ರವಿ ಬೆಳಗೆರೆ
Publisher: ಭಾವನಾ ಪ್ರಕಾಶನ
Couldn't load pickup availability
ನಮಸ್ಕಾರಗಳು.
'ಸಮಾಧಾನ' ಅಂಕಣ ಪ್ರಕಟವಾದದ್ದು - 'ಓ ಮನಸೇ' ಪಾಕ್ಷಿಕದಲ್ಲಿ, ಆ ಪತ್ರಿಕೆಯೇ ಡಿಫರೆಂಟ್. ಕನ್ನಡದಲ್ಲಿ ಇನ್ನೊಂದು ಅಂಥ ಪತ್ರಿಕೆಯನ್ನು ನೀವು ಓದಲಾರಿರಿ. ಇವತ್ತಿಗೂ ಅದಕ್ಕೆ ಅಪಾರ ಬೇಡಿಕೆ.
ನಿಗಿ ನಿಗಿ ಯೌವ್ವನದ ಹುಡುಗರು, ಆಗಷ್ಟೆ ನೆಲತಾಕಿದ ಪಾರಿಜಾತದಂಥ ಹುಡುಗಿಯರು, ತುಂಬು ಬಸುರಿಯರು, ನೊಂದ ತಾಯಂದಿರು, ಮುಪ್ಪಾನ ಮುದುಕರು-ಹೀಗೆ ಎಲ್ಲರಿಗೂ ಆ ಕ್ಷಣದ ಸಮಸ್ಯೆಗೆ ಅಥವಾ ಬಗೆ ಹರಿಯದ ದುಖಕ್ಕೆ ನಾನು ಹೇಳಿದ 'ಸಮಾಧಾನ' ಇದು ತುಂಬ ಶ್ರದ್ಧೆಯಿಂದ ನಾನು ನಿರ್ವಹಿಸಿದ ಅಂಕಣ.
ಈಗ ನಿಮ್ಮ ಕೈಲಿರೋದು ಸಮಾಧಾನ ಭಾಗ 2. ಮೊದಲ ಭಾಗವನ್ನು ಮಾರುಕಟ್ಟೆ, ಕೆಲವೇ ದಿನಗಳಲ್ಲಿ ನುಂಗಿ ಮಾಯ ಮಾಡಿತು. ಒಬ್ಬ ಲೇಖಕನಿಗೆ ಚೆಂದದ, ನಿರುಪದ್ರವಿ ಅಹಂಕಾರ ಬರಲು ಇನ್ನೇನು ಬೇಕು? ಯಾರಿಗೋ ಉದ್ರಿ ಸಲಹೆ ಕೊಡೋಲ್ಲ ನಾನು ಅದನ್ನು ಯಾರು ಬೇಕಾದರೂ ಮಾಡಿಯಾರು. 'ಬೆಳದ ಮಗನನ್ನು ಅಮೆರಿಕಕ್ಕೆ ಕಳಿಸಲೋಗ್ಯ ಆಸ್ಟ್ರೇಲಿಯಾಕ್ಕೆ ಕಳಿಸಲೋ?" ಅಂತ ಹಿರಿಯರೊಬ್ಬರು ಕೇಳಿದರೆ ಹಿಂದೆ ಮುಂದೆ ನೋಡದೆ ಆಸ್ಟ್ರೇಲಿಯಾಕ್ಕೆ ಕಳಿಸಿ ಅಂದು ಬಿಡೋದು ಅಪ್ಪಟ tupidity ನಮ್ಮ ದೇಶದಲ್ಲಿ ಸಲೀಸಾಗಿ, ಪ್ರಕಟೆ ಸಿಗೋ ಎರಡು ವಸ್ತುಗಳೆಂದರೆ ಸಲಹೆ ಮತ್ತು ಆಶೀರ್ವಾದ ಪಾಶ್ಚಾತ್ಯ ದೇಶಗಳಲ್ಲಿ ಕೌನ್ಸೆಲಿಂಗ್ ಎಂಬುದೊಂದು ಪ್ರತ್ಯೇಕವೆ ಆದ ವೃತ್ತಿ ಪ್ರತಿ ಸಮಸ್ಯೆಗೂ ಪ್ರತ್ಯೇಕ ಸ್ಪೆಷಲಿಸ್ಟ್ ಸಿಗುತ್ತಾನೆ.
ನಾನು ಸ್ಪೆಷಲಿಸ್ಟ್ ಅಲ್ಲ, ಆದರೆ ಉಳಿ ಪೆಟ್ಟು ತಿಂದೂ ತಿಂದು ಒಂದು ವಿಗ್ರಹವಾಗಿರುವ ಅರವತ್ತು ವರ್ಷದ young man! ಆ ಧೈರ್ಯದಿಂದಲೇ ಸಮಾಧಾನ ಮಾಡಲು ಕುಳಿತಿದ್ದೇನೆ ನನ್ನೆದುರಿಗೆ ನೀವು!
-ರವಿ ಬೆಳಗೆರೆ
ಭಾವನಾ ಪ್ರಕಾಶನ
