M. Ramarao
ರಾಜಕುಮಾರನ ಕನಸು
ರಾಜಕುಮಾರನ ಕನಸು
ಪ್ರಕಾಶಕರು - ಐಬಿಹೆಚ್ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 80
Type - Paperback
Pickup available at 67, South Avenue Complex, DVG Road, Basavanagudi
Usually ready in 24 hours
ಎಂ. ರಾಮರಾವ್ ಅವರ ಪೂರ್ಣ ಹೆಸರು ಮಠದ ರಾಮರಾವ್. ರಾಮರಾಯರು ಇಂಗ್ಲಿಷ್ ಅಧ್ಯಾಪಕರಾಗಿದ್ದರು. 50-60 ವರ್ಷಗಳ ಹಿಂದೆ ಅವರ ವಿದ್ಯಾರ್ಥಿಗಳಾಗಿದ್ದವರು ತಮ್ಮ ಗುರುಗಳು ನಿಲ್ಲುತ್ತಿದ್ದ ಭಂಗಿ, ಅವರ ಬೋಧನಾ ಶೈಲಿ, ತಿಳಿ ಹಾಸ್ಯ ಪ್ರವೃತ್ತಿ, ಪಾಠ ಕೇಳುತ್ತಿರುವವರನ್ನು ತನ್ಮಯರಾಗಿಸಿ ಅವರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತಿದ್ದ ಅವರ ವಾಗ್ಝರಿ ಮುಂತಾದವುಗಳ ವಿವರಗಳನ್ನು ಇಂದಿಗೂ ನೀಡುತ್ತಾರೆ.
ರಾಮರಾಯರು ಇಂಗ್ಲಿಷ್ ಅಧ್ಯಾಪಕರಾದರೂ ಕನ್ನಡ ಭಾಷೆ ಮತ್ತು ಸಾಹಿತ್ಯಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರಿಗೆ ಅತ್ಯಂತ ಪ್ರಿಯವಾದದ್ದು ಮಕ್ಕಳ ಸಾಹಿತ್ಯ ಗ್ರಿಮ್ಸ್ ಸೋದರರ ಮತ್ತು ಹ್ಯಾನ್ಸ್ ಕ್ರಿಶ್ಚಿಯನ್ ಆಂಡರಸನ್ ಅವರ ಅನೇಕ ಕಥೆಗಳನ್ನು ಮನೋಜ್ಞವಾಗಿ ಅನುವಾದಿಸಿದ್ದಾರೆ. ಮಕ್ಕಳ ಕಥೆಗಳೇ ಅಲ್ಲದೆ ಪ್ರಬಂಧಗಳು, ಕವಿತೆಗಳು, ಅನುವಾದಗಳು, ನಾಟಕಗಳು, ವ್ಯಕ್ತಿ ಚಿತ್ರಗಳು-ಹೀಗೆ ಅವರ ಬರಹಗಳು ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ.
ಗ್ರಿಮ್ಸ್ ಸೋದರರೆಂದೇ ಪ್ರಸಿದ್ಧಿಯಾಗಿರುವ ಜೇಕಬ್ ಗ್ರಿಮ್ ಮತ್ತು ವಿಲಿಯಮ್ ಗ್ರಿಮ್ ಅವರು 'ಗ್ರಿಮ್ಸ್ ಫೇರಿ ಟೇಲ್ಸ್'ನ ಲೇಖಕರು.
ಅವರ ಕಥಾ ಸಂಕಲನದ ಮೊದಲ ಮುದ್ರಣ ಬಂದಿದ್ದು IS12ರಲ್ಲಿ. 1819ರಲ್ಲಿ ಅವರಿಗೆ ಮಾರ್ಬರ್ಗ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ದೊರೆಯಿತು. ಕ್ರಿಯೆಗೆ ಹೆಚ್ಚಿನ ಮಹತ್ವ ನೀಡಿ, ಗಾದೆ ಮತ್ತು ಜನಪದ ಹಾಡುಗಳನ್ನು ಕಥೆಗಳಲ್ಲಿ ಅಳವಡಿಸಿ, ಹೊಸ ಶೈಲಿಯನ್ನು ರೂಪಿಸಿದರು. ಇದು ಇಂದಿಗೂ ಒಂದು ಮಾದರಿಯಾಗಿ ಉಳಿದಿದೆ.
ಡೆನ್ಮಾರ್ಕ್ ದೇಶದ ಲೇಖಕರಾದ ಹ್ಯಾನ್ಸ್ ಕ್ರಿಶ್ಚಿಯನ್ ಆಂಡರಸನ್ ಅವರು ಕಥೆ, ಕಾದಂಬರಿ, ಕವಿತೆ, ಪ್ರವಾಸ ಕಥನ ಮೊದಲಾದವುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಬಹುಮುಖ್ಯವಾದವು ನೂರೈವತ್ತಕ್ಕೂ ಹೆಚ್ಚಿನ ಸಂಖ್ಯೆಯ ಜಾನಪದ ಕಥೆಗಳು. ಅವರು ಡೆನ್ಮಾರ್ಕ್ ದೊರೆಯಿಂದ ದೊರೆತ ಅನುದಾನದಿಂದ ಯೂರೋಪ್ ದೇಶದ ಪ್ರವಾಸ ಕೈಗೊಂಡು ಅನೇಕ ಕೃತಿಗಳನ್ನು ರಚಿಸಿದರು.
Subscribe to our emails
Subscribe to our mailing list for insider news, product launches, and more.