Skip to product information
1 of 1

Gopalakrishna Kuntini

ಪುರುಷಾವತಾರ

ಪುರುಷಾವತಾರ

Publisher - ಸಪ್ನ ಬುಕ್ ಹೌಸ್

Regular price Rs. 135.00
Regular price Rs. 135.00 Sale price Rs. 135.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಕುಂಟಿನಿಯ ಈ ಕಾದಂಬರಿ ಪ್ರೇಮ-ಕಾಮಗಳನ್ನು ದಾಟುವ ಮತ್ತು ದಾಟದ ಎರಡೂ ಸಂಕಟಗಳಿಗೆ ಕನ್ನಡಿಯಾಗುತ್ತದೆ. ಇಲ್ಲಿ ದಾಟಲು ಹೊರಟವರಿದ್ದಾರೆ, ದಾಟಿದವರಿದ್ದಾರೆ, ದಾಟುತ್ತಾ ಇರುವವರಿದ್ದಾರೆ, ದಾಟುವಿಕೆಯನ್ನು ನಿರಾಕರಿಸುವವರೂ ಇದ್ದಾರೆ. ಕೆಲವರಿಗೆ ಇಲ್ಲಿ ಬಗೆ ಹರಿದಿದೆ. ಅವರು ಗುಹಾಮುಖರಾಗಿದ್ದಾರೆ. ವಿಚಿತ್ರವೆಂದರೆ ಕೆಲವರಿಗೆ ಬಗೆ ಹರಿದಿಲ್ಲ. ಅವರೂ ಗುಹಾಮುಖರಾಗಿದ್ದಾರೆ.

ಕಾದಂಬರಿ ಹುಡುಕಾಟದಲ್ಲಿ ಮುಳುಗಿದೆ. ಅದು ಪ್ರೇಮದ ಹುಡುಕಾಟವೂ ಕಾಮದ ಹುಡುಕಾಟವೂ ಮತ್ತು ಬಿಡುಗಡೆಯ ಹುಡುಕಾಟವೂ ಆಗಿರುವುದು ಹಾಗೂ ಎಲ್ಲೋ ಒಂದು ಬಿಂದುವಿನಲ್ಲಿ ಈ ಎಲ್ಲ ಹುಡುಕಾಟ ಗಳೂ ಒಂದೇ ಆಗಿರುವುದು ಈ ಕಾದಂಬರಿಯ ಒಗಟು. ಈ ಒಡಪನ್ನು ಕಾದಂಬರಿ ಭೇದಿಸುವ ಪರಿ ಮಾತ್ರ ಅನನ್ಯ. ಇದಕ್ಕಾಗಿ ಕಾದಂಬರಿ ಹಲವು ಪ್ರೇಮಗಳನ್ನು ಛೇದಿಸಿದೆ. ಕಾಮವನ್ನು ಬಾಧಿಸಿದೆ. ಕಾದಂಬರಿಯ ಹರಿವು ಕೂಡಾ ಇದಕ್ಕೆ ಪೂರಕವಾಗಿದೆ. ಪ್ರೇಮ-ಕಾಮಗಳ ಪೂರ್ವಾರ್ಧಕ್ಕಿಂತ ಬಿಡುಗಡೆಯ ಉತ್ತರಾರ್ಧಕ್ಕೆ ವಿಶೇಷ ಹೊಳಪಿದೆ. ಓದುತ್ತಾ ಇದು ಓದುಗನ ಅನುಭವಕ್ಕೆ ಬರುತ್ತದೆ. ಆ ಭಾಗದಲ್ಲಿ ಪಾತ್ರಗಳೊಂದಿಗೆ ಓದುಗನೂ ಹೆಜ್ಜೆ ಹಾಕುತ್ತಾನೆ, ಕುತೂಹಲಿಯಾಗುತ್ತಾನೆ, ಸಂಶಯಿಸುತ್ತಾನೆ. ಆತಂಕಿತನಾಗುತ್ತಾನೆ. ವಿವಶನಾಗುತ್ತಾನೆ, ಪರವಶನೂ ಆಗಿಹೋಗುತ್ತಾನೆ. ಪ್ರೇಮ-ಕಾಮಗಳೊಂದಿಗೆ ಹೆಜ್ಜೆ ಹಾಕುವುದು ಸಹಜ. ಆದರೆ ಬಿಡುಗಡೆಯೊಂದಿಗೆ ಹೆಜ್ಜೆ ಹಾಕಿಸಿ ಕಾದಂಬರಿ ಗೆಲ್ಲುತ್ತದೆ.

-ಜಗದೀಶಶರ್ಮಾ ಸಂಪ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)