Dr. S. Vimala
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ, ಒಂದು ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಶ್ರವಣಬೆಳಗೊಳದ ಅತ್ಯಮೂಲ್ಯವಾದ ಶಾಸನಗಳ ಸಾಂಸ್ಕೃತಿಕ ಅಧ್ಯಯನವನ್ನು ಪ್ರಸ್ತುತ ಗ್ರಂಥ "ಶ್ರವಣಬೆಳಗೊಳದ ಶಾಸನಗಳು: ಒಂದು ಸಾಂಸ್ಕೃತಿಕ ಅಧ್ಯಯನ'’. ಶಾಸನಗಳು ಎಂದೂ ಸಾಂಸ್ಕೃತಿಕ ವಾಹಕಗಳಾಗಿ ಕೆಲಸ ಮಾಡಿವೆ. ಆದರೆ ಅದಕ್ಕಿಂತ ಅವುಗಳ ಮುಖ್ಯ ಉದ್ದೇಶ ಮಾಹಿತಿಯನ್ನು ಅಧಿಕೃತವಾಗಿ ನೀಡುವುದು. ಆ ಮಾಹಿತಿ ಸಂಬಂಧಪಟ್ಟ ಕಾಲದ ನಿಖರ ಪರಿಸ್ಥಿತಿಯನ್ನು ತಿಳಿಸುವುದಕ್ಕೆ ಸಹಕಾರಿಯಾಗಿವೆ. ಶಾಸನಗಳು ಮುಖ್ಯವಾಗಿ ಇತಿಹಾಸವನ್ನು ರಚಿಸಿಕೊಳ್ಳುವುದಕ್ಕೆ, ಪುನರ್ ರಚಿಸಿಕೊಳ್ಳುವುದಕ್ಕೆ ತುಂಬಾ ಸಹಕಾರಿಯಾಗಿವೆ. ಭಾರತೀಯ ದೃಷ್ಟಿಯಲ್ಲಿ ಶಾಸನಗಳು, ದೇವಸ್ಥಾನಗಳು...ಇತಿಹಾಸ ನಿರೂಪಿಸುವ ಆಕರಗಳಾಗಿ ಉಳಿದಿವೆ.
