Vasantha Kalbagal
SOMEದರ್ಶನ
SOMEದರ್ಶನ
Publisher - ವೀರಲೋಕ ಬುಕ್ಸ್
Regular price
Rs. 225.00
Regular price
Rs. 225.00
Sale price
Rs. 225.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ವಸಂತ ಅವರ ಬರವಣಿಗೆ ಮತ್ತು ಭಾಷಾ ಬಳಕೆ ಹಲವು ಕಡೆ ನಮ್ಮ ಗಮನ ಸೆಳೆಯುತ್ತದೆ. ಟಾಟಾ ಅವರನ್ನು ಜನರನ್ನು ಒಯ್ಯುವ ಸಾಮಾನ್ಯ ಲಿಫ್ಟ್ನಲ್ಲಿ ಕರದೊಯ್ಯಲು ಸಾಧ್ಯವಾಗದೆ ಭಾರಿ ಮಷೀನುಗಳನ್ನು ಮೇಲಕ್ಕೊಯ್ಯುವ ಬೃಹತ್ ಶಿಪ್‌ನಲ್ಲಿ ಕರೆದೊಯ್ಯುವಾಗ ಅವರ ಮನಸ್ಸಿನಲ್ಲಿ ಮೂಡುವ ಭಾವನೆ ಹೀಗಿದೆ. ನೂರು ಸಂಸ್ಥೆಗಳನ್ನು ಹುಟ್ಟುಹಾಕಿದ ಇಂತಹಾ ತೂಕದ ವ್ಯಕ್ತಿತ್ವದ ಧುರೀಣನನ್ನು ಕರತರಲು ವಿಶಾಲವಾದ ಭಾರದ ಲಿಫ್ಟ್ ಅಗತ್ಯ ಎನಿಸಿತು. ಇವರ ಕವಿತಗಳನ್ನು ಮೆಚ್ಚಿ ಜಿ.ಎಸ್ ಶಿವರುದ್ರಪ್ಪನವರು ಬರೆದ ಪತ್ರ ಓದಿ, "ನಾನು ಹೇಳವನಾಗಿಬಿಟ್ಟೆ" ಎಂದು, ನಿಸಾರ್ ಅವರ ಬೆನ್ನುಡಿ ಕಂಡು, 'ಈ ಭಾರವನ್ನು ಹೊತ್ತ ಹೊತ್ತಿಗೆ ನನ್ನನ್ನು ಹೊತ್ತೊತ್ತಿಗೆ ಕುಬ್ಜವಾಗಿಸಿತು' ಎಂದು ಬರೆಯುತ್ತಾರೆ. ವಿಮಾನದಲ್ಲಿ ಕಮಲ್ ಹಾಸನ್ ತನ್ನ ಪಕ್ಕದ ಸೀಟಿನಲ್ಲೇ ಕುಳಿತುಕೊಳ್ಳಿ ಅಂದಾಗ ಇವರ ಮುಖ, ವಸ್ತು ಪ್ರದರ್ಶನದಲ್ಲಿ ಸಿಗುವ ದೆಹಲಿ ಹಪ್ಪಳದಂತೆ ದೊಡ್ಡದಾಗಿ ಅರಳಿತು',
ಸುಮಾರು ನಲವತ್ತು ವರ್ಷಗಳ ಹಿಂದೆ ನಾನು ರೇಡಿಯೋ ಸ್ಟೇಷನ್ನಿನಲ್ಲಿ ಯುವವಾಣಿ ವಿಭಾಗದ ಉಸ್ತುವಾರಿಯಾಗಿದ್ದಾಗ ಕವಿತೆ ಓದಲು ಬಂದಿದ್ದ ವಸಂತ ಕಲ್‌ಬಾಗಲ್ ಅವರನ್ನು ನಾನು ಮೊದಲು ನೋಡಿದ್ದು ಆಗ ಕಲ್‌ಬಾಗಲ್ ಅಂದರೇನು ಅಂತ ಕೇಳಿದಾಗ ಕಲ್ಲು ಬಾಗಿಲು ಅಷ್ಟೇ ಅಂದಿದ್ದರು! ಆಮೇಲೆ ಒಮ್ಮೆ ತಮ್ಮ ಕವಿತಾ ಸಂಕಲನ ಕೊಟ್ಟು ಕಣ್ಮರೆಯಾದವರು ಎತ್ತ ಹೋದರೊ ತಿಳಿಯದಾಗಿತ್ತು! ಈಚೆಗೆ ಒಂದೆರಡು ವಾರಗಳ ಹಿಂದೆ, ಡಾ. ಮನುಘಟಿಕೇಶ್ ಜೊತೆ ಮನೆಗೆ ಬಂದು Someದರ್ಶನಗಳ ಕಟ್ಟನ್ನು ಕೊಟ್ಟರು. ಓದುತ್ತ ಹೋದಂತೆ ನಲವತ್ತು ವರ್ಷಗಳ ವೃತ್ತಿ ಪ್ರವೃತ್ತಿಗಳ ಸಾಹಸದಲ್ಲಿ ಅವರು ಏರಿದ ಎತ್ತರವನ್ನು ಅರಿತು ಅಚ್ಚರಿ ಮತ್ತು ಸಂತೋಷ ಉಂಟಾಯಿತು, ದೇಶ ವಿದೇಶದ ಇನ್ನೂ ಹಲವು ದಿಗ್ಗಜರನ್ನು ಭೇಟಿಯಾಗಿರುವ ಸೂಚನೆಯನ್ನು ಅವರು ನೀಡಿದ್ದಾರೆ. ತಮ್ಮ ನೆನಪಿನ ಕಣಜದ ಬಾಗಿಲನ್ನು ಆದಷ್ಟು ಬೇಗ ತೆರೆದು ಓದುಗರಿಗೆ ಇನ್ನಷ್ಟು ಸಂತಸ ನೀಡಲಿ ಎಂದು ಅವರ ಕುಟುಂಬದ ಸದಸ್ಯರ ಒತ್ತಾಯದ ಜೊತೆಗೆ ಕನ್ನಡ ಓದುಗರ ಪರವಾದ ನನ್ನ ದನಿಯನ್ನೂ ಸೇರಿಸಲು ಬಯಸುತ್ತಾ ವಿರಮಿಸುವೆ.
-ಅಗ್ರಹಾರ ಕೃಷ್ಣಮೂರ್ತಿ
ಮುನ್ನುಡಿಯಿಂದ

Share
Subscribe to our emails
Subscribe to our mailing list for insider news, product launches, and more.