Yashawantha Chittala
ಸಾಹಿತ್ಯ ಸೃಜನಶೀಲತೆ ಮತ್ತು ನಾನು
ಸಾಹಿತ್ಯ ಸೃಜನಶೀಲತೆ ಮತ್ತು ನಾನು
Publisher -
- Free Shipping Above ₹250
- Cash on Delivery (COD) Available
Pages - 129
Type - Paperback
ಯಶವಂತ ಚಿತ್ತಾಲರ ಈ ಪ್ರಬಂಧಸಂಕಲನ ಒಂದು ಅಪೂರ್ವ ಕೃತಿ. ಸೃಜನಶೀಲ ಲೇಖಕನೊಬ್ಬ, ತನ್ನ ಅನುಭವಪ್ರಪಂಚದೊಡನೆ ಮುಖಾಮುಖಿ ನಿಂತ ಕ್ಷಣಗಳನ್ನು ಅತ್ಯಂತ ಆಪ್ತ ರೀತಿಯಲ್ಲಿ ದಾಖಲಿಸುವ ಇಲ್ಲಿಯ ಲೇಖನಗಳು ಚಿತ್ತಾಲರ ಜೀವನ ದರ್ಶನಕ್ಕೊಂದು ಪ್ರಣಾಳಿಕೆಯಾಗಿದೆ ಸಾಹಿತ್ಯಕೃತಿಗೆ ಪ್ರೇರಣೆಯಾದ ಸೃಷ್ಟಕ್ರಿಯೆಯ ಜೀವನಸೆಲೆಗಳನ್ನು ಪರೀಕ್ಷೀಸುವ ಇಲ್ಲಿನ ಬರಹಗಳು ದಿಗ್ಬಂಧನಗೊಂಡ ಇಂದಿನ ಮನುಷ್ಯನ ಸ್ಥಿತಿಯನ್ನು ಮನಸ್ಸಿಗೆ ತಟ್ಟುವಂತೆ ನಿರೂಪಿಸುತ್ತವೆ. ಈ ಸಂಗ್ರಹದ ಮೊದಲ ಭಾಗದ ಲೇಖನಗಳು ಚಿತ್ತಾಲರ ಕಥಾಸಾಹಿತ್ಯದ ಮೂಲ ಬೀಜಗಳನ್ನು ಹುಡುಕುವುದರಿಂದ ಅವು ಸಣ್ಣ ಕಥೆಗಳೇನೋ ಎನ್ನುವಷ್ಟು ಸಹಜವಾಗಿ ಓದಿಸಿಕೊಳ್ಳುತ್ತವೆ. ಹಾಗೆ ನೋಡಿದರೆ ಅವು ಪ್ರಬಂಧರೂಪದ ಕಥೆಗಳೇ ಸರಿ; ಅಥವಾ, ಚಿತ್ತಾಲರೇ ಹೇಳುವಂತೆ 'ಕಥೆಯಂಥ' ಪ್ರಬಂಧಗಳು, ಸಮಾಜಶಾಸ್ತ್ರ, ಮಾನವಶಾಸ್ತ್ರ, ಇತಿಹಾಸ, ಪುರಾಣ ಹೀಗೆ ಅನೇಕ ಕ್ಷೇತ್ರಗಳ ಜ್ಞಾನದ ಬೆಳಕಿನಲ್ಲಿ ಚಿತ್ತಾಲರು ತಮ್ಮ ಅನುಭವವನ್ನು ಪರಿಶೀಲಿಸುವ ರೀತಿ ಅನನ್ಯವಾದದ್ದು ಕಥೆಗಾರರಾಗಿ, ಕಾದಂಬರಿಕಾರರಾಗಿ ಪ್ರಖ್ಯಾತರಾಗಿರುವ ಚಿತ್ತಾಲರ ಆರೋಗ್ಯಕರ ಧೋರಣೆಗಳಿಗೂ ಇಲ್ಲಿ ಕಾರಣಗಳು ಸಿಕ್ಕುತ್ತವೆ. ಇಲ್ಲಿಯ ಪ್ರತಿಯೊಂದು ಪ್ರಬಂಧದ ಹಿಂದೆ ಸಂವೇದನಾಶೀಲ ಮನಸ್ಸಿದೆ, ಚಿಕಿತ್ಸಕ ಬುದ್ದಿಯಿದೆ. ಸಮಸ್ಯೆಗಳನ್ನು ಬಿಡಿಸಿ ನೋಡುವ ವಿಚಾರಶಕ್ತಿಯಿದೆ. ಮಾನವೀಯ ಜಗತ್ತಿಗಾಗಿ ಕರೆ ಕೊಡುವ ಕಳಕಳಿಯಿದೆ. ಎಲ್ಲಕ್ಕೂ ಮಿಗಿಲಾಗಿ ಚಿತ್ತಾಲತನವಿದೆ.
Share
Subscribe to our emails
Subscribe to our mailing list for insider news, product launches, and more.