Yashawantha Chittala
ಸಾಹಿತ್ಯದ ಸಪ್ತಧಾತುಗಳು
ಸಾಹಿತ್ಯದ ಸಪ್ತಧಾತುಗಳು
Publisher -
- Free Shipping Above ₹250
- Cash on Delivery (COD) Available
Pages - 98
Type - Paperback
ಸೃಜನ ಪ್ರಕ್ರಿಯೆಯ ಜಿಜ್ಜಾಸೆ, ಸಾಹಿತ್ಯ ಮೀಮಾಂಸೆಗಿಂತ ಭಿನ್ನವಾದುದು, ನ್ಯಾಯವಾಗಿ ಅದನ್ನೇ ಒಂದು ಶಾಸ್ತ್ರವಾಗಿ ಗುರುತಿಸುವ ಅಗತ್ಯವಿದೆ. ಬೇರೆಬೇರೆ ಸೃಷ್ಟಿಶೀಲರು ತಮ್ಮ ಕ್ರಿಯಾಶೀಲತೆಯ ಒತ್ತಾಯ, ಭಾಷೆಯ ಮೂಲಕ, ಕೈಜಾರಿದ ಅನುಭವವೊಂದು ಮೈದಾಳುವ ಚೋದ್ಯ, ಅನಿರೀಕ್ಷಿತವಾದದ್ದು ರೂಪಕ ಶರೀರಿಯಾಗಿ ಪ್ರತ್ಯಕ್ಷವಾಗುವ ವೈಚಿತ್ರ್ಯ, ಬರವಣಿಗೆಯ ಹಿಂದಿನ ತಾತ್ವಿಕತೆ, ಬರವಣಿಗೆಯ ಕ್ರಮ, ಬರೆಯುವ ಕಾಲದ ಮನಃಸ್ಥಿತಿ, ಭಾಷೆ - ಲಯ - ವಸ್ತುವಿನ ಆಯ್ಕೆಯ ಸಮಸ್ಯೆ, ವಸ್ತು ಮತ್ತು ಬಂಧದ ಬಿಕ್ಕಟ್ಟು, ಕೃತಿಯ ಅಂತರಿಕ ಮಿಡಿತ ಮತ್ತು ಬಹಿರಂಗದ ಒತ್ತಾಯಗಳ ಮುಖಾಮುಖಿ ಮುಂತಾದ ಸಂಗತಿಗಳನ್ನು, ತಮ್ಮ ಸೃಜನಶೀಲ ಅನುಭವವನ್ನೇ ಆಧಾರವಾಗಿಟ್ಟುಕೊಂಡು ಚರ್ಚಿಸಿದಲ್ಲಿ, ಅದು 'ಸೃಜನಜಿಜ್ಞಾಸೆ'ಯನ್ನು ಒಂದು ಶಾಸ್ತ್ರವಾಗಿ ಬೆಳೆಸಬಲ್ಲುದು. ಯಶವಂತ ಚಿತ್ತಾಲರ ಸಾಹಿತ್ಯದ ಒಂದು ಪ್ರಯೋಗವಾಗಿದೆ. ಇಂಥ ಜಿಜ್ಞಾಸೆ ಸಾಹಿತ್ಯದ ಬಗ್ಗೆ ಒಟ್ಟಾರೆ ಕೆಲವು ಹೊಸ ಗ್ರಹಿಕೆಗಳನ್ನು ಮಂಡಿಸಬಲ್ಲುದು, ಜೊತೆಗೆ ಸಂಬಂಧಪಟ್ಟ ಲೇಖಕನ ಕೃತಿಯ ಅಭ್ಯಾಸದಲ್ಲಿ ಓದುಗನಿಗೆ ಉಪಯುಕ್ತ ಆಗಬಹುದಾದಂಥ ಕೆಲವು ದಿಗ್ದರ್ಶೀ ಸೂತ್ರಗಳನ್ನು ಒದಗಿಸಬಲ್ಲುದು.
-ಎಚ್. ಎಸ್. ವೆಂಕಟೇಶಮೂರ್ತಿ
Share
Subscribe to our emails
Subscribe to our mailing list for insider news, product launches, and more.