Skip to product information
1 of 2

Ramesh Shettygar Manjeshwara

ಶಿರಾಡಿ ಘಾಟ್

ಶಿರಾಡಿ ಘಾಟ್

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 128

Type - Paperback

ಭಯಪಡಿಸಲೆಂದೇ ಬರೆದ ಕಥೆಗಳು...!

2019ರಲ್ಲಿ "ಶಿರಾಡಿ ಘಾಟ್" ಎಂಬ ಸಣ್ಣಕಥೆ ಭಯಂಕರ ವೈರಲ್ ಆದಾಗ ನಾನು ಓದಿ ಬೆಚ್ಚಿ ಬೆರಗಾಗಿದ್ದೆ. ರಾತ್ರಿಯ ಹೊತ್ತು ಬಿಡಿ, ಹಗಲಲ್ಲೇ ಶಿರಾಡಿ ಘಾಟ್‌ನಲ್ಲಿ ಪಯಣಿಸಲು ಭಯವಾಗುತಿತ್ತು. ಅದೇ ಧಾಟಿಯಲ್ಲೇ ಬರೆದ "ಅಂಧಕಾರದಲ್ಲೊಂದು ಪಯಣ" ಕಥೆ ನಾನು ಕಾರಿನಲ್ಲಿ ಒಬ್ಬನೇ ಇದ್ದಾಗ ಓದಿ ಆ ಕಥಾನಾಯಕ ನನ್ನ ಮೈಯಲ್ಲೇ ಬಂದ ಹಾಗೆ ಆಯಿತು. ಹೀಗೆ ಹನ್ನೆರಡು ಕಥೆಗಳು ಒಂದಕ್ಕೊಂದು ವಿಭಿನ್ನವಾಗಿ ಭಯಂಕರವಾಗಿದೆ.

ಸಾಮಾನ್ಯವಾಗಿ ಹಾರರ್ ಕಥೆಗಳಲ್ಲಿ ವೈವಿಧ್ಯತೆ ತರುವುದು ಅಷ್ಟು ಸುಲಭವಲ್ಲ. ಆದರೆ ಈ ಕಥಾಸಂಕಲನದಲ್ಲಿ ಲೇಖಕರು ವೈವಿಧ್ಯದ ಜೊತೆಗೆ ಕೆಲವೆಡೆ ತಿಳಿಹಾಸ್ಯ ಸಿಂಪಡಿಸಿ. ಇನ್ನು ಕೆಲವು ಕಥೆಗಳಲ್ಲಿ ಹಾಂಟೆಡ್ ಸ್ಥಳಗಳ ಮಾಹಿತಿಗಳನ್ನು ನೀಡಿದ್ದಾರೆ. ಹಾರರ್ ಡಾರ್ಕ್ ಕಾಮಿಡಿ ಎಂಬ ಹೊಸ ಜಾನರ್ ಅನ್ನು ಕನ್ನಡಕ್ಕೆ ನೀಡುವ ಹಲವು ಕಥೆಗಳು ಇಲ್ಲಿವೆ. ಅಪೂರ್ಣ ಸತ್ಯ, ಮದನಿಕೆ. ಹಾಂಟೆಡ್ ಹೊಸಮನೆ ಹಾಗೂ ಎರಡನೇ ದೇವರು ಕೃತಿಗಳ ಮೂಲಕ ಈಗಾಗಲೇ ಕೌತುಕಮಯ ಕಥನ-ಕೃತಿಗಳನ್ನು ನೀಡಿದ ಶ್ರೀ ರಮೇಶ್ ಶೆಟ್ಟಿಗಾರರು "ಶಿರಾಡಿ ಘಾಟ್" ಕಥಾಸಂಕಲನದ ಮೂಲಕವೂ ಓದುಗರನ್ನು ಕಥೆಯೊಳಗೆ ಹಿಡಿದಿಟ್ಟುಕೊಂಡು ರೋಮಾಂಚನಗೊಳಿಸುವಲ್ಲಿ ಸಂದೇಹವಿಲ್ಲ,

ಭಯಪಡಿಸಲೆಂದೇ ಅವರು ಬರೆದ ಕಥೆಗಳು ಓದುಗರನ್ನು ಬೆರಗುಗೊಳಿಸುವಲ್ಲಿ ಯಶಸ್ವಿಯಾಗಲಿ ಹಾರೈಕೆಯೊಂದಿಗೆ. ఎంబ

-ವಿಠಲ್ ಶೆಣೈ (ಖ್ಯಾತ ಕಾದಂಬರಿಕಾರರು)

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)