Dr. Sham. Ba. Jois
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಶಂ.ಬಾ. ಜೋಶಿ (ಜನವರಿ ೪, ೧೮೯೬ - ಸೆಪ್ಟೆಂಬರ್ ೨೮, ೧೯೯೧) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ೪-೧-೧೮೯೬ರಲ್ಲಿ ಜನಿಸಿದರು. ೧೯೧೪ರಲ್ಲಿ ಮಲಪ್ರಭಾ ನದಿಗೆ ಮಹಾಪೂರ ಬಂದಾಗ ಗುರ್ಲಹೊಸೂರು ಜಲಮಯವಾಯಿತು. ಜೊತೆಗೆ ತಂದೆಯ ಸಾವು. ಹೀಗಾಗಿ ಜೋಶಿಯವರು ಅಜ್ಜಿಯ ಮನೆಯಾದ ಪುಣೆಗೆ ಹೊದರು. ಅಲ್ಲಿ ಲೋಕಮಾನ್ಯ ತಿಲಕರ ಪ್ರಭಾವಕ್ಕೆ ಒಳಗಾದರು. ಅಲ್ಲಿಂದ ಧಾರವಾಡಕ್ಕೆ ಮರಳಿದ ಜೋಶಿಯವರು ೧೯೧೯ರಲ್ಲಿ ಕನ್ನಡ ಶಿಕ್ಷಕರ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ೧೯೨೦ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶಿಕ್ಷಕರಾದರು. ೧೯೨೧ರಲ್ಲಿ ಜೋಶಿಯವರ ಮದುವೆ ಜಮಖಂಡಿಯ ಕರಂದೀಕರ ಮನೆತನದ ಸೌ. ಪಾರ್ವತಿಬಾಯಿಯವರೊಡನೆ ಜರುಗಿತು. ಚಿಕ್ಕೋಡಿಗೆ ಗಾಂಧೀಜಿ ಆಗಮಿಸಿದಾಗ ಶಂ.ಬಾ.ಜೋಶಿಯವರಿಂದ ಗಾಂಧೀಜಿಯ ಕೈಂಕರ್ಯ;ಇದರಿಂದಾಗಿ ಸರಕಾರದ ಅವಕೃಪೆ. ಜೋಶಿಯವರಿಗೆ ಉಗರಗೋಳಕ್ಕೆ ವರ್ಗಾವಣೆ. ಜೋಶಿಯವರು ಕೆಲಕಾಲದ ನಂತರ ರಾಜೀನಾಮೆ ನೀಡಿ ಧಾರವಾಡಕ್ಕೆ ಬಂದರು.
ಧಾರವಾಡದಲ್ಲಿ ೧೯೨೬-೨೭ರಲ್ಲಿ ಕರ್ನಾಟಕ ಹಾಯ್ ಸ್ಕೂಲಿನಲ್ಲಿ ಹಾಗು ೧೯೨೮ರಿಂದ ೧೯೪೬ರವರೆಗೆ ಅದೇ ಸಂಸ್ಥೆಯ ವ್ಹಿಕ್ಟೋರಿಯಾ ಹಾಯ್ ಸ್ಕೂಲಿನಲ್ಲಿ( ಈಗಿನ ವಿದ್ಯಾರಣ್ಯ ಹಾಯ್ ಸ್ಕೂಲು) ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಶಂ.ಬಾ. ಜೋಶಿಯವರ ಕೃತಿಗಳನ್ನು ಸಾಂಸ್ಕೃತಿಕ ಸಂಶೋಧನಾ ಸಾಹಿತ್ಯವೆಂದು ಕರೆಯಬಹುದು. ಮಾನವಜನಾಂಗಗಳ ನಾಗರಿಕತೆಯ ಮಜಲುಗಳನ್ನು ಅವರವರ ಭಾಷಾಪ್ರಯೋಗಗಳಲ್ಲಿ ಕಾಣಬಹುದು ಎನ್ನುವದನ್ನು ಶಂ.ಬಾ.ಜೋಶಿಯವರು ತಮ್ಮ ಸಂಶೋಧನ ಲೇಖನಗಳಲ್ಲಿ ತೋರಿಸಿಕೊಟ್ಟರು. ಜೋಶಿಯವರು ಈ ಶಾಸ್ತ್ರವಿಭಾಗವನ್ನು ಪ್ರಾರಂಭಿಸಿದ ಭಾರತೀಯರಲ್ಲಿ ಮೊದಲಿಗರು. ಇದೇ ಸಮಯಕ್ಕೆ ಯುರೋಪಿನಲ್ಲಿ ಸಹ ಈ ತರಹದ ಶಾಸ್ತ್ರವಿಭಾಗ ಪ್ರಾರಂಭವಾಯಿತು. ಆದುದರಿಂದ ಜಗತ್ತಿನಲ್ಲಿ ಇವರನ್ನು ಸಹಪ್ರಥಮರು ಎಂದು ಹೇಳಲು ಅಡ್ಡಿಯಿಲ್ಲ.
