Skip to product information
1 of 2

Ravi Belagere

ರಜನೀಶನ ಹುಡುಗಿಯರು

ರಜನೀಶನ ಹುಡುಗಿಯರು

Publisher - ಭಾವನಾ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 82

Type - Paperback

ರವಿ ಬೆಳಗೆರೆ! ಅವರು ಕನ್ನಡಿಗರ ಮನೆಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಪ್ಟೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ಧಗಳ ಪ್ರತ್ಯಕ್ಷ ವರದಿ ಮಾಡಿದ್ದಾರೆ. ಕಾರ್ಗಿಲ್ ಕದನ ಭೂಮಿ, ಅಫಘನಿಸ್ತಾನ ಮತ್ತು ಪುಲ್ವಾಮಾದ ಮಹಾ ಯುದ್ಧರಂಗದಲ್ಲಿ ಓಡಾಡಿದ್ದಾರೆ. ಅಂತೆಯೇ ಅವರ ಕಾದಂಬರಿಗಳಲ್ಲಿ ಪ್ರೀತಿ, ತಂತ್ರ, ಅಂಡರ್‌ವರ್ಲ್, ರಾಜಕಾರಣ, ಕಾಮ, ಟೆರರಿಸಂ ವಿಜೃಂಭಿಸಿವೆ. ಅವರ ತನಿಖಾ ವರದಿ ಪುಸ್ತಕವಾಗಿದೆ. ಮೂಲತಃ ರವಿ ಬೆಳಗೆರೆ ಕಥೆಗಾರರೆಂದೇ ಹೆಸರಾದವರು. ಅವರು ತಮ್ಮ ಇಷ್ಟದ ಕವಿ ಸಾಹಿರ್ ಲೂಧಿಯಾನವಿಯಿಂದ ಹಿಡಿದು ತೆಲುಗು ಲೇಖಕ ಗುಡಿಪಾಟು ವೆಂಕಟ ಚಲಂ ತನಕ ಅನೇಕರ ಜೀವನ ಕಥನ ಬರೆದಿದ್ದಾರೆ, ಅನುವಾದಿಸಿದ್ದಾರೆ. ರವಿ ಬೆಳಗೆರೆ ಪ್ರತೀವಾರ ಬರೆಯುತ್ತಿದ್ದ 'ರಜನೀಶನ ಹುಡುಗಿಯರು' ಈ ಅಂಕಣ ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಎಂದಿನಂತೆ ಒಪ್ಪಿಕೊಳ್ಳಿ.

-ಭಾವನಾ ಬೆಳಗೆರೆ

View full details

Customer Reviews

Based on 2 reviews
50%
(1)
50%
(1)
0%
(0)
0%
(0)
0%
(0)
A
Achuthananda R

ರಜನೀಶನ ಹುಡುಗಿಯರು

S
SAHANA KHAVASPUR

i love speech of osho,and even the books of ravi sir.Whatever he has written about osho ,it gave me different perception of him.The quality of pages are good.overall 10/10 satisfcation with purchase from harivu books