Skip to product information
1 of 2

English : Fraderick Angels, Translation : Subramanya Gudge

ಪ್ರಕೃತಿಯ ಗತಿತಾರ್ಕಿಕತೆ

ಪ್ರಕೃತಿಯ ಗತಿತಾರ್ಕಿಕತೆ

Publisher -

Regular price Rs. 330.00
Regular price Rs. 330.00 Sale price Rs. 330.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 272

Type - Paperback

ಪ್ರಾಕೃತಿಕ ವಿಜ್ಞಾನದ ವಿವಿಧ ವಿಭಾಗಗಳು ಇಂದು ಅಗಾಧವಾಗಿ ಬೆಳೆದಿವೆ. ಒಂದು ಕಡೆ ಕೋಶ ಜೀವಶಾಸ್ತ್ರ ಜೀವಜಗತ್ತಿನ ರಹಸ್ಯವನ್ನು ಡಿ.ಎನ್.ಎ ಯ ಡಬ್ಬಲ್ ಹೆಲಿಕ್ಸ್ ರಚನೆ ಯಂತಹ ಆವಿಷ್ಕಾರಗಳ ಮೂಲಕ ಬೇಧಿಸುತ್ತಿದೆ. ಇನ್ನೊಂದು ಕಡೆ ಕ್ವಾಂಟಂ ಭೌತಶಾಸ್ತ್ರ ಪರಮಾಣು ಹಂತದ ಕಣಗಳ ಚಲನಶಾಸ್ತ್ರದ ನಿಯಮಗಳನ್ನು ಅನಾವರಣಗೊಳಿಸುತ್ತಾ, ಬ್ರಹ್ಮಾಂಡದ ಕಾಯಗಳೊಳಗಿನ ಪಕ್ರಿಯೆಯಲ್ಲೂ ಅವನ್ನು ಅನ್ವಯಿಸುತ್ತಾ ಬ್ರಹ್ಮಾಂಡದ ಹುಟ್ಟಿನ ರಹಸ್ಯವನ್ನು ಬೇಧಿಸುತ್ತಿದೆ.

ಈ ವಿಜ್ಞಾನಗಳ ಆವಿಷ್ಕಾರಗಳಾದ ನಿಯಮಗಳನ್ನು ಒಳನೋಟಗಳನ್ನು ಸಾಮಾನ್ಯಕರಿಸುವ ಸಮಗ್ರೀಕರಿಸುವ ಒಂದು ಲೋಕದೃಷಿಯ ಅಗತ್ಯವಿತ್ತು. ಈಗಲೂ ಇದೆ. ಇಂತಹ ಲೋಕದೃಷ್ಟಿಯನ್ನು ಏಂಗೆಲ್ಸ್ ತಮ್ಮ ಈ ಮೇರುಕೃತಿ 'ಪ್ರಕೃತಿಯ ಗತಿತಾರ್ಕಿಕತೆ' ಯಲ್ಲಿ ನಿರೂಪಿಸಿದ್ದಾರೆ. ಪ್ರಕೃತಿಯನ್ನು ಸಮಗ್ರವಾಗಿ ಸುಸಂಬದ್ಧವಾಗಿ ಅರ್ಥೈಸುವ ತತ್ವಶಾಸ್ತ್ರವನ್ನು ಇಲ್ಲಿ ಏಂಗೆಲ್ಸ್ ಮಂಡಿಸಿದ್ದಾರೆ. ಅದೇ ಅಮೂರ್ತವಾದ ಚಿಂತನೆ ಜಿಜ್ಞಾಸೆ ಊಹಾಪೋಹಗಳಿಗೆ ಸೀಮಿತವಾಗದ, ವೈಜ್ಞಾನಿಕ ಆಧಾರದ ಮೇಲೆ ನಿಂತ 'ಗತಿತಾರ್ಕಿಕ ಭೌತವಾದ'.

ಆದರೆ, 150 ವರ್ಷಗಳಷ್ಟು ಹಿಂದೆ ಬರೆದ ಈ ಪುಸ್ತಕವನ್ನು ಈಗ ಏಕೆ ಓದಬೇಕು? ಏಂಗೆಲ್ಸ್ ಇಲ್ಲಿ ಪ್ರತಿಪಾದಿಸಿದ ಮನುಷ್ಯ ಜ್ಞಾನ ಗಳಿಸುವ ಪ್ರಕ್ರಿಯೆ ಯಾವುದು ಎಂದು ಗ್ರಹಿಸುವ 'ಜ್ಞಾನ ಸಿದ್ಧಾಂತ' ಸಾರ್ವಕಾಲಿಕ ಮಹತ್ವದ್ದು. ವಿಜ್ಞಾನಿಗಳಲ್ಲೂ ಈಗಲೂ ಮುಂದುವರೆದಿರುವ ವಿಜ್ಞಾನಕ್ಕೆ ಮಾರಕವಾದ ಲೋಕದೃಷ್ಟಿಗಳ ಮೇಲೆ ಇಲ್ಲಿ ಮಾಡಿರುವ ವಿಮರ್ಶೆ ಈಗಲೂ ಪ್ರಸ್ತುತ. ವಿಜ್ಞಾನ ತನ್ನಷ್ಟಕ್ಕೆ ತಾನು ಪೂರ್ಣ ವಿಜ್ಞಾನಕ್ಕೆ ಒಂದು ದರ್ಶನದ ಅವಶ್ಯಕತೆ ಇಲ್ಲ ಎಂಬ ನಿಲುವಿನಿಂದ ವಿಜ್ಞಾನಕ್ಕೆ ಹಿಂದೆ ಹಿನ್ನಡೆಯಾಗಿದೆ. ಈಗಲೂ ಆಗುತ್ತಿದೆ. ಗತಿತಾರ್ಕಿಕತೆಯು ವಿಜ್ಞಾನದ ವಿವಿಧ ಅಂಗಗಳನ್ನು ಒಗ್ಗೂಡಿಸುವ ವಿಶಾಲ ಸಂಯೋಜನಾ ತತ್ವಗಳನ್ನು ಒದಗಿಸುತ್ತದೆ ಎಂಬ ಏಂಗೆಲ್ಸ್ ಪ್ರತಿಪಾದನೆ ಇಂದಿನ ಅಗತ್ಯ. ಇನ್ನೂ ಇತರ ಹಲವು ಅಂಶಗಳೊಂದಿಗೆ ಏಂಗೆಲ್ಸ್ ಇವನ್ನು ಪ್ರತಿಪಾದಿಸಲು ಬಳಸಿದ ವಿಶ್ಲೇಷಣಾ ವಿಧಾನ ಅತ್ಯಂತ ಮಹತ್ವದ್ದು. ಇವೆಲ್ಲವನ್ನುಇಲ್ಲಿನ ಪೂರಕ ಪಠ್ಯಗಳಲ್ಲಿ ನಿರೂಪಿಸಲಾಗಿದೆ. ಕಳೆದ 150ಕ್ಕೂ ಹೆಚ್ಚು ವರ್ಷಗಳ ಅಗಾಧ ಬೆಳವಣಿಗೆಗಳ ಬೆಳಕಿನಲ್ಲಿ ಈ ಕೃತಿಯ ಮೂಲ ಆಶಯಗಳನ್ನು ಮರುಓದಿಗೆ ಒಳಪಡಿಸುವ ಪ್ರಯತ್ನ ಸಹ ಇಲ್ಲಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)
0