Mohan Bhaskar Hegde
Publisher - ಸ್ನೇಹ ಬುಕ್ ಹೌಸ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕತೆ ಹೇಳುವವನಿಗೆ ಇರಬೇಕಾದ ಬಹುಮುಖ್ಯ ಗುಣವೆಂದರೆ ಸಹಾನುಭೂತಿ, ಮತ್ತೊಂದು ಪಾತ್ರದೊಳಗೆ ಇಳಿದು ಆ ಪಾತ್ರದ ಸುಖ-ದುಃಖಗಳನ್ನು ತನ್ನದು ಮಾಡಿಕೊಳ್ಳುವ ಗುಣ. ತಾಳಮದ್ದಲೆ ಅರ್ಥಧಾರಿಗಳಾದ ಮೋಹನ ಭಾಸ್ಕರ ಹೆಗಡೆ ಪುರಾಣದ ಅಸಂಖ್ಯ ಪಾತ್ರಗಳನ್ನು ಆವಾಹಿಸಿಕೊಂಡವರು. ಬದುಕನ್ನು ಎಳೆಯೆಳೆಯಾಗಿ ಬಿಡಿಸಿ ನೋಡಬಲ್ಲ ಸೂಕ್ಷ್ಮತೆ ಉಳ್ಳವರು. ಅವರ ಮೊದಲ ಸಂಕಲನದ ಕತೆಗಳನ್ನು ಓದುವಾಗ ನನಗೆ ಕಾಣಿಸಿದ್ದು ಅವರಿಗೆ ಸಹಜವಾಗಿರುವ ಮಾನವೀಯ ಗುಣ, ಅಕ್ಕರೆ ಮತ್ತು ಲೋಕಪ್ರೀತಿ. ಈ ಕತೆಗಳನ್ನು ಅವರು ಜಾಣತನದಿಂದ ಬರೆದಿಲ್ಲ. ತೋಚಿದಂತೆ ಬರೆದಿದ್ದಾರೆ. ತೋಚಿದ್ದನ್ನು ಕಾಣಿಸುವ ಕತೆಗಾರ ತನಗೆ ತೋಚದೇ ಇದ್ದದ್ದನ್ನೂ ಒಮ್ಮೊಮ್ಮೆ ತೋರಿಸುತ್ತಿರುತ್ತಾನೆ. ಹೀಗಾಗಿ ಇಂಥ ಕತೆಗಳಲ್ಲಿ ಅನುಕ್ತ ಮತ್ತು ಅನಿರ್ವಚನೀಯತೆ ಕೂಡ ಸೇರಿಕೊಂಡಿರುತ್ತದೆ. ಎಷ್ಟೋ ಸಲ ಅದು ಕತೆಗಾರನ ಕೈಮೀರಿ ಸಂಭವಿಸುವ ಸಂಗತಿಯೂ ಹೌದು, ಈ ಕತೆಗಳಲ್ಲಿ ಮೋಹನ ಭಾಸ್ಕರ ಹೆಗಡೆ ತಮ್ಮೊಳಗೆ ಹುಟ್ಟಿದ ಜಗತ್ತನ್ನು ನಮ್ಮ ಅನುಭವದ ಲೋಕವನ್ನಾಗಿ ಮಾಡಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರಭಾರಿ ಅವರ ಮೊದಲ ಕಥಾಸಂಕಲನ, ಅವರಿಂದ ಮತ್ತಷ್ಟು ಕತೆಗಳನ್ನು ನಿರೀಕ್ಷಿಸುವಂತೆ ಮಾಡುವಲ್ಲಿ ಇದು ಯಶಸ್ವಿಯಾಗಿದೆ.
- ಜೋಗಿ
