Osho, Translated bu Dr. T. N. Vasudevamurthy
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಭಾರತದಲ್ಲಿ ಪ್ರತಿಯೊಂದು ದಾರ್ಶನಿಕ ಪರಂಪರೆಯೂ ಬೇರೆ ಮತ್ತೊಂದು ಧಾರೆಯನ್ನು ಖಂಡಿಸುತ್ತ ಬೆಳೆದು ಬಂದಿರುವುದನ್ನು ಕಾಣಬಹುದು. ಆದರೆ ಯೋಗ ಈ ಬಗೆಯ `ತರ್ಕವೆಂಬ ತಗರ ಹೋರಟೆ'ಗೆ ಇಳಿಯದೆ ಎಲ್ಲ ದಾರ್ಶನಿಕ ಧಾರೆಗಳಲ್ಲೂ ಸಮಾನವಾಗಿ ವ್ಯಾಪಿಸಿರುವ ಒಂದು ವಿಶಿಷ್ಟ ಅನುಶಾಸನವಾಗಿದೆ. ತಂತ್ರ, ಶಾಕ್ತ, ಶೈವ, ಅದೈತ, ಬೌದ್ಧ, ಜೈನ ಮುಂತಾದ ಎಲ್ಲ ಸಾಧನಾ ಪಥಗಳೂ ಅಂತಿಮವಾಗಿ ಯೋಗ ಸಾಧನೆಯನ್ನೇ ಪ್ರತಿಪಾದಿಸುತ್ತವೆ. ಬೌದ್ಧರ ಮಹಾಸಿದ್ಧ ಪರಂಪರೆ, ಸಾಂಖ್ಯರ ಪ್ರಕೃತಿ-ಪುರುಷ ಲೀಲೆ, ಜೈನ ಅನುಭಾವಿಗಳಾದ ಉಮಾಸ್ವಾತಿ ಹಾಗು ಕುಂದಕುಂದಾಚಾರ್ಯರ ಅನಾಸ್ತವದ ಕುರಿತ ಬೋಧನೆಗಳು ಹಾಗು ಪಂಚ ಅಣುವ್ರತಗಳು, ಅದೈತಿಗಳ ವಿದೇಹ ಮುಕ್ತಿ, ಅಷ್ಟೇ ಅಲ್ಲ ಗೋರಕ್ಷ, ಮಂದ್ರ, ಜ್ಞಾನದೇವ, ಅಲ್ಲಮ ಮುಂತಾದ ಅವೈದಿಕ ದಾರ್ಶನಿಕರ ಬೆಡಗಿನ ವಚನಗಳೂ ಸಹ ಯೋಗ ಸಾಧನೆಯ ಹಿರಿಮೆಯನ್ನೇ ಎತ್ತಿ ಹಿಡಿಯುವುದನ್ನು ಕಾಣಬಹುದು. ಹೀಗೆ ಯೋಗವನ್ನು ಭಾರತದ ಸಮಸ್ತ ಆಧ್ಯಾತ್ಮಿಕ ವಿವೇಕದ ಅಂತಿಮ ಫಲವೆಂದು ಕರೆಯಬಹುದು.
-ಅನುವಾದಕರ ಮಾತುಗಳಿಂದ
ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್
