Skip to product information
1 of 1

B. K. Shivaram

ಪೊಲೀಸ್ ಕಂಡ ಕಥೆಗಳು

ಪೊಲೀಸ್ ಕಂಡ ಕಥೆಗಳು

Publisher -

Regular price Rs. 495.00
Regular price Rs. 495.00 Sale price Rs. 495.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಶ್ರೀ ಬಿ.ಕೆ. ಶಿವರಾಂ ಅವರ ಈ ಪುಸ್ತಕ ''ನಲವತ್ತು ವರ್ಷಗಳ ಹಿಂದಿನ ಮಾತು" ಎಂಬ ವಾಕ್ಯದಿಂದ ಬೆಂಗಳೂರನ್ನು ನಮ್ಮ ಕಣ್ಣೆದುರಿಗೆ ತರುತ್ತದೆ. ಓದುತ್ತಾ ಹೋದಂತೆ ಶ್ರೀ ಶಿವರಾಂರವರು ಇಂದಿನ ಮಾತನ್ನೇ ಹೇಳುತ್ತಿರಬಹುದೇನೋ ಎಂದು ಪುಸ್ತಕದ ಅಪರೂಪದ ರೌಡಿಗಳ ಕಥಾನಕದಲ್ಲಿ ನಮ್ಮನ್ನು ತಲ್ಲೀನಗೊಳಿಸುತ್ತಾರೆ. ಓದಿ ಮುಗಿಸದೇ ಮುಚ್ಚುವ ಪುಸ್ತಕ ಇದಲ್ಲ. ಮುಖ್ಯವಾಗಿ ಈ ಪೊಲೀಸ್ ಅಧಿಕಾರಿಯೊಬ್ಬ ಕಂಡ ಭೂಗತ ಪ್ರಪಂಚ ಓದುತ್ತಾ ಇದ್ದಂತೆ ನಮಗೆ ಅನ್ನಿಸುವುದು ಶ್ರೀ ಶಿವರಾಂ ನಮ್ಮ ನಡುವಿನ ಒಬ್ಬ ಉತ್ತಮ ಕಾದಂಬರಿಕಾರ ಆಗಬಹುದೆಂಬುದು.

ಯುರೋಪಿನ ಹಿಂದಿನ ಕಾದಂಬರಿಗಳ ಜೀವಾಳವಿರುವುದು ಅವು ಸೃಷ್ಟಿಸುವ ಅದೃಷ್ಟದ ಬೆನ್ನು ಹತ್ತಿದ ಅಲೆಮಾರಿ ಪಾತ್ರಗಳಲ್ಲಿ, ಈ ಪಾತ್ರಗಳ ಮೂಲಕ ಡಿಕೆನ್ಸ್‌ನಂತಹ ಕಾದಂಬರಿಕಾರರಲ್ಲಿ ಸಭ್ಯ ಅಸಭ್ಯ ಎರಡೂ ಕೂಡಿಕೊಂಡಂತಹ ಆಗಿನ ಪ್ರಪಂಚದ ದರ್ಶನವಾಗುತ್ತದೆ. ಆದರೆ ಭಾರತೀಯ ಕಾದಂಬರಿ ಪ್ರಪಂಚದಲ್ಲಿ ಇಲ್ಲಿನ ಎಲ್ಲ ವರ್ಗ ಜಾತಿಗಳ ಸ್ವಂತಿಕೆಯ ದರ್ಶನವಾಗುವುದಿಲ್ಲ. ಇದಕ್ಕೆ ಪ್ರಾಯಶಃ ಮುಖ್ಯ ಕಾರಣ ನಮ್ಮ ಕಾದಂಬರಿಕಾರರಲ್ಲಿ ಹಲವರು ಮಧ್ಯಮ ವರ್ಗದ ಘನತೆಯ ಕುಟುಂಬದಿಂದ ಬಂದವರು. ತಮ್ಮನ್ನು ಓದುವ ವರ್ಗಕ್ಕೆ ಕ್ಷೇಮದ ಭರವಸೆಯನ್ನು ಸಮಾಜದಲ್ಲಿ ಹುಟ್ಟಿಸುವ ಅಂತಃಕರಣ ಉಳ್ಳವರು.

ನಮ್ಮ ಪುಣ್ಯಕ್ಕೆ ಅಧೋ ಲೋಕವನ್ನು ಬಲ್ಲ ಶ್ರೀ ಶಿವರಾಮರಂತವರು ಈ ''ಪೊಲೀಸರು ಕಂಡ ಕಥನ'ಗಳನ್ನು ಬರೆಯುವಷ್ಟು ತಮ್ಮ ಕ್ಷೇಮ ಜೀವನದ ವರ್ಗದಾಚೆ ಕಣ್ಣು ಹಾಯಿಸಬಲ್ಲ ದೃಷ್ಟಿಯನ್ನು ತಮ್ಮ ಉದ್ಯೋಗ ನಿಷ್ಠೆಯಿಂದ ಪಡೆದವರು.

ಅಷ್ಟೇ ಅಲ್ಲ; ಶ್ರೀ ಶಿವರಾಮರವರ ಕನ್ನಡ ಗದ್ಯ ಅದರ ಸಂಯಮದಿಂದಲೂ ಅದರ ಅಚ್ಚುಕಟ್ಟಿನಿಂದಲೂ ಕಥನ ಶಕ್ತಿಯಿಂದಲೂ ಅವರನ್ನು ಕನ್ನಡದ ಒಬ್ಬ ಅಪೂರ್ವ ಬರಹಗಾರರನ್ನಾಗಿ ಮಾಡಿದೆ.

ಯು.ಆರ್. ಅನಂತಮೂರ್ತಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)