B. Padmanabha Somayaji
ಪಂಡಿತರಾಜ ಜಗನ್ನಾಥ
ಪಂಡಿತರಾಜ ಜಗನ್ನಾಥ
Publisher -
- Free Shipping Above ₹250
- Cash on Delivery (COD) Available
Pages - 408
Type - Paperback
ಪಂಡಿತರಾಜನ ದುರಂತ ಕಥನ
ಪಂಡಿತರಾಜ ಜಗನ್ನಾಥನು (1590-1670) ಗಂಗಾನದಿಯ ದಡದ ಅತ್ಯಂತ ಮೇಲಿನ ಸೋಪಾನದ ಮೇಲೆ ನಿಂತಿದ್ದಾನೆ. ಜಗನ್ನಾಥನು ಅತ್ಯಂತ ತೀವ್ರವಾದ ಭಾವಾವೇಶಕ್ಕೆ ಒಳಗಾಗಿದ್ದಾನೆ. ಉತ್ಕಂಠಿತನಾಗಿ ಗಂಗೆಯನ್ನು ಕುರಿತು ಭಕ್ತಿಪೂರ್ವಕವಾಗಿ ಶ್ಲೋಕಗಳನ್ನು ಪಠಿಸುತ್ತಿದ್ದಾನೆ. ಅವನು ಮೊದಲ ಶ್ಲೋಕವನ್ನು ಪೂರ್ಣಗೊಳಿಸುತ್ತಿರುವಂತೆಯೇ ಗಂಗೆಯು ಒಂದು ಮೆಟ್ಟಿಲನ್ನು ಏರುತ್ತಾಳೆ. ಜಗನ್ನಾಥನು ಒಂದೊಂದು ಶ್ಲೋಕವನ್ನು ಪೂರ್ಣಗೊಳಿಸುತ್ತಿರುವಂತೆಯೇ ಗಂಗೆಯು ಒಂದೊಂದು ಮೆಟ್ಟಿಲನ್ನು ಏರುತ್ತಾ ಬರುತ್ತಾಳೆ. 51ನೆಯ ಶ್ಲೋಕವನ್ನು ಪೂರ್ಣಗೊಳಿಸುವ ಹೊತ್ತಿಗೆ ಗಂಗೆ ಕುತ್ತಿಗೆಯ ಬಳಿ ಬಂದಿರುತ್ತಾಳೆ. 52ನೆಯ ಶ್ಲೋಕವನ್ನು ಪೂರ್ಣಗೊಳಿಸುತ್ತಿರುವಂತೆಯೇ ಗಂಗೆಯು ಜಗನ್ನಾಥನನ್ನು ಸಂಪೂರ್ಣವಾಗಿ ಆವರಿಸಿ ಅವನನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳುತ್ತಾಳೆ.
ಪಂಡಿತರಾಜ ಜಗನ್ನಾಥನು ದಕ್ಷಿಣದಿಂದ ಉತ್ತರಕ್ಕೆ ಏಕೆ ಹೋದ?
ಮೊಘಲ ಸಾಮ್ರಾಟ ಷಹಜಹಾನನ ಮಗಳು ಲವಂಗಿಯನ್ನು ಏಕೆ ಮದುವೆಯಾದ?
ದಿಲ್ಲಿಯನ್ನು ಬಿಟ್ಟು ಗಂಗಾನದಿಯ ತೀರಕ್ಕೆ ಏಕೆ ಬಂದ?
ಲವಂಗಿ ಏನಾದಳು?
ಜಗನ್ನಾಥನೇಕೆ ಗಂಗಾಲಹರಿಯನ್ನು ಹೇಳುತ್ತಾ ಗಂಗೆಯಲ್ಲಿ ವಿಲೀನನಾದ?
ಈ ರೋಚಕ ಕಾದಂಬರಿಯನ್ನು ಬರೆದವರು ವಿದ್ವಾನ್ ಬಂಟ್ವಾಳ ಪದ್ಮನಾಭ ಸೋಮಯಾಜಿಯವರು (1917-1977). ಸಂಸ್ಕೃತ ಮತ್ತು ಕನ್ನಡದಲ್ಲಿ ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿ, ಸ್ವಯಂ ಮಹಾರಾಜರ ಕೈಯಿಂದ ಚಿನ್ನದ ಪದಕವನ್ನು ಪಡೆದರು. ಅವರು 6 ಕಾದಂಬರಿಗಳಲ್ಲಿ ಮುಖ್ಯವಾದದ್ದು ನಿಮ್ಮ ಕೈಯಲ್ಲಿರುವ 'ಪಂಡಿತರಾಜ ಜಗನ್ನಾಥ' ಎನ್ನುವ ಕಾದಂಬರಿ. ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಪುಸ್ತಕ ಪ್ರಶಸ್ತಿಯು ಸಂದಿದೆ. 1969ರಲ್ಲಿ ಮುದ್ರಣವಾದ ಈ ಕಾದಂಬರಿಯ ಪ್ರತಿಗಳು ಅಲಭ್ಯವಾಗಿದ್ದವು. ಈಗ ಮರುಮುದ್ರಣವಾಗಿ ತಮ್ಮ ಕೈಯಲ್ಲಿದೆ. ಇದನ್ನು ಓದುವ ಸುಖ ತಮ್ಮದಾಗಲಿ!
-ಡಾ ನಾ. ಸೋಮೇಶ್ವರ
Share
Subscribe to our emails
Subscribe to our mailing list for insider news, product launches, and more.