K. P. Poornachandra Tejaswi
ಪ್ಯಾಪಿಯೋನ್ - 3
ಪ್ಯಾಪಿಯೋನ್ - 3
Publisher - ಪುಸ್ತಕ ಪ್ರಕಾಶನ
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
'ಪ್ಯಾಪಿಯೋನ್' ಜಗತ್ತಿನ ಮಹೋನ್ನತ ಸಾಹಸ ಕತೆ, ಅನೇಕ ಸ್ಥರಗಳಲ್ಲಿ ಇದು ಇಪ್ಪತ್ತನೆಯ ಶತಮಾನದ ನಾಗರೀಕತೆಯ ವಿಶ್ವರೂಪದರ್ಶನ ಮಾಡಿಸುವುದರಿಂದ ಆ ಶತಮಾನದ ಪ್ರಾತಿನಿಧಿಕ ಕೃತಿ ಎಂದೂ ಕರೆಯಬಹುದು. ಮೂಲತಃ ಸ್ವಾತಂತ್ರ್ಯಕ್ಕಾಗಿ ಮನುಷ್ಯನೊಬ್ಬನ ಅದಮ್ಯ ಹೋರಾಟದ ಸತ್ಯ ಕತೆ,
ತಾನು ಮಾಡಿರದ ತಪ್ಪಿಗಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಪ್ಯಾಪಿ, ದೇಶದಿಂದ ನೂರಾರು ಮೈಲಿ ದೂರದ ಫ್ರೆಂಚ್ ಗಯಾನ ದ್ವೀಪಗಳಲ್ಲಿನ ಸೆರೆಮನೆಗೆ ಸಾಗಹಾಕಲ್ಪಡುತ್ತಾನೆ. ಅಲ್ಲಿಂದ ಪ್ರಾರಂಭವಾಗುತ್ತದೆ, ಅಮಾನವೀಯ ವ್ಯವಸ್ಥೆಯ ವಿರುದ್ಧ, ಸ್ವಾತಂತ್ರ ಬದುಕಿನೆಡೆಗಿನ ಅವನ ಪಲಾಯನದ ಕತೆ, ಒಂದಲ್ಲಾ ಎರಡಲ್ಲಾ, ಹದಿಮೂರು ವರ್ಷಗಳ ಎಂಟು ವಿಫಲ ಯತ್ನಗಳ ಅತ್ಯದ್ಭುತ ರೋಚಕ ಸಾಹಸಯಾನ. ಕೊನೆಗೂ ಗೋಣಿಚೀಲದಲ್ಲಿ ತೆಂಗಿನಕಾಯಿ ತುಂಬಿ, ಅದರ ಮೇಲೆ ಸವಾರಿ ಮಾಡುತ್ತಾ, ಸಾಗರದಲ್ಲಿ ನೂರಾರು ಮೈಲಿ ಹೋಗಿ ತಪ್ಪಿಸಿಕೊಂಡು ವೆನಿಜುವೆಲಾ ದೇಶ ತಲುಪುತ್ತಾನೆ.
ಅವನ ಮುಂದುವರಿದ ಸಾಹಸಮಯ ಬದುಕಿನ ಚಿತ್ರಣ 'ಬಾಜಿ', ಹಣಗಳಿಸುವ, ಗೌರವಾನ್ವಿತ ಬದುಕು ಕಟ್ಟಿಕೊಳ್ಳುವ, ತನ್ನ ಕನಸನ್ನು ನನಸಾಗಿಸಿಕೊಳ್ಳುವ ಬರದಲ್ಲಿ ಪ್ಯಾಪಿಯೋನ್, ಮತ್ತೊಮ್ಮೆ ಸಾಹಸಗಳ ಸರಣಿಯಲ್ಲಿ ಸಿಕ್ಕಿಕೊಳ್ಳುತ್ತಾನೆ. ಕಳ್ಳರ ಸುಳ್ಳರ, ಜೂಜುಕೋರರ, ನಿಧಿ ಶೋಧಕರ, ರೋಚಕ ಪ್ರಪಂಚವನ್ನು ಪ್ರವೇಶಿಸುತ್ತಾನೆ. ಹೋರಾಟ ಹೊರಜಗತ್ತಿನೊಂದಿಗೆ ಮಾತ್ರ ಅಲ್ಲಾ, ತನ್ನೊಳಗೇ ಹುದುಗಿದ್ದ 'ಸೇಡು' ಎಂಬ ಮೃಗದ ಜೊತೆಯೂ ಇದೆ.
ಸಕಾರಾತ್ಮಕ, ಸಕ್ರಿಯ ಮನೋಭಾವಕ್ಕೆ ಅತ್ಯುತ್ತಮ ಉದಾಹರಣೆ 'ಬಾಜಿ'
Share

Subscribe to our emails
Subscribe to our mailing list for insider news, product launches, and more.