Ghassan Kanafani, To Kannada : Ravi Hampi
ಪ್ಯಾಲೆಸ್ಟೀನ್‌ನ ಮಕ್ಕಳು
ಪ್ಯಾಲೆಸ್ಟೀನ್‌ನ ಮಕ್ಕಳು
Publisher -
- Free Shipping Above ₹250
- Cash on Delivery (COD) Available
Pages - 214
Type - Paperback
ಈತನ ಹೆಸರು ಘಸನ್ ಕನಫನಿ. ಪ್ಯಾಲೆಸ್ಟೀನ್ ದೇಶದವ. ಐವತ್ತು ವರುಷಗಳ ಹಿಂದೆ ಈತನನ್ನು ಬಾಂಬಿಟ್ಟು ಕೊಲ್ಲಲಾಯಿತು.
ಇಸ್ರೇಲಿನ ಕುಖ್ಯಾತ ಬೇಹುಗಾರಿಕೆ ಸಂಸ್ಥೆ 'ಮೊಸ್ಸಾದ್' ಈ ಕುಕೃತ್ಯವನ್ನು ಎಸಗಿತ್ತು. ಏಕೆಂದರೆ ಈತ ದಿಟ್ಟ ಲೇಖಕ, ಪ್ರಾಮಾಣಿಕ ಪತ್ರಕರ್ತ ಹಾಗೂ ಸೈದ್ಧಾಂತಿಕವಾಗಿ ಎಂದೂ ರಾಜಿಯಾಗದ ಪೊಲಿಟಿಕಲ್ ಅಕ್ಟಿವಿಸ್ಟ್ ಆಗಿದ್ದ. ತನ್ನ ದೇಶದ ಘನತೆ ಹಾಗೂ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿದ್ದ. ಈ ಕಾರಣಕ್ಕಾಗೇ ಘಸನ್ ಕನಫನಿಯನ್ನು ಬಾಂಬಿಟ್ಟು ಉಡಾಯಿಸಲಾಯಿತು. ಕಾರ್ ಬಾಂಬ್ ಸ್ಫೋಟದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಈತನ ದೇಹದ ಬಿಡಿ ಭಾಗಗಳನ್ನು, ಈತನ ಹೆಂಡತಿ ಹುಡುಕುಡುಕಿ ತೆಗೆದು ಅಂತ್ಯ ಕ್ರಿಯೆಗಾಗಿ ಜೋಡಿಸಿಕೊಳ್ಳಬೇಕಾಯಿತು.
ಘಸನ್ ಕನಫನಿ ತನ್ನ ಗಟ್ಟಿ ದನಿಯಿಂದಾಗಲೇ ಅರಬ್ ಜಗತ್ತಿನ ಗಮನ ಸೆಳೆಯಲಾರಂಭಿಸಿದ್ದ ಕಾಲವದು. ದಿನದಿಂದ ದಿನಕ್ಕೆ ಇಸ್ರೇಲಿನ ರಾಜಕೀಯ ಕುತಂತ್ರಗಳಿಗೆ ಬಲಿಯಾಗುತ್ತಿರುವ ತನ್ನ ಜನರ ಬಗ್ಗೆ ಬೇಸರವಾಗಿ ಸಿಟ್ಟಿನಿಂದ ಕನಲುತ್ತಿದ್ದ, ನಿದ್ದೆಗೆಡುತ್ತಿದ್ದ, ತಂತ್ರಕ್ಕೆ ಪ್ರತಿ ತಂತ್ರ ರೂಪಿಸುತ್ತಿದ್ದ ಕೆಲಕಾಲ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿಯೂ ಸೇವೆ ಸಲ್ಲಿಸಿದ್ದ ಈತ, 35 ನೇ ವರುಷಕ್ಕಾಗಲೇ ಬಿ. ಪಿ. ಶುಗರ್ ಗಳಿಗೆ ತುತ್ತಾಗಿ ಇನ್ಸುಲಿನ್ ಚುಚ್ಚಿಕೊಳ್ಳುತ್ತಿದ್ದ.
ಇಂಥಹ ಸಂಕ್ರಮಣ ಕಾಲಘಟ್ಟದಲ್ಲಿ ಒಬ್ಬ ಕಥೆಗಾರನಾಗಿ, ನಿಗಿ ನಿಗಿ ಕೆಂಡದಂತಹ ಭಾವನೆಗಳನ್ನು ಕೂಡ ಬೆಳದಿಂಗಳ ತಂಪಿನಲಿ ಮೀಯಿಸಿ ತೋರಿಸುವ ಈತನ ನಿರೂಪಣೆಯ ಸಂಯಮ ನಿಜಕ್ಕೂ ಅಚ್ಚರಿ ಉಂಟುಮಾಡುತ್ತದೆ. ಈತನನ್ನು ಮೊದಲ ದರ್ಜೆಯ ಲೇಖಕರ ಸಾಲಿನಲ್ಲಿ ನಿಲ್ಲಿಸುತ್ತದೆ. ಹೌದು, ಸಹೃದಯತೆ ಸುಮ್ಮನೆ ಬರುವುದಿಲ್ಲ Resilience ಮತ್ತು Stone Cold ಎಂಬ ಈ ಎರಡೂ ಪದ ಪರಿಕಲ್ಪನೆಗಳನ್ನು ಅನುಭವಿಸಲಾದರೂ, ನೀವೀ ಕತೆಗಳನ್ನು ಒಮ್ಮೆ ಮುಟ್ಟಿ ನೋಡಬೇಕು. 'ಪ್ಯಾಲೆಸ್ಟೀನ್‌ನ ಮಕ್ಕಳು' ಎಂಬ ಹೆಸರನಲಿ ರವಿ ಹಂಪಿ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ.
Share
Subscribe to our emails
Subscribe to our mailing list for insider news, product launches, and more.