Skip to product information
1 of 1

Translated by G. Venkatasubbaiah

ಶಂಕರಾಚಾರ್ಯ

ಶಂಕರಾಚಾರ್ಯ

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 94

Type - Paperback

ಕನ್ನಡದ ಪ್ರಮುಖ ಸಂತಕವಿಗಳಲ್ಲಿ ಒಬ್ಬರಾದ ಕನಕದಾಸರ ಜೀವನಚರಿತ್ರೆಯಿದು. ಭಾರತದಲ್ಲಿ ಜನ್ಮ ತಾಳಿದ ಮಹಾಮಹಿಮರ ಪೈಕಿ ಶ್ರೀ ಶಂಕರಾಚಾರ್ಯರು ಅಗ್ರಗಣ್ಯರು, ಅವರ ಜೀವನವು ಆಶ್ಚರ್ಯಕರವಾದ ಆನೇಕ ಬೌದ್ಧಿಕ ಮತ್ತು ದೈಹಿಕ ಸಾಧನೆಗಳ ಕಥೆಯಾಗಿದೆ. ಒಂದು ಪವಾಡವಾಗಿದೆ. ಭಾರತೀಯ ವೇದಾಂತದ ಇತಿಹಾಸದಲ್ಲಿ ಶಂಕರರ ಸ್ಥಾನ ಶಾಶ್ವತವೂ ಉನ್ನತವೂ ಆದುದು, ರಾಮೇಶ್ವರ, ಕನ್ಯಾಕುಮಾರಿಗಳಿಂದ ಬದರಿ, ಕೇದಾರಗಳವರೆಗೆ ಸಂಚಾರ ಮಾಡಿ, ಪ್ರಾಚೀನ ಧರ್ಮವನ್ನು ಪುನಃ ಸ್ಥಾಪನೆ ಮಾಡಿ, ಕಾಲಕ್ರಮದಲ್ಲಿ ಅದರೊಳಕ್ಕೆ ಸೇರಿಕೊಂಡಿದ್ದ ಅನವಶ್ಯವಾದ ಅನುಚಿತಗಳನ್ನು ನಿರ್ಮೂಲ ಮಾಡಿ, ಧರ್ಮದ ಚೈತನ್ಯವನ್ನು ಜೀರ್ಣೋದ್ದಾರ ಮಾಡಿದರು, ಯಾವ ಸಂದೇಶ ಪ್ರಚಾರಕ್ಕಾಗಿ ಅವರು ಜನ್ಮ ತಾಳಿದರೋ ಅದನ್ನು ಅವರು ತಮ್ಮ ಬಾಲ್ಯದಲ್ಲೇ ನೀಡಲು ಪ್ರಾರಂಭಿಸಿದರು. ಅವರ ಗ್ರಂಥಗಳಲ್ಲಿ ಅಳವಾದ ಚಿಂತನೆಯೂ ವಿಶ್ಲೇಷಣಾ ಚಾತುರ್ಯವೂ ಕಂಡು ಬರುತ್ತದೆ.

ಶಾಂಕರ ಸಿದ್ಧಾಂತದ ಬಗ್ಗೆ ಹೆಚ್ಚು ಅಧ್ಯಯನ ಕೈಗೊಂಡ ಪದ್ಮಭೂಷಣ ಟಿ.ಎಂ.ಪಿ. ಮಹಾದೇವನ್ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಶಂಕರರ ಜೀವನ ಚರಿತ್ರೆಯನ್ನು ಸರಳ ರೂಪದಲ್ಲಿ ನಿರೂಪಿಸಿದ್ದಾರೆ. ಅವರ ಗ್ರಂಥಗಳಿಂದ ಆಯ್ದ ಕೆಲವು ಭಾಗಗಳನ್ನೂ ಸಹ ಇದರಲ್ಲಿ ನೀಡಲಾಗಿದೆ.

ಪ್ರಸಿದ್ಧ ಲೇಖಕ ಶ್ರೀ ಜಿ. ವೆಂಕಟಸುಬ್ಬಯ್ಯನವರು ಈ ಪುಸ್ತಕವನ್ನು ಅನುವಾದಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)