Maasti Venkatesha Iyyangar
ಸುಬ್ಬಣ್ಣ
ಸುಬ್ಬಣ್ಣ
Publisher -
- Free Shipping Above ₹250
- Cash on Delivery (COD) Available
Pages -
Type -
ನನ್ನ ಪೂಜ್ಯ ಮಿತ್ರರಾದ ಶ್ರೀ ಮಾನ್ಯ ನವರತ್ನ ರಾಮರಾಯರು ತಮ್ಮ ಪರಿಚಯದ ಒಬ್ಬ ವೃದ್ಧ ಗಾಯಕನ ಕಡೆಯ ದಿನಗಳನ್ನು ತಮ್ಮ ಸ್ನೇಹಿತರಿಗೆ ಒಮ್ಮೊಮ್ಮೆ ವರ್ಣಿಸಿ ಹೇಳುವುದುಂಟು. ಅವರು ಹೀಗೆ ನನಗೆ ವರ್ಣಿಸಿದ ವ್ಯಕ್ತಿಯೇ ಈ ಕಥೆಯ ನಾಯಕನು. ರಾಮರಾಯರೇ ಆ ವೃದ್ಧನನ್ನು ಕುರಿತ ಕತೆಯೊಂದನ್ನು ಬರೆಯಬೇಕೆಂದು ಉದ್ದೇಶಿಸಿದ್ದರು. ಆದರೆ ನನಗೂ ಆ ವಸ್ತುವಿನ ಮೇಲೆ ಆಸೆ ಇದೆಯೆಂಬ ಯೋಚನೆಯಿಂದಲೂ, ಇತರ ಕಾರಣದಿಂದಲೂ ಅವರು ತಮ್ಮ ಉದ್ದೇಶವನ್ನು ಬಿಟ್ಟು ಆ ಗಾಯಕನನ್ನು ಕತೆಯಲ್ಲಿ ತೋರಿಸುವ ಕೆಲಸವನ್ನು ನನಗೆ ಕೊಟ್ಟರು. ಅವರು ಗುರುತು ಮಾಡಿಕೊಟ್ಟ ಜೀವನದ ಸಂಪೂರ್ಣ ಚಿತ್ರವೊಂದನ್ನು ಕಲ್ಪಿಸುವ ಪ್ರಯತ್ನದಲ್ಲಿ ಈ ಪುಸ್ತಕದ ಕತೆ ನಿರ್ಮಾಣವಾಯಿತು.
ರಾಮರಾಯರ ರಸಾಭಿವೃತೆಯನ್ನೂ ಕಥಾನಿರೂಪಣ ಶಕ್ತಿಯನ್ನೂ ನಮ್ಮಲ್ಲಿ ಅನೇಕರು ಬಲ್ಲೆವು. ತಾವು ಉದ್ದೇಶಿಸಿದ್ದ ಕತೆಯನ್ನು ಅವರು ಬರೆದಿದ್ದರೆ ಅದು ಇನ್ನೆಂತಹ ಹಯಾಗುತ್ತಿದ್ದಿತೆಂದು ಅಂಥವರು ತಕ್ಕಮಟ್ಟಿಗೆ ಊಹಿಸಬಹುದು. ಇಷ್ಟು ಶಕ್ತಿ ಇರುವವರು ಉತ್ತಮವಾದ ಕಥಾವಸ್ತುವನ್ನು ನನಗೆ ಬಿಟ್ಟುಕೊಟ್ಟದರ ಔದಾರ್ಯ ಇನ್ನೆಷ್ಟೆಂದು ನಾನು ಹೇಳಬೇಕಾಗಿಲ್ಲ. ಇವರು ಈ ರೀತಿಯಲ್ಲೂ ಇನ್ನು ಇತರ ವಿಧದಲ್ಲೂ ನನಗೆ ತೋರಿಸಿರುವ ಪ್ರೇಮಕ್ಕಾಗಿ ನಾನು ಇವರಿಗೆ ಕೃತಜ್ಞನಾಗಿದ್ದೇನೆ.
-ಮಾಸ್ತಿ ವೆಂಕಟೇಶ ಅಯ್ಯಂಗಾರ್
Share
Subscribe to our emails
Subscribe to our mailing list for insider news, product launches, and more.