Skip to product information
1 of 2

Kondalli Prabhakara Shetty

ಸಾರ್ಥಕ ಜೀವನಕ್ಕೆ ಕಗ್ಗೋಪದೇಶ

ಸಾರ್ಥಕ ಜೀವನಕ್ಕೆ ಕಗ್ಗೋಪದೇಶ

Publisher -

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 176

Type - Paperback

'ಕಗ್ಗ' ಎಂದರೆ ತತ್ರೋಪದೇಶ. ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅವರ 'ಸಾರ್ಥಕ ಜೀವನಕ್ಕೆ ಕಗ್ಗೋಪದೇಶ' ಎಂಬೀ ಕೃತಿ 'ಗುರೂಪದೇಶ' ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಸಾಹಿತ್ಯ ಸಂಘಟಕರೂ, ಉಪನ್ಯಾಸಕರೂ ಆಗಿರುವ ಕೊಂಡಳ್ಳಿ ಸರ್ ಅವರು ಕಳೆದ ಕೆಲವು ದಶಕಗಳಿಂದ 'ಕಗ್ಗ' ಎಂಬ ಪರಮಸತ್ಯವಾದ 'ದೇವ' ನನ್ನು ಉಣಬಡಿಸುತ್ತಿರುವವರು. ಹಾಗಾಗಿ ಈ ಕೃತಿಯೊಂದು 'ಮಹಾಪ್ರಜ್ಞಾ ದರ್ಶನ' ರಾಗರಸ ಝೇಂಕಾರ. ಕೊಂಡಳ್ಳಿ ಪ್ರಭಾಕರ ಶೆಟ್ಟಿ ಎನ್ನುವ ಸಾಧಕನು ಕಗ್ಗಧ್ಯಾನಸ್ಥನಾಗಿ ಬಿತ್ತರಿಸಿದ ಬದುಕ ಮಹಾಸತ್ಯ ತೋರಿದ ಆತ್ಮವಿದ್ಯೆ.

ಮಹಾಸಂತ ಡಿವಿಜಿಯವರ, "ಗೌರವಿಸು ಜೀವನವ, ಗೌರವಿಸು ಚೇತನವ। ಆರದೋ ಜಗವೆಂದು ಭೇದವೆಣಿಸದಿರು ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ ದಾರಿಯಾತ್ರೋನ್ನತಿಗೆ" ಎಂಬ ನುಡಿ ಅವರ ಸಿದ್ದಾಂತದ ಅಕ್ಷರರೂಪ. ನಾವಿದನ್ನು ಬಹುತೇಕ ಎಲ್ಲ ಕಗ್ಗಗಳಲ್ಲೂ ಕಾಣಬಹುದು.

ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸರ್ ಅವರು ತಮ್ಮ ಕಗ್ಗ ವ್ಯಾಖ್ಯಾನದಲ್ಲಿ "ಬದುಕಿನ ಸರ್ವಶ್ರೇಷ್ಠ ಮೌಲ್ಯವಾದ ಕೃತಜ್ಞತೆಯನ್ನು ಮೈಗೂಡಿಕೊಂಡಾಗ ಜೀವನ ಸಾರ್ಥಕ" (೦೩), "ಬದುಕಿನಲ್ಲಿ ನಾವು ಯಾವುದಕ್ಕೂ ಅಂಟಿಕೊಳ್ಳದೆ ಮುಕ್ತರಾದಾಗ ಜೀವನ ಸಾರ್ಥಕ" (೧೨), “ಅತೃಪ್ತಿಯಿಂದ ಕೊರಗುವುದನ್ನು ಬಿಟ್ಟು ಸಂತೃಪ್ತಿ ಮತ್ತು ನೆಮ್ಮದಿಯಿಂದ ಬದುಕುವುದೇ ಜೀವನದ ಸಾರ್ಥಕತೆ” (೨೫), "ನಾನು ಅನ್ನುವುದನ್ನು ಮರೆತು ನಾವಾಗಿ ಎಲ್ಲರೊಂದಿಗೆ ಬೆರೆತು ಬಾಳಿದಾಗಲೆ ಜೀವನ ಸಾರ್ಥಕ" (೧೧೩) ಅನ್ನುತ್ತ ಈ ಪ್ರಪಂಚದ ಕೊಳೆ ತುಂಬಿದ ಮನಸ್ಸನ್ನು ತೊಳೆಯುವಲ್ಲಿ ಮುಂದಾಗಿದ್ದಾರೆ.

