Skip to product information
1 of 2

Geeta Kundapura

ಪಾಂಚಾಲಿಯಾಗಲಾರೆ

ಪಾಂಚಾಲಿಯಾಗಲಾರೆ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 120

Type - Paperback

ಪಾಂಚಾಲಿಯಾಗಲಾರೆ

ತಮ್ಮ ಕತೆಗಳ ಮುಖಾಂತರ ಸಾಹಿತ್ಯಾಸಕ್ತರ ಗಮನ ಸೆಳೆದಿರುವ ಗೀತಾ, ಕುಂದಾಪುರ ಕಥಾಪ್ರಿಯರಿಗೆ ಪರಿಚಿತ ಲೇಖಕಿ. ವಸ್ತುವಿನ ಆಯ್ಕೆಯಲ್ಲಿ, ಅದನ್ನು ಕಥಾಪ್ರಕಾರಕ್ಕೆ ಒಗ್ಗಿಸಿಕೊಳ್ಳುವ ಕಲೆಯಲ್ಲಿ ತಮ್ಮದೇ ವೈಶಿಷ್ಟ್ಯ ರೂಪಿಸಿಕೊಂಡಿರುವ ಲೇಖಕಿ ಓದುಗರಿಗೆ ಆಪ್ತವಾಗುವಂತೆ ಬರೆಯಬಲ್ಲ ಕಲೆಯನ್ನು ಸಿದ್ದಿಸಿಕೊಂಡಿದ್ದಾರೆ ಅನ್ನುವುದಕ್ಕೆ ಈ ಸಂಕಲನದ ಕತೆಗಳು ಸಾಕ್ಷಿಯಾಗಿವೆ. ಕೆಲವು ಕತೆಗಳು ಹೊಸ ಓದಿಗೆ ದಕ್ಕಿದಂತವು. ಕೌಟುಂಬಿಕ ಬದುಕನ್ನು ಕತೆಯಾಗಿಸುತ್ತಲೇ ತಮ್ಮ ಅನುಭವದ ವ್ಯಾಪ್ತಿಗೆ ಬರುವ ಇತರ ಸಂಗತಿಗಳನ್ನು ನವಿರಾಗಿ ಅದರೊಡನೆ ಪೋಣಿಸಿ ಓದುಗರಿಗೆ ಅದನ್ನು ದಾಟಿಸುತ್ತಾರೆ ಲೇಖಕಿ. ಕೌಟುಂಬಿಕವಲ್ಲದ ಅನ್ಯ ವಿಷಯಗಳಲ್ಲೂ ಇದೇ ಪರಿಣತಿ ಸಾಧಿಸಿದ್ದಾರೆ.

ಕುಂದಗನ್ನಡದ ಸೊಗಸಾದ ಕತೆ ನೆರೆ. ಹಳೆಯ ಕಂದಾಚಾರಕ್ಕೆ ಜೋತು ಬಿದ್ದ ಚಂದ್ರಣ್ಣ ಮಗಳು ನರ್ಸ್ ಆಗುವುದನ್ನು ವಿರೋಧಿಸುತ್ತಾರೆ. ಅವಳ ಅಸಹಜ ಸಾವು ಕೂಡಾ ಕದಲಿಸದ ಕಂದಾಚಾರವನ್ನು ಸ್ವತಃ ನೆರೆಯಲ್ಲಿ ಸಿಲುಕಿದ ಯುವತಿಯ ಜೀವ ಉಳಿಸಿದ ನಂತರ ಜೀವ ಕಾಪಾಡುವ ಕುರಿತಾದ ಸಾರ್ಥಕ ಭಾವನೆ ಮೂಡಿ ಬದಲಾಗುತ್ತಾರೆ ಚಂದ್ರಣ್ಣ. ನೆರೆಯ ಪ್ರಕೋಪವನ್ನು ವಿವರಿಸಿರುವ ಪರಿ ಕಣ್ಣಿಗೆ ಕಟ್ಟುವಂತಿದೆ.

ಪ್ರಕೃತಿ ವೈಭವದ ವರ್ಣನೆಯಿರಲಿ, ಪ್ರವಾಹದ ಭೀಕರತೆಯಿರಲಿ, ಪ್ರೀತಿ, ಪ್ರೇಮಗಳ ನವಿರು ಭಾವನೆಯಿರಲಿ, ಸ್ವಾರ್ಥದ ಪರಮಾವಧಿಯಿರಲಿ, ಒಳ್ಳೆಯತನದ ಅನಾವರಣವಿರಲಿ, ಇಲ್ಲಿನ ಕಥೆಗಳಲ್ಲಿ ಎಲ್ಲವೂ ಇವೆ ಮತ್ತು ಎಲ್ಲೂ ಕಪೋಲಕಲ್ಪಿತವೆನಿಸದೆ ಸಹಜವಾಗಿ ಮೂಡಿ ಬಂದಿವೆ. ಕೆಟ್ಟಿದ್ದಾಗುತ್ತದೆಯೆಂಬ ನಿರೀಕ್ಷೆ ಒಳಿತಾಗುವ ಅನಿರೀಕ್ಷಿತ ಅಂತ್ಯದ ಕತೆಗಳೂ ಇಲ್ಲಿವೆ. ಒಟ್ಟಿನಲ್ಲಿ ಹೇಳಬೇಕೆಂದರೆ ತಾವು ಕೈಗೆತ್ತಿಕೊಂಡ ವಸ್ತುಗಳಿಗೆ ನ್ಯಾಯ ಒದಗಿಸಿದ್ದಾರೆ ಲೇಖಕಿ. ತಮಗೆ ಬರವಣಿಗೆಯ ಕಲೆ ಸಿದ್ಧಿಸಿದೆಯೆಂಬುದನ್ನು ಸಾಬೀತುಪಡಿಸಿದ್ದಾರೆ. ಸಂಕಲನದ ಕೊನೆಯಲ್ಲಿ ನವಿರಾದ, ಚುರುಕಾದ ಕಿರುಗತೆಗಳೂ ಸೇರಿಕೊಂಡು ವೈವಿಧ್ಯಮಯ ಓದಿನ ಸವಿಯನ್ನು ಹೆಚ್ಚಿಸಿವೆ.

-ವಸುಮತಿ ಉಡುಪ (ಲೇಖಕಿ, ಮೈಸೂರು)

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)