Veena Raghuchandra Shetty
ಶ್ರೀ ಆದಿನಾಥ ವೈಭವ
ಶ್ರೀ ಆದಿನಾಥ ವೈಭವ
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಮೂಡುಬಿದಿರೆಯ ಸೃಜನಶೀಲ ಕವಯತ್ರಿ ಶ್ರೀಮತಿ ವೀಣಾ ರಘುಚಂದ್ರ ಶೆಟ್ಟಿ ಅವರ " ಶ್ರೀ ಆದಿನಾಥ ವೈಭವವು"( ಜಿನಸಹಸ್ರನಾಮ) ಭಗವಾನ್ ಆದಿನಾಥರ ಸಾವಿರದ ಎಂಟು ಹೆಸರುಗಳನ್ನು ಸ್ತುತಿ ರೂಪದಲ್ಲಿ ಆರಾಧಿಸುವ ಅಪರೂಪದ ಕೃತಿ, ಶ್ರೀಮತಿ ವೀಣಾ ರಘುಚಂದ್ರ ಶೆಟ್ಟಿ ಅವರಿಗೆ ಕವಿತ್ವ ಸಹಜವಾಗಿಯೇ ಒದಗಿ ಬಂದಿದೆ. ನಿರಂತರವಾದ ಸ್ವಾಧ್ಯಾಯದ ಮೂಲಕವಾಗಿ ತಮ್ಮಲ್ಲಿರುವ ಕವಿತಾ ಪ್ರತಿಭೆಗೆ ಸಾಣೆ ಹಿಡಿಯುತ್ತಾ ಬಂದಿದ್ದಾರೆ. ಅವರು ರಚಿಸಿರುವ ನೂರಾರು ಜಿನಭಕ್ತಿಗೀತೆಗಳು ನಾಡಿನಾದ್ಯಂತ ಇಂದು ಸಹೃದಯರ ನಾಲಿಗೆ ಮೇಲೆ ನಲಿದಾಡುತ್ತಿದೆ. ಸಹಜ ಕವಿತ್ವಾಶಕ್ತಿ ಮತ್ತು ವ್ಯುತ್ಪತ್ತಿ ಜ್ಞಾನದ ಪರಿಣಾಮವಾಗಿ ಇಂದು ಲೋಕಾರ್ಪಣೆಗೊಳ್ಳುತ್ತಿರುವ “ ಶ್ರೀ ಆದಿನಾಥ ವೈಭವ' (ಜಿನಸಹಸ್ರನಾಮ) ದ ಪ್ರತೀ ರಚನೆಗಳೂ ಅತ್ಯಂತ ಸರಳವಾಗಿ ಒಂದೇ ಓದಿಗೆ ಮನಸ್ಸನ್ನು ಸೂರೆಗೊಳ್ಳುತ್ತವೆ. ಆದುದರಿಂದಲೇ ಇಲ್ಲಿಯ ರಚನೆಗಳು ಕಾವ್ಯ ರಸಿಕರ ಮನಸ್ಸಿಗೆ ಮುದವನ್ನು ಕೊಡುವುದರಲ್ಲಿ ನನಗೆ ಯಾವುದೇ ಸಂಶಯವೂ ಇಲ್ಲ. ವೀಣಾ ರಘುಚಂದ್ರ ಶೆಟ್ಟಿ ಅವರ ಈ ನೂತನ ಪ್ರಯೋಗಕ್ಕೆ ಶುಭವನ್ನು ಕೋರುತ್ತೇನೆ.
-ಪ್ರೊ. ಎಸ್. ಪಿ. ಅಜಿತ್ ಪ್ರಸಾದ್
ಮೂಡುಬಿದಿರೆ
Share

Subscribe to our emails
Subscribe to our mailing list for insider news, product launches, and more.