ಈ ಕೃತಿಯಲ್ಲಿ ಡಿವಿಜಿಯವರೊಡನೆ ಪುರಂದರದಾಸರು, ಸರ್ವಜ್ಞ, ಡಾ.ಜಿ.ಎಸ್.ಶಿವರುದ್ರಪ್ಪ, ಕೆ.ಶಿವಪ್ಪ, ವಸಂತ ಕುಷ್ಟಗಿ, ಕುವೆಂಪು, ನಿಜಗುಣರು, ಕಬೀರದಾಸ, ಕಾಳಿದಾಸ, ಎಸ್.ವಿ. ಪರಮೇಶ್ವರ ಭಟ್ಟ ಮೊದಲಾದವರನ್ನು ಪರಿಚಯಿಸಿ ಗುರು(ಶಿಕ್ಷಕ) ಪದದ ನಾನಾರ್ಥವನ್ನು ಮನಗಾಣಿಸಿದ್ದಾರೆ ಜ್ಞಾನಜ್ಯೋತಿಯೆನಿಸಿದ ಶ್ರೇಷ್ಠ ಆಚಾರಪುರುಷರಾಗಿ ಕಂಗೊಳಿಸುತ್ತಿದ್ದಾರೆ.

ಗುರು ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅವರ 'ಸಾರ್ಥಕ ಜೀವನಕ್ಕೆ ಕಗ್ಗೋಪದೇಶ' ಕೇವಲ ಕೃತಿಯಲ್ಲ, 'ಕಗ್ಗೋತ್ಥಾನ' ನಮ್ಮ ರಾಗಾದಿ ಬಂಧನಗಳಿಂದ ಬಿಡುಗಡೆ ತೋರುವ ಸುಜ್ಞಾನ ಬೀಜದ ಸತ್ಸಂಗ. ಮಾನಸಿಕ ನೆಮ್ಮದಿಗೆ ಪೂರಕ ವಾತಾವರಣ ಕಲ್ಪಿಸುವ ಸುಜ್ಞಾನ ಸುಧೆ, ನಮಗೆ ನಮ್ಮ ಬದುಕಿನಲ್ಲಿ ಸಮಾಧಾನ. ಸಂತೃಪ್ತಿ, ಸಂತೋಷ, ಸಮಭಾವದಿಂದ ಇರುವಾಸೆಯ ಸುಖೀ ಸೂತ್ರವೇ 'ಸಾರ್ಥಕ ಜೀವನಕ್ಕೆ ಕಗ್ಗೋಪದೇಶ' ವೆನುವ ಸುಕೃತಿ.

ತಮ್ಮೀ ಕೃತಿಯಿಂದ ನಮ್ಮಲ್ಲಿನ ಪ್ರತ್ಯಗಾತ್ಮವನ್ನು ಪ್ರಚೋದಿಸಿದ ಗುರು ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅವರಿಗೆ ಹಾರ್ದಿಕ ಅಭಿನಂದನೆಗಳು.

-ಡಾ. ಪ್ರದೀಪ್ ಕುಮಾರ್ ಹೆಬ್ರಿ 
ಇಪ್ಪತ್ತು ಮಹಾಕಾವ್ಯಗಳ ಕರ್ತೃ, ಮಂಡ್ಯ ಅಲ್ಲಿಗೆ ಪತ್ತೇದಾರ ರಾಜಧಾನಿಯ ಆಗಮನ. 

 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)