H. G. Radhadevi
Publisher - ಹೇಮಂತ ಸಾಹಿತ್ಯ
Regular price
Rs. 140.00
Regular price
Rs. 140.00
Sale price
Rs. 140.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಹೆಚ್. ಜಿ. ರಾಧಾದೇವಿ
170 ಕಾದಂಬರಿಗಳ ರಚನೆಗಾರ್ತಿ ಶ್ರೀಮತಿ ಹೆಚ್.ಜಿ. ರಾಧಾದೇವಿಯವರು ಜನಿಸಿದ್ದು ಕೋಲಾರದಲ್ಲಿ. ಮೊದಲ ಕಾದಂಬರಿ 'ಸುವರ್ಣ ಸೇತುವೆ' 1975ರಲ್ಲಿ ಪ್ರಜಾಮತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಅಪಾರ ಜನಪ್ರಿಯತೆ ಪಡೆಯಿತು.
'ಅನುರಾಗ ಅರಳಿತು' ಡಾ|| ರಾಜ್ ಕುಮಾರ್, ಮಾಧವಿ, ಗೀತಾ ಅಭಿನಯದಲ್ಲಿ ಹಾಗೂ 'ಸುವರ್ಣ ಸೇತುವೆ' ವಿಷ್ಣುವರ್ಧನ್, ಆರತಿ ಅಭಿನಯದಲ್ಲಿ ತೆರೆಕಂಡ ರಾಧಾದೇವಿಯವರ ಕಾದಂಬರಿ ಆಧಾರಿತ ಚಿತ್ರಗಳು.
ಅವರ ಐವತ್ತನೇ ಕಾದಂಬರಿ 'ಅಂಬರ ಚುಂಬಿತ' ಹಾಗೂ 160ನೇ ಕಾದಂಬರಿ 'ಶ್ರೀನಿವಾಸ ಕಲ್ಯಾಣ' ತರಂಗದಲ್ಲೂ, ನೂರನೇ ಕಾದಂಬರಿ 'ಬಂಗಾರದ ಕಿಡಿ' ಹಾಗೂ 150ನೇ ಕಾದಂಬರಿ 'ಹಂಸ ಉಗುಳಿದ ಹಾರ' ಕರ್ಮವೀರದಲ್ಲೂ, 'ಧರೆಗಿಳಿದ ಸೂರ್ಯ', 'ಪುಷ್ಪ ಮಂಟಪ', 'ಎಂದೋ ಕಟ್ಟಿದ ಪುಷ್ಪಮಾಲೆ' ಹಾಗೂ “ಬಂಗಾರದ ನಕ್ಷತ್ರ' ಕಾದಂಬರಿಗಳು ಮಂಗಳ ಪತ್ರಿಕೆಯಲ್ಲೂ ಪ್ರಕಟವಾಗಿವೆ.
ಇದಲ್ಲದೆ ರಾಗಸಂಗಮ, ನವರಾಗಸಂಗಮ ಹಾಗೂ ಹಂಸರಾಗ ಪತ್ರಿಕೆಗಳಲ್ಲಿ ಇವರ ಅನೇಕ ಕೃತಿಗಳು ಪ್ರಕಟವಾಗಿವೆ.
ನವೆಂಬರ್ 9, 2006ರಂದು ಈ ಮಹಾನ್ ಚೇತನ ಅಸ್ತಂಗತವಾದರೂ ತಮ್ಮ ಕೃತಿಗಳ ಮುಖಾಂತರ ಇಂದಿಗೂ ಅವರು ನಮ್ಮೆಲ್ಲರೊಡನೆ ಇದ್ದಾರೆ.