V. Seetaramiah
Publisher - ನ್ಯಾಶನಲ್ ಬುಕ್ ಟ್ರಸ್ಟ್
Regular price
Rs. 70.00
Regular price
Rs. 70.00
Sale price
Rs. 70.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅಗ್ರಗಣ್ಯರಾದ ಪುರಂದರದಾಸರ ಹಾಡುಗಳು ಕನ್ನಡಿಗರಿಗೆ ಚಿರಪರಿಚಿತವಾದುವು, ಆದರೆ ಅವರ ಜೀವನಚರಿತ್ರೆ ಅನೇಕರಿಗೆ ತಿಳಿಯದು. ಸಿರಿವಂತ ವ್ಯಾಪಾರಗಾರರಾಗಿದ್ದು ಸಮಸ್ತ ಐಶ್ವರ್ಯವನ್ನೂ ತ್ಯಾಗ ಮಾಡಿ ಪರಮ ದೈವಭಕ್ತರಾದ ಪುರಂದರದಾಸರ ಜೀವನ ಆದರ್ಶಣೀಯ. ವ್ಯಾಸರಾಯರ ಶಿಷ್ಯರಾಗಿ ದಾಸಕೂಟ ಸೇರಲು ಅವರಿಗೆ ದೈವ ಪ್ರೇರಣೆಯಾಯಿತು ಎಂಬುದು ಒಂದು ಕಥೆಯಿಂದ ತಿಳಿದು ಬರುತ್ತದೆ. ಇಹಲೋಕ ಸುಖವನ್ನು ತೊರೆದು ಪುರಂದರ ವಿಠಲನ ಭಕ್ತರಾಗಿ, ಪರಲೋಕ ಸುಖವನ್ನು ಪಡೆಯಲು ಅವರು ತಮ್ಮ ಜೀವನವನ್ನು ಅಣಿ ಮಾಡಿಕೊಂಡ ಸಂದರ್ಭಗಳು ಈ ಪುಸ್ತಕದಲ್ಲಿ ವಿವರಿಸಲ್ಪಟ್ಟಿವೆ. ಅವರು ರಚಿಸಿರುವ ಹಾಡುಗಳು ಅಲ್ಲಲ್ಲಿ ಉಲ್ಲೇಖಿಸಲ್ಪಟ್ಟು, ಅವುಗಳನ್ನು ರಚಿಸಲು ಒದಗಿ ಬಂದ ಸಂದರ್ಭಗಳನ್ನು ವಿವರಿಸಲಾಗಿದೆ.
'ವಿಸಿ' ಎಂದು ಕನ್ನಡಿಗರಿಗೆ ಚಿರಪರಿಚಿತರಾದ ಶ್ರೀ ವಿ. ಸೀತಾರಾಮಯ್ಯನವರು (1899-1983) ಈ ಪುಸ್ತಕವನ್ನು ಬರೆದಿದ್ದಾರೆ. ಸಾಹಿತ್ಯದ ನಾನಾ ವಿಭಾಗಗಳಿಗೆ ಅವರು ನೀಡಿರುವ ಕೊಡುಗೆ ಅಪಾರವಾದದ್ದು. ಅವರ ಅನೇಕ ಕೃತಿಗಳ ಪೈಕಿ ಪಂಪ ಮತ್ತು ಕವಿಕಾವ್ಯ ದೃಷ್ಟಿ ಪ್ರಶಂಸನೀಯವಾದುವು.