ಡಾ. ಎಸ್. ಆರ್. ರಾವ್
Publisher: ಅಂಕಿತ ಪುಸ್ತಕ
Couldn't load pickup availability
ಮಹಾಭಾರತದ ಮೂಲಬಿಂದು ಶ್ರೀಕೃಷ್ಣ. ಕೃಷ್ಣನ ಪಾತ್ರ ಭಾರತದುದ್ದಕ್ಕೂ ಹಾಸು ಹೊಕ್ಕಾಗಿದೆ. ಈ ವಾಸುದೇವ ಕೃಷ್ಣನು, ದ್ವಾರಕಾನಗರಿಯನ್ನು ಸಮುದ್ರದಲ್ಲಿ ನಿರ್ಮಿಸಿ, ಯಾದವರೊಂದಿಗೆ ವಾಸಿಸುತ್ತಿದ್ದನೆಂದೂ, ಈ ದ್ವಾರಕೆಯು ನಂತರ ಸಮುದ್ರದಲ್ಲಿ ಮುಳುಗಿ ಹೋಯಿತೆಂದೂ, ಮಹಾಭಾರತ ಹೇಳುತ್ತದೆ.
ಈ ಘಟನೆಯ ಸತ್ಯಾಸತ್ಯತೆ ಎಷ್ಟು? ಕೃಷ್ಣನು ನಿಜವಾಗಿಯೂ ಐತಿಹಾಸಿಕ ವ್ಯಕ್ತಿಯೇ? ಅಥವಾ ಕವಿ ನಿರ್ಮಿತ ಕಾವ್ಯದ ಕಥಾನಾಯಕನೇ? ಕೃಷ್ಣ ನಿಜವಾಗಿ ಐತಿಹಾಸಿಕ ವ್ಯಕ್ತಿಯಾಗಿದ್ದರೆ, ಆತ ಬದುಕಿದ್ದನೆನ್ನಲಾದ ಕಾಲ ಯಾವುದು? ಯಾವ ಕಾರಣದಿಂದ ಅಂದಿನ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು ಸಿಗದೆ ಕಣ್ಣುಮುಚ್ಚಾಲೆಯಾಡುತ್ತಿವೆ? ಕೃಷ್ಣನ ಇರುವು ನಿಜವಾದರೆ ಕೃಷ್ಣನ ದ್ವಾರಕೆ ಯಾವುದು? ಮುಂತಾದ ಪ್ರಶ್ನೆಗಳು ಏಳುವುದು ಸಹಜ.
ಆ ನಿಟ್ಟಿನಲ್ಲಿ ಕೈಗೊಂಡ ವೈಜ್ಞಾನಿಕ ಸಮುದ್ರೀಯ ಪುರಾತತ್ವೀಯ ಉತ್ಖನನದ ಮಹತ್ವದ ಸಾಧನೆಯನ್ನು ಹೇಳುವುದೇ ಈ ಗ್ರಂಥದ ಉದ್ದೇಶ. 1980ರಿಂದ ಈಚೆಗೆ ಹಲವಾರು ಅಭಿಯಾನಗಳನ್ನು ನಡೆಸಿ ಸಮುದ್ರೀಯ ಪುರಾತತ್ವ ತಜ್ಞರು, ಆಧಾರಭೂತವಾಗಿ ದ್ವಾರಕೆಯ ಅವಶೇಷಗಳನ್ನು ಬೆಳಕಿಗೆ ತಂದಿದ್ದಾರೆ. ಆ ಮಹತ್ವದ ಸಾಧನೆ ಹೇಗೆ ಬೀಜವಾಗಿ ಹುಟ್ಟಿತು? ಹೇಗೆ ಮೊಳೆತು ಫಲಿಸಿತು? ಸಾಧನೆಯ ಮಾರ್ಗದ ತೊಡಕು ತೊಡರುಗಳೇನು ? ಎನ್ನುವ ಎಲ್ಲ ವಿಷಯಗಳನ್ನೂ ಸಂಕ್ಷಿಪ್ತವಾಗಿ ತಿಳಿಸುವುದೇ ಈ ಗ್ರಂಥದ ಉದ್ದೇಶ.
