K. G. Krupal
ಷೇರು ಸಂಜೀವಿನಿ
ಷೇರು ಸಂಜೀವಿನಿ
Publisher -
- Free Shipping Above ₹250
- Cash on Delivery (COD) Available
Pages - 276
Type - Paperback
ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಮೋಕ್ಷದಷ್ಟೇ ಮಹತ್ವದ ಸ್ಥಾನವನ್ನೂ ಅರ್ಥಕ್ಕೂ ನಮ್ಮ ಪೂರ್ವಸೂರಿಗಳು ನೀಡಿದ್ದಾರೆ.
'ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯ' ಎಂದಿದ್ದಾರೆ ವಾದಿರಾಜ ಸ್ವಾಮಿಗಳು. ಹಾಗಾಗಿ ಸಮಕಾಲೀನ ಪ್ರಪಂಚದಲ್ಲಿ ಅರ್ಥ ಸಂಪಾದನೆಯ ಅರಿವಿಲ್ಲದಿದ್ದರೆ ಅನರ್ಥ ಸಂಭವ ಸುಲಭ ಸಾಧ್ಯ. ಆಧುನಿಕ ಜಗತ್ತಿನಲ್ಲಿ ಧನ ಸಂಪಾದನೆಗೆ ಸಾವಿರಾರು ದಾರಿಗಳು ಸೃಷ್ಟಿಯಾಗಿವೆ. ಆದರೆ ಧನ ಸಂಪಾದನೆ ನ್ಯಾಯ ಸಮ್ಮತವಾಗಿರಬೇಕು. ಶಿವ ಮೆಚ್ಚಿ ಅಹುದಹುದು ಎನಬೇಕು. ಪ್ರಸ್ತುತ ಕಾರ್ಪೊರೇಟ್ ಜಗತ್ತು ಅಂತಹ ಸುವರ್ಣಾವಕಾಶವನ್ನು ವಿಶೇಷವಾಗಿ ಒದಗಿಸಿಕೊಟ್ಟಿದೆ. ಬಲ್ಲವರಿಗೆ, ಮೇಧಾವಿಗಳಿಗೆ. ಅರ್ಥಜ್ಞರಿಗೆ ಇಲ್ಲಿ ಅದ್ಭುತ ಅವಕಾಶಗಳಿವೆ. ಈ ಸಾಧ್ಯತೆಗಳ, ಅವಕಾಶಗಳ ಸಮಗ್ರ ವಿಶ್ಲೇಷಣೆ, ಪರಿಚಯ, ರೀತಿ ನೀತಿಗಳು, ಷೇರುಪೇಟೆಯ ವಿಧಿ ವಿಧಾನಗಳು, ಬಂಡವಾಳ ಬೆಳೆಸಬಲ್ಲ ಗಟ್ಟಿ ಕುಳಗಳನ್ನು ಆಯ್ಕೆ ಮಾಡುವ ಕ್ರಮ, ಈ ಎಲ್ಲ ವಿಚಾರ ವೈಶಿಷ್ಟ್ಯಗಳನ್ನು ತಮ್ಮ ಅನುಭವ ಸಂಹಿತೆಯ ಮಾತುಗಳ ಒಂದು ಅದ್ಭುತ ಕೋಶವನ್ನಾಗಿ ಮಾಡಿ 'ಷೇರುಪೇಟೆ ಸಂಜೀವಿನಿ' ಗ್ರಂಥವನ್ನು ನಮ್ಮ ನಾಡಿನ ಶ್ರೇಷ್ಠ ಹಾಗೂ ಹಿರಿಯ ಷೇರುಪೇಟೆ ತಜ್ಞರಾದ ಶ್ರೀ ಕೃಪಾಲ್ ಅವರು ನಾಡಿನ ಹೂಡಿಕೆದಾರರಿಗೆ ಸಮರ್ಪಿಸಿದ್ದಾರೆ.
ತಮ್ಮ ದಶಕಗಳ ದಶಕದಶಕಗಳ ಷೇರುಪೇಟೆಯ ಒಳಗಿನ ಹೂರಣ, ಹೊರಗಿನ ತೋರಣ, ಈ ಎರಡರ ಸಮಗ್ರ ಅನುಭವವಿರುವ ಕೃಪಾಲ್ ಆ ಅನುಭವದ ರಸಪಾಕವನ್ನು ಈ ಕೃತಿಯಲ್ಲಿ ಓದುಗರಿಗೆ ನೀಡಿದ್ದಾರೆ. ಅವರ ಈ ಪುಸ್ತಕ ಹೂಡಿಕೆದಾರರ ಪಾಲಿನ ಬೈಬಲ್‌ನಂತಿದೆ. ಇದೊಂದು ಹಣ ಹೂಡಿಕೆ ಪ್ರಪಂಚದ, ಷೇರುಪೇಟೆಯ ವಿಶ್ವಕೋಶವೆಂದರೂ ತಪ್ಪಿಲ್ಲ. ಷೇರುಪೇಟೆಗೆ ಸಂಬಂಧಿಸಿದ ಹಾಗೂ ವಿವಿಧ ಹೂಡಿಕೆ ಯೋಜನೆಗಳ ಚಿಂತನೆ ಇರುವ ಪ್ರತಿಯೊಬ್ಬರಿಗೂ ಇದು ಮಾರ್ಗದರ್ಶಕ ಕೃತಿಯಾಗಿ ಮೂಡಿಬಂದಿದೆ.
ಹೊಸದಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಬಯಸುವವರು, ತಮ್ಮ ಹಣವನ್ನು ವಿವಿಧ ಅವಕಾಶ ಸಾಧ್ಯತೆಗಳಲ್ಲಿ ತೊಡಗಿಸುವ ಮುಂಚೆ ಒಮ್ಮೆ ಈ ಪುಸ್ತಕ ಓದಿ ಮನನ ಮಾಡಿದ್ದರೆ ಅವರಿಗೆ ತುಂಬಾ ಪ್ರಯೋಜನವಾಗುತ್ತದೆ.
ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ M.com., MBA., M.phil., Phd., D.LITT
Share
Subscribe to our emails
Subscribe to our mailing list for insider news, product launches, and more.