ಸಮಗ್ರ ಸಂಶೋಧಕ ಎಂ ಎಂ ಕಲಬುರ್ಗಿ

ಸಮಗ್ರ ಸಂಶೋಧಕ ಎಂ ಎಂ ಕಲಬುರ್ಗಿ

ಮಾರಾಟಗಾರ
ಮೃತ್ಯುಂಜಯ ರುಮಾಲೆ
ಬೆಲೆ
Rs. 200.00
ಕೊಡುಗೆಯ ಬೆಲೆ
Rs. 200.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಸತ್ಯಕ್ಕೆ ಬದ್ಧರಾದವರು, ಸಂಶೋಧಕರು, ಕವಿ ಮತ್ತು ವಿಮರ್ಶಕರೆಂದು ಜನಪ್ರಿಯವಾದ ಸಾಹಿತಿಗಳ ಬರವಣಿಗೆ ಜನದೂಷಣೆಗೆ ಗುರಿಯಾಗುವುದೇ ಹೆಚ್ಚು. ಅಂಥ ಸಂದರ್ಭಗಳಲ್ಲಿ ತಾನು ಅನುಭವಿಸಿದ ಹಿಂಸೆ, ದೌರ್ಜನ್ಯಗಳನ್ನು ಮರೆತು ಅವನು ಶೋಧವನ್ನು ಮುಂದುವರಿಸುತ್ತಲೇ ಇರುತ್ತಾನೆ. ಏಕೆಂದರೆ ಅವನಿಗೆ ಹಿಂಸೆಗಿಂತ 'ಸತ್ಯ' ದೊಡ್ಡದಾಗಿರುತ್ತದೆ. ವ್ಯತಿರಿಕ್ತ ಪರಿಸರದಲ್ಲಿ ಬಾಳಬೇಕಾಗಿ ಬಂದಾಗ ಬಳಲಲೂಬಹುದು. ಕನ್ನಡ ಶೈಕ್ಷಣಿಕ ವಲಯದಲ್ಲಿ, ಅದರಲ್ಲೂ ಸಾಹಿತ್ಯ, ಧರ್ಮ, ಸಮಾಜ ಮೊದಲಾದ ಕ್ಷೇತ್ರಗಳಲ್ಲಿ ಮಾಡಿದ ವಿವಿಧ ಸಂಶೋಧನೆಯ ಫಲವಾಗಿ ಎಂ.ಎಂ. ಕಲಬುರ್ಗಿಯವರು 'ಸಮಗ್ರ ಸಂಶೋಧಕ' ಎಂದೇ ಗುರುತಿಸಲ್ಪಟ್ಟವರು. ಅವರ ಬದುಕು-ಬದ್ಧತೆ-ಸಂಶೋಧನೆ ಕುರಿತು ಒಂದೇ ಹಿಡಿತಕ್ಕೆ ಸಿಗುವ ಕೃತಿಯ ಅವಶ್ಯಕತೆಯೂ ಇತ್ತು. ಅವರಿಲ್ಲದ ಈ ಅಕಾಲಿಕ ಸಂದರ್ಭದಲ್ಲಿ ಅದು ನೆರವೇರಿದೆ. “ತಿಳಿಮನಕ್ಕೆ ಮಾತುಗಳ ಅರಿವಿರಲಾರದು'’ ಎಂಬ ಈ ಹೊತ್ತಿನಲ್ಲಿ ನಾವು ಅವರನ್ನು ನೆನಪಿಸಿಕೊಳ್ಳೋಣ.