Skip to product information
1 of 1

Sri Sri Rangapriya Sri Srihi

ಶ್ರೀಮದ್ಭಾಗವತ ಕಥಾಮೃತಸಾರ - ಭಾಗ 3

ಶ್ರೀಮದ್ಭಾಗವತ ಕಥಾಮೃತಸಾರ - ಭಾಗ 3

Publisher - ಅಷ್ಟಾಂಗಯೋಗ ವಿಜ್ಞಾನ ಮಂದಿರ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು, ಶಾಸ್ತ್ರಪಾಂಡಿತ್ಯ, ಪ್ರಯೋಗ-ರಹಸ್ಯಪಾಂಡಿತ್ಯ-ಪ್ರವಚನ-ಅಧ್ಯಾಪನ- ಆಚರಣಪಾಂಡಿತ್ಯಗಳನ್ನು ಪಡೆದು, ಶ್ರೀ ಶ್ರೀರಂಗ ಮಹಾಗುರುಗಳ ಪದತಲದಲ್ಲಿ ಅಭ್ಯಸಿಸಿ ಪೂರ್ಣವಾಗಿ ಪರಿಷ್ಕರಿಸಿಕೊಂಡ ವಿದ್ವಾಂಸರು.

ಪೂಜ್ಯ ಸ್ವಾಮಿಗಳು ಅತ್ಯದ್ಭುತ ವಾಲ್ಕಿಗಳು, ಅನ್ವೇಷಕರು, ಋಷಿಗಳು, ಆಶುಕವಿಗಳು, ಸರ್ವಶಿಕ್ಷಣ ತಜ್ಞರು, ಪ್ರತ್ಯುತ್ಪನ್ನ ಮತಿಗಳೂ ಆಗಿ ನಡೆದಾಡುವ ಗ್ರಂಥಾಲಯವಾಗಿದ್ದರು.

ಪೂಜ್ಯರು ಸರ್ವಧರ್ಮಗಳನ್ನೂ ಗೌರವಿಸುತ್ತಿದ್ದರು. ಭಾರತೀಯ ಸಂಸ್ಕೃತಿಯ ಮಹತ್ವವನ್ನು ಆಮೂಲಾಗ್ರವಾಗಿ ಅರಿತು ಪ್ರಚಾರ ಮಾಡುತ್ತಿದ್ದರು. ಮಹಾಗುರುಗಳಿಂದ ಉಪದಿಷ್ಟವಾದ ಪಾಠಪ್ರವಚನಗಳನ್ನು ಆಧರಿಸಿ ಮಾಡಿದ ಶ್ರೀಮದ್ಭಾಗವತ ಕಾವ್ಯರತ್ನದ ಮೊದಲ ನಾಲ್ಕು ಸ್ಕಂಧಗಳ ಪ್ರಧಾನ ಭಾಗಗಳನ್ನೂ ಕಥಾನಕಗಳನ್ನೂ ತತ್ತ್ವಾರ್ಥಗಳೊಡನೆ ಕಥಾಮೃತಸಾರವಾಗಿ ಪ್ರಕಟಿಸಲಾಗಿದೆ. ಶ್ರೀಮದ್ಭಾಗವತದ ಉಳಿದ ಸ್ಕಂಧಗಳ ಕಥಾಮೃತವನ್ನು ಮುಂದಿನ ಭಾಗಗಳಲ್ಲಿ ಪ್ರಕಟಿಸಲಾಗುವುದು.

