Skip to product information
1 of 2

Pradeep Beluru

ಶತ್ರುಘ್ನ

ಶತ್ರುಘ್ನ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 107

Type - Paperback

ವಾಲ್ಮೀಕಿ ರಾಮಾಯಣದಲ್ಲಿ ಶತ್ರುಘ್ನನ ಪಾತ್ರ ಅಷ್ಟೊಂದು ಮಹತ್ವವನ್ನು ಪಡೆದಿಲ್ಲ. ರಾಮನ ಕಡೆಯ ತಮ್ಮನಾಗಿ, ರಾಮಲಕ್ಷ್ಮಣರು ಕಾಡಿಗೆ ಹೋದ ಮೇಲೆ, ಭರತ ನಂದಿಗ್ರಾಮದಲ್ಲಿ ನಿಂತಮೇಲೆ ಅನಿವಾರ್ಯವಾಗಿ ಆಯೋಧ್ಯೆಯ ಆಡಳಿತವನ್ನು ನಿರ್ವಹಿಸಿದನೆಂಬಷ್ಟು ಮಾತ್ರ ವಿವರ ಅಲ್ಲಿ ದೊರೆಯುತ್ತದೆ. ಆದರೆ ಸಹೋದರ ಶ್ರೀ ಪ್ರದೀಪ್ ಬೇಲೂರು ಅವರು ಮಹಾಕಾವ್ಯದಲ್ಲಿ ಮರೆಯಾದ ಶತ್ರುಘ್ನನ ವ್ಯಕ್ತಿತ್ವದ ಚಿತ್ರಣವನ್ನು ತಮ್ಮ ಈ 'ಶತ್ರುಘ್ನ' ಕಾದಂಬರಿಯಲ್ಲಿ ಆದಷ್ಟು ಸಮರ್ಥವಾಗಿಯೂ, ಪ್ರಾಮಾಣಿಕವಾಗಿಯೂ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಶತ್ರುಘ್ನನ ಅಂತರಂಗದ ಒಳಹೊಕ್ಕು ನೋಡಲು ಯತ್ನಿಸಿದ್ದಾರೆ.

ಶತ್ರುಘ್ನನ ಮನೋಗತದ ಮೂಲಕವೇ, ಅವನ ಹಾಗೂ ಸರಯೂ ನದಿಯ ಒಡನಾಟ, ಅಣ್ಣಂದಿರಲ್ಲಿ ಭರತನಿಗೆ ಹೆಚ್ಚು ಅಂಟಿಕೊಂಡ ಪರಿ, ಶೃತಕೀರ್ತಯೊಂದಿಗಿನ ಸರಸ ಸಲ್ಲಾಪಗಳು, ಬಲಿದ ಹಾಗೂ ಲವಣಾಸುರರೊಂದಿಗಿನ ಕದನ, ರಾಮಲಕ್ಷ್ಮಣರು ಹಾಗೂ ಭರತ ಮೂವರೂ ಆಯೋಧ್ಯೆಯನ್ನು ಅನಿವಾರ್ಯ ಕಾರಣಗಳಿಂದ ಬಿಟ್ಟು ಹೋದಾಗ, ತಾನೊಬ್ಬನೇ ಅರಮನೆಗೆ ಗಂಡು ದಿಕ್ಕಾಗಿ, ಇತ್ತ ತಾಯಂದಿರು, ಅತ್ತಿಗೆಯರು, ಮಡದಿ ಎಲ್ಲರನ್ನೂ ಸಂತೈಸುತ್ತಾ, ಅತ್ತ ಶತ್ರುಗಳಿಂದಲೂ ಆಯೋಧ್ಯೆಯನ್ನು ರಕ್ಷಿಸಿಕೊಂಡು, ಪ್ರಜೆಗಳನ್ನೂ ಸೌಖ್ಯದಿಂದ ಪಾಲಿಸಿದ ಬಗೆ, ರಾಮನಾಗಮನ ನಂತರದಲ್ಲಿ ಮಧುಪುರಕ್ಕೆ ಅರಸನಾಗಿ ಆಳಿದ ಪರಿ, ಅಶ್ವಮೇಧಯಾಗದ ಸಂದರ್ಭದಲ್ಲಿ ಯಾಗಾಶ್ವದ ಹಿಂದೆ ಅಲೆದು ಆನೇಕ ರಾಜರುಗಳೊಂದಿಗೆ ಸೆಣಸಿದ ಸಾಹಸದ ಕಥೆಗಳು ಎಲ್ಲವೂ ನಿರೂಪಿತವಾಗಿವೆ. ಪೌರಾಣಿಕ ಕಥೆಯನ್ನು ಆಧರಿಸಿ ಬರೆದರೂ, ಅದನ್ನು ಬೆಳೆಸಲು, ನಿರೂಪಿಸಲು ಕಲ್ಪನಾಶಕ್ತಿಯೂ ಅಗತ್ಯವಾಗಿ ಬೇಕಾಗುತ್ತದೆ. ಅದು ಲೇಖಕರಿಗೆ ಇದೆ. ಭಾಷೆ ಶೈಲಿಗಳು ಚೆನ್ನಾಗಿವೆ. ಸಾಕಷ್ಟು ಅಧ್ಯಯನದ ಹಿನ್ನೆಲೆಯಲ್ಲಿ ಈ ಕೃತಿಯನ್ನು ರಚಿಸಿದ್ದಾರೆ. ಕೇಕೆಯ ರಾಜ್ಯದಿಂದ ಕೋಸಲಕ್ಕೆ ಭರತ ಶತ್ರುಘ್ನರು ಪಯಣಿಸುವ ಸಂದರ್ಭದಲ್ಲಿ ಕಾದಂಬರಿಕಾರರು ಕೊಡುವ ಮಾರ್ಗದ ನಕ್ಷೆಯ ವಿವರಗಳೇ ಇದಕ್ಕೆ ಸಾಕ್ಷಿ! ಇಂತಹ ಕಾದಂಬರಿಯನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಪ್ರದೀಪ್‌ ಬೇಲೂರು ಅವರು ಅಭಿನಂದನಾರ್ಹರು, ಅವರಿಂದ ಇನ್ನಷ್ಟು ಉತ್ತಮ ಕೃತಿಗಳು ಬರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ.

-ಆಶಾ ರಘು
ಕಾದಂಬಗಾರ್ತಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)