Skip to product information
1 of 2

Dr. Doddarangegowda

ಸಾಹಿತ್ಯ ಸರೋವರ

ಸಾಹಿತ್ಯ ಸರೋವರ

Publisher - ಸಪ್ನ ಬುಕ್ ಹೌಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 180

Type - Paperback

ಕನ್ನಡ ನಾಡಿನಲ್ಲಿ 1960ರ ದಶಕದಲ್ಲಿದ್ದ ಸಾಹಿತ್ಯದ ಚರ್ಚೆಗಳು ಇಂದಿಲ್ಲ. ಅವೆಲ್ಲಾ ಎಲ್ಲಿ ನಾಪತ್ತೆಯಾದವೋ ನಾನರಿಯೆ ಕಾಲ ಪ್ರವಾಹದಲ್ಲಿ ಹಳೆಯ ರೀತಿ-ನೀತಿಗಳು ಕೊಚ್ಚಿಹೋಗಿ ವಿನೂತನ ಮಾರ್ಗಗಳು ಹುಟ್ಟಿಕೊಂಡಿವೆ.

ಸೃಜನಶೀಲ ಸಾಹಿತಿ, ಅಭಿರುಚಿಯುಳ್ಳ ಓದುಗ, ಬರಹದ ಅಂತರಂಗ ತೆರೆದು ತೋರುವ ವಿಮರ್ಶಕ ಎಲ್ಲರೂ ಜವಾಬ್ದಾರಿಯಿಂದ ತಮ್ಮ ತಮ್ಮ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದರೆ... ಸಮಕಾಲೀನ ಸಮಾಜದ ಸ್ವಾಸ್ಥ್ಯ ಕೆಡುವುದಿಲ್ಲ!

ಇಂದೇಕೋ ಈ ಸಮೀಕರಣ ಎಲ್ಲೋ ತಪ್ಪಿದೆ. ಅಹಿತಗಳು ಉದ್ಭವವಾಗಿ ಬರೆಯುವವರ ಬರಹಗಳೂ ಹಗುರಾಗಿವೆ. ಹಾಗೆಯೇ ಓದುಗನೂ ಅರುಚಿಯತ್ತ ಸಾಗಿದ್ದಾನೆ, ಎಲ್ಲಿ ಹೋಯಿತು ಅಭಿರುಚಿ? ಸೃಜನಶೀಲತೆಯ ಅಳತೆ ಗೋಲುಗಳು ಸಂಪೂರ್ಣ ಬದಲಾಗಿ ಎಲ್ಲೆಡೆ ಅರುಚಿ ಎದ್ದು ಕಾಣುತ್ತಿದೆ.


ಈ ಸಂದರ್ಭದಲ್ಲಿ ನಾನು ಒಬ್ಬ ಪ್ರಾಮಾಣಿಕ ಸಾಂಸ್ಕೃತಿಕ ವಕ್ತಾರನಾಗಿ ತಲೆಕೆಳಗಾದ ಮೌಲ್ಯಗಳ ಎತ್ತಿಹಿಡಿವ ಕಾಯಕವನ್ನೇ ಮಾಡುತ್ತಿದ್ದೇನೆ. ನೈತಿಕ ಮೌಲ್ಯಗಳ ಪುನರುತ್ಥಾನ ಆಗಬೇಕಿದೆ. ಆ ದಿಸೆಯಲ್ಲಿ ಇದೊಂದು ನಮ್ರ ಪ್ರಯತ್ನ.

"ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು!”

ಕನ್ನಡದ ನವ್ಯ ಕಾವ್ಯದ ಕೇಂದ್ರಬಿಂದುವಾದ ಪ್ರೊ| ಗೋಪಾಲಕೃಷ್ಣ ಅಡಿಗರು ನನಗೆ ನೆನಪಾಗುತ್ತಿದ್ದಾರೆ. ಅವರಂಥ ಹಿರಿಯರ ಮಾರ್ಗಸೂಚಿಯ ಅಡಿಯಲ್ಲಿ ನನ್ನ ಸಾಹಿತ್ಯ ಕೃಷಿ ನಡೆದಿದೆ. 'ಸಾಹಿತ್ಯ ಸರೋವರ' ಬಗ್ಗಡ ಆಗುವ ಬದಲು ತಿಳಿಯಾಗಬೇಕಾಗಿದೆ.

-ದೊರಂಗೌಡ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)