ಪೂರ್ವ ಪಶ್ಚಿಮ

ಪೂರ್ವ ಪಶ್ಚಿಮ

ಮಾರಾಟಗಾರ
ಎಂ. ಆರ್. ದತ್ತಾತ್ರಿ
ಬೆಲೆ
Rs. 80.00
ಕೊಡುಗೆಯ ಬೆಲೆ
Rs. 80.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಮನುಷ್ಯತ್ವದ ಘನತೆಯ ಆರ್ತ ಹುಡುಕಾಟದಲ್ಲಿ, ಈ ಬರಹ ಮುಖ್ಯವಾಗುವುದು. ಈ ಬರಹಗಳಲ್ಲಿ ಲೇಖಕನು, ತಾನು ಪಡೆದ ಅನುಭವವನ್ನು, ಭಾಷೆ ಮತ್ತು ಲಯದ ಮೂಲಕ ಇನ್ನೊಬ್ಬರಿಗೆ ದಾಟಿಸಲು ಹೋರಾಡುತ್ತಿದ್ದಾನೆ. ಅನುಭವದ ಸೂಕ್ಷ್ಮಗಳನ್ನು ಹಿಡಿಯಲು, ಚಿಂತನೆಯ ಕವಲುಗಳನ್ನು ಹಿಡಿಯಲು ಸೂಕ್ಷ್ಮ ಸಂವೇದನೆಯ ಲೇಖಕ ತಹತಹಿಸತೊಡಗುತ್ತಾನೆ. ಎಂ.ಆರ್‌. ದತ್ತಾತ್ರಿ ಅವರ ಗದ್ಯದಲ್ಲಿ, ಆಕರ್ಷಕವಾದ ಲಯದ ಮುರಿವುಗಳು, ಭಾವುಕವಾಗದ, ಆದರೆ ಭಾವಗುಣ ಬಿಟ್ಟುಕೊಡದ ಭಾಷಾಶೈಲಿ, ಅಲ್ಲಲ್ಲಿ ಅನಾಯಾಸವಾಗಿ ದಕ್ಕುವ ಕಾವ್ಯದ ಜಿಗಿತಗಳು, ನವಿರಾದ ಹಾಸ್ಯ ಭಾವದಷ್ಟೇ ಬುದ್ಧಿ ಪ್ರಕಾಶಕ್ಕೂ ಎಡೆಗೊಡುವ ತೂಕದ ಅರ್ಥಗುಂಪಿದೆ. ಇದಕ್ಕಿಂತ ಇನ್ನೇನು ಬೇಕು?