Skip to product information
1 of 1

Fakir Mohammad Kattadi

ಸರಕುಗಳು

ಸರಕುಗಳು

Publisher - ನವಕರ್ನಾಟಕ ಪ್ರಕಾಶನ

Regular price Rs. 75.00
Regular price Sale price Rs. 75.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type - Paperback

ಜಗತ್ತಿನ ಮನುಷ್ಯರೆಲ್ಲರೂ ಮುಗ್ಧರಾಗಿರುತ್ತಿದ್ದರೆ ಆಗ ಅವರಿಗೆ ಕಾನೂನು, ಪೊಲೀಸು, ನ್ಯಾಯಸ್ಥಾನ ಇವು ಯಾವುದರ ಅಗತ್ಯವೂ ಇರಲಾರದು. ಜನರು ಬುದ್ಧಿವಂತರಾದಂತೆಯೇ ತಮ್ಮೊಳಗೆ 'ವ್ಯವಸ್ಥೆ'ಯೊಂದನ್ನು ರೂಪಿಸಿಕೊ೦ಡು, ಬಳಿಕ ಅದರೊಳಗೆ ಸಿಲುಕಿ ಚಡಪಡಿಸುತ್ತಾರೆ. ಈ ನಡುವೆ ಬಲಿಷ್ಠರಾದವರು ತಮಗನುಕೂಲವಾಗುವಂತೆ ನ್ಯಾಯ-ಅನ್ಯಾಯಗಳ ಪಟ್ಟಿ ಸಿದ್ಧಪಡಿಸಿ ಸಾರ್ವಜನಿಕರಿಗಾಗಿ ಬಿಡುಗಡೆ ಗೊಳಿಸುತ್ತಾರೆ. ಕುಟ್ಟಿಚ್ಚಿರಾದರೂ ಆದದ್ದೂ ಇದುವೇ. ತಮ್ಮ ಮರಬಿದಿರಿನ ವ್ಯಾಪಾರದಲ್ಲಿ ಅರಬ್ ಸ್ಥಾನದ ಬಂಗಾರ ಬೇಟೆ ಆರಂಭಿಸಿದ್ದ ಸಾಹುಕಾರರು ಒಂದು ಕಡೆಯಾದರೆ, ತಮ್ಮ ಹೊಟ್ಟೆಪಾಡಿಗಾಗಿ ಸಾಹುಕಾರರುಗಳ ಎದುರು ಹಲ್ಲುಗಿಂಜುತ್ತಾ, ಅವರ ಅರಬ ಗಿರಾಕಿಗಳ ಸಲುವಾಗಿ ಹೆಣ್ಣು ಪೂರೈಸುವ ದಲ್ಲಾಳಿಗಳು ಮತ್ತೊಂದು ಕಡೆ, ತಮ್ಮ ನಾಡಿನಲ್ಲಿ 'ಮಹರ್' ನೀಡಲಾಗದೆ ಮದುವೆಗಾಗಿ ಕಾತರಿಸುವ ಅರಬಿ ಗಂಡುಗಳು ಒಂದು ಕಡೆಯಾದರೆ, ಇಲ್ಲಿ ವರದಕ್ಷಿಣೆ ಕಾಟದಿಂದಾಗಿ ಮದುವೆ ಬಗ್ಗೆ ಕನವರಿಸಲೂ ಭಯಪಡುವ ಹೆಣ್ಣುಗಳು ಇನ್ನೊಂದು ಕಡೆ – ಈ ಹೋರಾಟದಲ್ಲಿ ಯಾರು ಗೆದ್ದರು, ಯಾರು ಸೋತರು ಎಂಬುದಾಗಲೀ, ಯಾರು ಸರಿ ಯಾರು ತಪ್ಪು ಎಂಬುದಾಗಲೀ ಮುಖ್ಯವಲ್ಲ. ತಾವೇ ರೂಪಿಸಿದ 'ವ್ಯವಸ್ಥೆ'ಯ ಸೂತ್ರದಲ್ಲಿ ತಾವೇ ಬಂಧಿಯಾದವರು ಈ ಎಲ್ಲರೂ ಗೆಳೆಯ ಕಟ್ಟಾಡಿಯವರು ತಮ್ಮ ಸರಕುಗಳು' ಕಾದಂಬರಿಯಲ್ಲಿ ಶೋಧಿಸ ಹೊರಟಿದ್ದು, ಈ ಸಿಕ್ಕುಗಟ್ಟಿದ ಸೂತ್ರವನ್ನೇ.

- ಬೊಳುವಾರು ಮಹಮದ್ ಕುಂಞ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)