Dr. Rajendra Chenni
ಸಾಹಿತ್ಯಲೋಕ
ಸಾಹಿತ್ಯಲೋಕ
Publisher -
- Free Shipping Above ₹250
- Cash on Delivery (COD) Available
Pages - 528
Type - Hardcover
ಯಶವಂತ ಚಿತ್ತಾಲರ
ಸಾಹಿತ್ಯಲೋಕ
ಚಿತ್ತಾಲರ ವಿಶಿಷ್ಟತೆಯೆಂದರೆ ಅವರು ಕೇಡನ್ನು ನಿಚ್ಚಳವಾಗಿ ನೋಡಿ ನಿಷ್ಠುರವಾಗಿ ಬರೆಯಬಲ್ಲರು. ಆದರೆ ಕೇಡಿನ ಬಗ್ಗೆ ಇಷ್ಟು ತೀವ್ರವಾದ ಎಚ್ಚರವಿರುವ ಚಿತ್ತಾಲರಿಗೆ ಅಷ್ಟೇ ತೀವ್ರವಾದ ಶ್ರದ್ಧೆಯಿರುವುದು ಪ್ರೀತಿ ಮತ್ತು ಅಂತಃಕರಣದಲ್ಲಿ. ಆದ್ದರಿಂದಲೇ ಅವರು ಪ್ರೀತಿ ಮತ್ತು ಸೃಜನಶೀಲತೆ ಇವೆರಡೂ ಒಂದೇ ಎಂದು ನಂಬಿಕೊಂಡು ಬಂದಿದ್ದಾರೆ. ಗಾಢವಾದ ಮೃತ್ಯುಪ್ರಜ್ಞೆಯ ಜೊತೆಗೆ ಜೀವಪರವಾದದ್ದನ್ನು ಉಳಿಸಿ ಪೋಷಿಸಬೇಕೆನ್ನುವ ನಂಬಿಕೆ ಅವರ ಬರಹದಲ್ಲಿದೆ. 'ಆಟ' ಕತೆಯಲ್ಲಿ ಸಾವಿನ ಅಪರಿಹಾರ್ಯತೆ ಎಷ್ಟು ಖಚಿತವಾಗಿದೆಯೋ ಅಷ್ಟೇ ಆಟಕ್ಕಾಗಿ ಹೊರಟ ಯುವಕರ ಜೀವನೋತ್ಸಾಹವೂ ಇದೆ. ತನ್ನ ಶತ್ರುಗಳು ಆಡುವ ಆಟಗಳನ್ನು 'ಶಿಕಾರಿ'ಯ ನಾಗಪ್ಪನೂ ಆಡಬಲ್ಲ. ಆದರೆ, ಅವನು ಗೆಲುವಿನ ಬದಲಾಗಿ ಪ್ರೀತಿಯನ್ನು ಅರಸುತ್ತಾನೆ. 'ಕತೆಯಾದಳು ಹುಡುಗಿ' ಕತೆಯಲ್ಲಿ ಕತೆಯ ಬದಲು ಅನಾಥಾಲಯದಿಂದ ಮನೆಗೆ ಕರೆತಂದ ಹೆಣ್ಣು ಮಗುವೆ ಮನೆ ತುಂಬುತ್ತದೆ. ಚಿತ್ತಾಲರ ಅತ್ಯುತ್ತಮ ಕೃತಿಯಾದ 'ಪುರುಷೋತ್ತಮ' ತನ್ನೆಲ್ಲ ರುದ್ರ ಭಯಾನಕತೆಯ ನಂತರ ಬದುಕು ಮುಂದುವರಿಯುವುದರ ಇತ್ಯಾತ್ಮಕ ಸೂಚನೆಗಳೊಂದಿಗೆ ಶುಭಕರವಾದ ಮುಕ್ತಾಯಕ್ಕೆ ಬರುತ್ತದೆ. ಕೇಂದ್ರ ವೃತ್ತಾಂತವೂ ಕೂಡ ಇಂಥದ್ದೇ ನೆಲೆಗೆ ಬಂದು ನಿಲ್ಲುತ್ತದೆ. ಇದು ಗಾಢವಾದ ನೈತಿಕ ಶ್ರದ್ಧೆಯಿಂದ ಮಾತ್ರ ಸಾಧ್ಯವಾಗುವಂಥದ್ದು. ಕಥನದ ಗುಣವೆಂದರೆ ಯಾವುದು ಸರಳ ಭಾವುಕ ನಿಲುವಾಗಿ ಕಾಣಬಹುದೋ ಅದನ್ನು ಮೂರ್ತವಾದ ಅನುಭವಶೋಧನೆಯ ಮೂಲಕ ಒಂದು ಗಟ್ಟಿಯಾದ ಮೌಲ್ಯ ಕಲ್ಪನೆಯಾಗಿ ಪರಿವರ್ತಿಸಬಲ್ಲುದು. ಆದ್ದರಿಂದಲೇ ಡಿ.ಎಚ್. ಲಾರೆನ್ಸ್ ಕಾದಂಬರಿಯನ್ನು bright book of life ಎಂದು ಕರೆದ. ನಮ್ಮ ಕಾಲದ ತಲ್ಲಣಗಳ ಬಗ್ಗೆ ಬರೆದರೂ ಕಾದಂಬರಿಯನ್ನು ಚಿತ್ತಾಲರು bright book of life ಆಗಿಯೇ ಸೃಷ್ಟಿಸುತ್ತಾರೆ. ಪುರುಷೋತ್ತಮ ಕಾದಂಬರಿಯೂ ಹೀಗಾಗುವುದನ್ನು ನಾನು ಬೆರಗಿನಿಂದ ನೋಡಿದ್ದೇನೆ. ಸದೂ ಮಾಮನಂಥ ಅವಧೂತನಂಥ ವ್ಯಕ್ತಿಯಿಂದ ಕಥಾನಕದ ಭಯಾನಕವಾದ ಕತ್ತಲು ತಿಳಿಯಾಗುತ್ತದೆಯೆನ್ನುವುದು ನಿಜವಾದರೂ ಇಡೀ ಕಾದಂಬರಿಯು ಜೀವನದ ಕಡೆಗೆ ಹೊರಳುವುದು ಕಲಾತ್ಮಕವಾಗಿ ಕೂಡ ಒಂದು ಪವಾಡವಾಗಿದೆ. ಕಾದಂಬರಿ ಪ್ರಕಾರದಲ್ಲಿ ಶ್ರೇಷ್ಠತೆಯೂ ಎಂದಿಗೂ ಕಲಾತ್ಮಕತೆಯಿಂದ ಮಾತ್ರ ಸಾಧ್ಯವಾಗುವುದಿಲ್ಲ. ಅದು ಅಂತಿಮವಾಗಿ ಕಾದಂಬರಿಕಾರನ ನೈತಿಕ ಕಾಣೆಯಿಂದಲೇ ಸಾಧ್ಯವಾಗುವುದು. ಇದು ಕುವೆಂಪು, ಕಾರಂತ, ದೇವನೂರು ಮಹಾದೇವ ಅವರ ಬಗ್ಗೆ ಹೇಗೆ ನಿಜವೋ ಚಿತ್ತಾಲರ ಬಗೆಗೂ ನಿಜ.
- ಡಾ. ರಾಜೇಂದ್ರ ಚೆನ್ನಿ (ಸಂಪಾದಕರ ಮಾತಿನಲ್ಲಿ)
Share
Subscribe to our emails
Subscribe to our mailing list for insider news, product launches, and more.