ಸತ್ ಎಂದರೆ ಪರಮಾತ್ಮನ ಹೆಸರು, ವಿಕಾರವನ್ನು ಹೊಂದದೇ ಇರುವ ವಸ್ತುವೇ ಸತ್. ಅದನ್ನು ಅನುಭವಿಸಿದವರು ಸತ್ಪುರುಷರು. ಸತ್ಪುರುಷರ ಸಹವಾಸ ಇಲ್ಲದಿದ್ದರೆ ಇನ್ಯಾವುದೋ ಆಕ್ರಮಿಸಿಕೊಳ್ಳುತ್ತದೆ. ಮಹಾಗುರುಗಳ ಉದಾಹರಣೆ: ಕ್ಷೇತ್ರಕ್ಕೆ ನಾವು ಸರಿಯಾದ ವ್ಯವಸಾಯವನ್ನು ಮಾಡಿ ಆ ಜಾಗದಲ್ಲಿ ಸರಿಯಾದ ಚೀಜವನ್ನು ಚಿತ್ತದೆ ಹೋದರೆ ಅಲ್ಲಿ ಪಾಪಾಸ್ಕಳ್ಳಿ ಬೆಳೆದುಕೊಳ್ಳುತ್ತದೆ. ಸತ್ಸಹವಾಸ ಮಾಡದೇ ಇದ್ದರೆ ಆ ಜಾಗದಲ್ಲಿ ಯಾವ ಯಾವುದೋ ಸಹವಾಸವು ಬಂದು ಸೇರಿಕೊಳ್ಳುತ್ತದೆ. ಬೆಳಕನ್ನು ಕಂಡಿರುವವರು ತಮ್ಮ ದೃಷ್ಟಿಯಿಂದಲೂ ಸ್ಪರ್ಶದಿಂದಲೂ ಮಾತುಗಳಿಂದಲೂ ಸಾನ್ನಿಧ್ಯದಿಂದಲೂ ಸದ್ಧರ್ಮವನ್ನು ನಮ್ಮಲ್ಲಿ ಕೂರಿಸಬಲ್ಲರು. ಅಂತಹ ಮಹಾತ್ಮರ ಸಹವಾಸ ಎಲ್ಲರಿಗೂ ಬೇಕಾಗುತ್ತದೆ.

ಭಗವಂತನನ್ನು ಹೊಂದುವುದಕ್ಕಾಗಿ ಶಾಸ್ತ್ರಗಳಲ್ಲಿ ಅನೇಕ ಮಾರ್ಗಗಳನ್ನು ಹೇಳಿದೆ. ನೇರವಾಗಿ ಅವನಲ್ಲಿಗೆ ಒಯ್ಯುವ ಮಾರ್ಗಗಳು ಉಂಟು. ಪರಂಪರೆಯಿಂದ ಒಂದರಲ್ಲಿ ಮನಸ್ಸು ಪಕ್ಷವಾಗಿ ಅದರಿಂದ ಮತ್ತೊಂದು ಘಟ್ಟಕ್ಕೆ ಹತ್ತಿ ಅಲ್ಲಿಂದ ದೇವರನ್ನು ಹೊಂದುವುದು ಎಂಬ ಪರಂಪರಾ ಸಂಬಂಧದಿಂದ ಭಗವಂತನನ್ನು ಹೊಂದುವ ಎಲ್ಲ ಮಾರ್ಗಗಳೂ ಉಂಟು.

ಶ್ರೀ ಕೃಷ್ಣನು ಉದ್ಧವನಿಗೆ ಹೇಳಿದ ಭಕ್ತಿಯೋಗದ ಮಹಿಮೆ: ಭಕ್ತರಿಗೆ ಭಗವಂತನಲ್ಲದೇ ಬೇರೆ ಧನ ಯಾವುದೂ ಇಲ್ಲ. ಅವರು ಪರಮೇಷ್ಠಿಯ ಬ್ರಹ್ಮದೇವರ ಪದವಿಯನ್ನಾಗಲೀ ಮಹೇಂದ್ರನ ಪದವಿಯನ್ನಾಗಲೀ ಸಾರ್ವಭೌಮ ಪದವಿಯನ್ನಾಗಲೀ ಯೋಗಸಿದ್ಧಿಗಳನ್ನಾಗಲೀ ಅಷ್ಟೇಕ ಮೋಕ್ಷವನ್ನೂ ಸಹ ಬಯಸುವುದಿಲ್ಲ. ನನ್ನಲ್ಲಿ ಅಷ್ಟು ಪ್ರೀತಿ ಅವರಿಗೆ, ನಾನೇ ಮುಕ್ತಿ ಸ್ವರೂಪ.

ಶ್ರೀಶ್ರೀರಂಗಪ್ರಿಯ ಸ್ವಾಮಿಗಳು

View full details