಿ, ಬಾಣಂತನ ಮುಗಿಸಿ, ಶಿಶುವಾಗಿ ಓದುಗರ ಮಡಿಲು ಸೇರಿಸುವ ಹೊಣೆಗಾರಿಕೆ ಸುದ್ದಿಮನೆಯದು. ಹೀಗಾಗಿ ಇದು ಸುದ್ದಿಯ ಪ್ರಸೂತಿಗೃಹವೂ ಹೌದು. ಉಪಸಂಪಾದಕರು, ಮುಖ್ಯ ಉಪಸಂಪಾದಕರು, ಸುದ್ದಿ ಸಂಪಾದಕರೆಂಬ ಕರ್ಮಯೋಗಿಗಳೇ ಸೂಲಗಿತ್ತಿಯರು, ಪ್ರತಿ ಸುದ್ದಿಮನೆಯಲ್ಲೂ ಸುದ್ದಿಯ ಗರ್ಭಧಾರಣೆ, ಗರ್ಭಪಾತ, ನರಳಾಟ, ಡೆಲಿವರಿ, ಸಂಭ್ರಮ, ನಿಟ್ಟುಸಿರಿನ ಮೌನ ಗೀತೆ ನುಲಿಯುತ್ತಲೇ ಇರುತ್ತದೆ. ಇಲ್ಲಿ ಇತಿಹಾಸ ಆಗಾಗ ಸತ್ತು ಹೊಸ ಹುಟ್ಟು ಪಡೆಯುತ್ತಲೇ ಇರುತ್ತದೆ. ಕಟುಕನ ಮನೆ ನ್ಯಾಯದಂತೆ ಇಲ್ಲಿ ಯಾವ ಸುದ್ದಿಗೂ ಕಣ್ಣೀರಿಲ್ಲ, ಸುದ್ದಿಯಪ್ರಸೂತಿ ಗೃಹವೆಂಬ ಈ ಮನೆ ತನ್ನ ಕಥೆ ಹೇಳಿದರೆ ಹೇಗಿರುತ್ತದೆ?
-ವಿಶ್ವೇಶ್ವರ ಭಟ್
-ವಿಶ್ವೇಶ್ವರ ಭಟ್
Share
Subscribe to our emails
Subscribe to our mailing list for insider news, product launches, and more.