Skip to product information
1 of 2

Shivakumar

ಶಿವಾನ್ಯ

ಶಿವಾನ್ಯ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 495.00
Regular price Rs. 495.00 Sale price Rs. 495.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 447

Type - Paperback

ಬದುಕಿನ ವಿಶಿಷ್ಟ ಅನುಭವಗಳು ಮತ್ತು ಅನನ್ಯ ಸಾಧನೆಗಳು ವಿಸ್ಕೃತಿಗೆ ಸರಿಯಬಾರದೆಂಬುದು ಮನುಷ್ಯ ಸಹಜವಾದ ಕಾಳಜಿಯಾಗಿರುತ್ತದೆ. ಆ ಅನುಭವ ಮತ್ತು ಸಾಧನೆಗಳು ನಮ್ಮ ಜೀವನೋತ್ಸಾಹದ ಸೆಲೆಗಳು ಬತ್ತದಂತೆ ಕೊನೆಯವರೆಗೆ ಕಾಪಾಡುತ್ತವೆ. ಅದೇ ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅರ್ಥಪೂರ್ಣ ಕೊಡುಗೆಯಾಗಿದೆ. "ಶಿವಾನ್ಯ" ಕೃತಿಯು ಜೀವನೋತ್ಸಾಹದ ಫಲಶ್ರುತಿಯಾಗಿದೆ ಮತ್ತು ಅಂತಹದೊಂದು ಕೊಡುಗೆಯಾಗಿದೆ. ನಮ್ಮ ವೃತ್ತಿಯ ಮೇಲೆ ನಮಗೆ ಪ್ರೀತಿ, ಬದ್ಧತೆ ಇದ್ದಾಗ ಮಾತ್ರ, ನಮ್ಮ ವೃತ್ತಿ ಜೀವನದ ಅನುಭವಗಳು ನಮ್ಮ ಚಿತ್ರಪಟಲದಲ್ಲಿ ಸದಾಕಾಲ ಹಸಿರಾಗಿರುತ್ತದೆ. ಈ ಕೃತಿಯ ಪುಟಪುಟದಲ್ಲೂ ದಾಖಲಾಗಿರುವ ಕೃತಿಕಾರರ ಕೃತಿ ಬದುಕಿನ ವಿವರಗಳು ಮತ್ತು ಅನುಭವಗಳು ಅವರ ಪ್ರೀತಿಗೆ, ವೃತ್ತಿ ನಿಷ್ಠೆಗೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. 

ನಾಗರಿಕ ಸೇವೆಗಳಿಗೆ ಸೇರುವ ಮುನ್ನ ಆಗಾಧವಾದ ಸಾಹಿತ್ಯ ಪ್ರೇಮ ಮತ್ತು ಪರಿಶ್ರಮವನ್ನು ಹೊಂದಿದ್ದ ನನ್ನ ಹಲವು ಸ್ನೇಹಿತರು ನಾಗರಿಕ ಸೇವೆಗೆ ಸೇರಿದ ಮೇಲೆ ತಮ್ಮ ಸಾಹಿತ್ಯಾಸಕ್ತಿಯನ್ನು ಬತ್ತಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ. ಒಮ್ಮೆ ಹಣ, ಅಧಿಕಾರ, ಪದವಿ, ಪ್ರತಿಷ್ಠೆಗಳ ರುಚಿ ಹತ್ತಿದ ಮೇಲೆ ಸಾಹಿತ್ಯಾಭಿರುಚಿ ಯಾರಿಗೆ ತಾನೆ ರುಚಿಸುತ್ತದೆ. ಆದರೆ ಹಿರಿಯ ಕೆ.ಎ.ಎಸ್. ಅಧಿಕಾರಿ ಶಿವಕುಮಾರ್ ಅವರು ಇದಕ್ಕೆ ಅಪವಾದವಾಗುತ್ತಾರೆ. ನನಗೆ ಅವರ ಪರಿಚಯವಾದುದೇ ಅವರು ನಿವೃತ್ತರಾದ ನಂತರ ನನಗೆ ಅವರ ಮೇಲೆ ಗೌರವ ಅಭಿಮಾನಗಳು ಮೂಡಿದ್ದೇ ಅವರ ಸಾಹಿತ್ಯಾಭಿರುಚಿಯನ್ನು ಕಂಡ ನಂತರ. ಅವರು ನನ್ನ ನೆರೆಯಮನೆಯವರೆಂಬುದು ಆ ಗೌರವ ಅಭಿಮಾನಿಗಳಿಗೊಂದು ನೆಪವಾಯಿತಷ್ಟೇ.

ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಯಾವವೆಲ್ಲಾ ಪುಸ್ತಕಗಳನ್ನು ಓದಬೇಕೆಂಬುದು ಅಭ್ಯರ್ಥಿಗಳಿಗೆ ತಿಳಿದೇ ಇರುತ್ತದೆ. ಆದರೆ ಪಠ್ಯಕ್ರಮದ ಹೊರಗಿನ ಯಾವ ಪುಸ್ತಕ ಯೋಗ್ಯವೆಂದು ಯಾರಾದರೂ ಕೇಳಿದರೆ ಅವರಿಗೆ ನಾನು ಈ ಪುಸ್ತಕವನ್ನು ಶಿಫಾರಸ್ಸು ಮಾಡುತ್ತೇನೆ. ವೃತ್ತಿಗೌರವ, ನಿಷ್ಠೆ ಮತ್ತು ಬದ್ಧತೆಯಿಂದ ನಾಗರಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗೆ ಇದೊಂದು ಮಾರ್ಗದರ್ಶಿ ಕೃತಿಯಾಗಿದೆ. 

-ಡಾ. ಟಿ.ಎನ್. ವಾಸುದೇವಮೂರ್ತಿ
ಕನ್ನಡ ಸಹ ಪ್ರಾಧ್ಯಾಪಕರು ಮತ್ತು ಸಾಹಿತಿಗಳು, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ, ಬೆಳ್ಳೂರು

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)