Yashawantha Chittala
ಪುಟ್ಟನ ಹೆಜ್ಜೆ ಕಾಣೋದಿಲ್ಲಾ
ಪುಟ್ಟನ ಹೆಜ್ಜೆ ಕಾಣೋದಿಲ್ಲಾ
Publisher -
- Free Shipping Above ₹300
- Cash on Delivery (COD) Available
Pages - 114
Type - Paperback
Couldn't load pickup availability
ಪುಟ್ಟನ ಹೆಜ್ಜೆ ಕಾಣೋದಿಲ್ಲಾ...
ಯಶವಂತ ಚಿತ್ತಾಲ
ಹನೇಹಳ್ಳಿಯು ಚಿತ್ತಾಲರ ಕಥಾಸಾಹಿತ್ಯದ ಅತ್ಯಂತ ಪ್ರಮುಖ ಪಾತ್ರವಾಗಿದೆ. ಅವರ ಕಥಾಲೋಕದಲ್ಲಿ ಹನೇಹಳ್ಳಿಯಿಲ್ಲದ ಜಾಗವಿಲ್ಲ. ಬಹುತೇಕ ಕಥೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಅನೇಕ ಕಡೆ ಹೆಸರನ್ನೇ ಎತ್ತದಿರುವಾಗಲೂ ಅಪ್ರತ್ಯಕ್ಷವಾಗಿ ಹನೇಹಳ್ಳಿ ಇದೆ. ಪ್ರಜ್ಞೆಯಾಗಿ, ಮೌಲ್ಯವಾಗಿ, ಅಳತೆಗೋಲಾಗಿ ಇದೆ. ಈ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ ಮತ್ತು ಸ್ವತಃ ಅವರೇ ಈ ಬಗ್ಗೆ ಬರೆದಿದ್ದಾರೆ.
ಆದರೆ ಇದನ್ನೊಂದು ಸ್ಫೂರ್ತಿಯ ಸೆಲೆಯಾಗಿ ಮಾತ್ರ ನೋಡದೇ ಅವರ ಕಥೆಗಳಿಗೆ ನಿಬಿಡ ದೇಹವನ್ನು ಒದಗಿಸಿಕೊಟ್ಟ. ಅವರ ಸಾಹಿತ್ಯ ಸಂರಚನೆಯ ಅತ್ಯಂತ ಮುಖ್ಯವಾದ, ಅವಿಭಾಜ್ಯವಾದ ಅಂಗವಾಗಿ ನೋಡಬಯಸುತ್ತೇನೆ. ಮೊದಮೊದಲ ಕಥೆಗಳಲ್ಲಿ ವಾಸ್ತವ ಪ್ರದೇಶದಂತೆ ತೋರಿದ ಹನೇಹಳ್ಳಿಯು ಬರಬರುತ್ತ ಪಡೆದುಕೊಂಡ ರೂಪಕದ ಆಕಾರವು ಅತ್ಯಂತ ವಿಶಾಲವೂ ವಿಶ್ವಾತ್ಮಕವೂ ಆಗಿದೆ. ಈ ಒಂದು ಬಿಂದುವಿನಲ್ಲಿ ನಿಂತು ಜಗತ್ತನ್ನು ಅದರ ನಾನಾ ಆಯಾಮಗಳಲ್ಲಿ ನೋಡಲು ಅವರಿಗೆ ಅನುವು ಮಾಡಿಕೊಟ್ಟಿದೆ. ಹಾಗಾಗಿ ಅವರ ಕಥೆಗಳಲ್ಲಿ ಬರುವ ಹನೇಹಳ್ಳಿಯು ಮುಂಬಯಿಯನ್ನೂ ಸಹ ತನ್ನೊಳಗೆ ಇಟ್ಟುಕೊಂಡು ಅರ್ಥೈಸುವಷ್ಟು ಸಶಕ್ತವಾಗಿದೆ. ಈ ರೂಪಕದ ಬಲದಿಂದಾಗಿ ಅವರಿಗೆ ವ್ಯಕ್ತಿಗತ-ಸಾಮಾಜಿಕ ಆಯಾಮಗಳನ್ನು ಕಥೆಗಳಲ್ಲಿ ನಿರ್ವಹಿಸುವ ಶಕ್ತಿಯು ಸಹಜವಾಗಿ ಒದಗಿಬಂದಿದೆ. ಕಾಲಕ್ರಮದಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸಲು ಮತ್ತು ದಾಖಲಿಸಲು ಅವರು ಹನೇಹಳ್ಳಿಯನ್ನೇ ಮಾನದಂಡವಾಗಿ ಉಪಯೋಗಿಸುತ್ತಾರೆ. ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಅವರಿಗೆ ಇದೊಂದು ಅದ್ಭುತ ವರವಾಗಿ ಪರಿಣಮಿಸಿರುವುದು ಕಾಣುತ್ತದೆ.
ಇಂಥ ಸಾತತ್ಯವಿರುವ ಕಥಾಲೋಕವು ಕನ್ನಡಕ್ಕೆ ಅಪರೂಪವಾದುದು. ಒಂದು ನೆಲಕ್ಕೆ ಕಟ್ಟಿಬಿದ್ದು, ಆ ಒಂದು ನೆಲೆಯಿಂದಲೇ ಎಂಥ ಅಧುನಿಕತೆಯನ್ನಾದರೂ ನಿರ್ವಹಿಸಬಲ್ಲ ಹಟವನ್ನು ತಮ್ಮ ಕಥೆಗಳುದ್ದಕ್ಕೂ ಅವರು ತೋರಿದ್ದಾರೆ. ಅರ್ಧ ಶತಮಾನ ಕಾಲದ ಅವರ ಈವರೆಗಿನ ಕಥಾ ಸೃಷ್ಟಿಯಲ್ಲಿ ಈ ಅಂಶ ಯಾವ ರಾಜಿಗೂ ಒಳಪಡದೇ ಉಳಿದುಬಂದಿದೆ.
ಈ ಸಂಕಲನದ ಕಥೆಗಳಲ್ಲಿ ಅವರು ಮತ್ತೆ ಮರಳಿ ಹನೇಹಳ್ಳಿಗೆ ಕಾಲಿಟ್ಟಿದ್ದಾರೆ. ಈ 'ಮರುಪ್ರವೇಶ'ವು ಅವರಿಗೆ ಒಂದು ಅನನ್ಯ ದೃಷ್ಟಿಕೋನವನ್ನು - ಹನೇಹಳ್ಳಿಯ ಜೊತೆ ನಿಕಟ ಸಂಬಂಧ ಇದ್ಯಾಗಲೂ ಅಗತ್ಯವಾದ ದೂರವನ್ನು ಒದಗಿಸಿಕೊಟ್ಟಿದೆ.
-ವಿವೇಕ ಶಾನಭಾಗ
(ಪ್ರಸ್ತಾವನೆಯಿಂದ)
Share


Subscribe to our emails
Subscribe to our mailing list for insider news, product launches, and more.