Skip to product information
1 of 1

Dr. K. Shivaram Karanth

ಔದಾರ್ಯದ ಉರುಳಲ್ಲಿ

ಔದಾರ್ಯದ ಉರುಳಲ್ಲಿ

Publisher - ಐಬಿಹೆಚ್ ಪ್ರಕಾಶನ

Regular price Rs. 380.00
Regular price Rs. 380.00 Sale price Rs. 380.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಕೋಟ ಶಿವರಾಮ ಕಾರಂತರಿಗೆ ಒಂದು ವಿಶಿಷ್ಟವಾದ ಉನ್ನತ ಸ್ಥಾನವಿದೆ. 1902 ಅಕ್ಟೋಬರ್ 10ರಂದು ಜನಿಸಿದ ಕಾರಂತರದು ಕಥೆ, ಕಾದಂಬರಿ, ಗೀತನಾಟಕ, ಶಿಶುಸಾಹಿತ್ಯ, ವಿಜ್ಞಾನ ಸಾಹಿತ್ಯಯಕ್ಷಗಾನ- ಹೀಗೆ ಎಲ್ಲದರಲ್ಲೂ ಹಿರಿಯ ಸಾಧನೆ. ಅವರ ಬಗ್ಗೆ "ಆಡು ಮುಟ್ಟದ ಸೊಪ್ಪಿಲ್ಲ", ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ' ಎಂಬ ಮಾತು ಜನಜನಿತವಾಗಿದೆ. 'ಕೋಳಿ ಸಾಕಣೆಯಿಂದ ಹಿಡಿದು 'ವಿಜ್ಞಾನ ಪ್ರಪಂಚ'ದವರೆಗೆ ಅವರ ಬರಹದ ಹರವು, ಬಾಲಕ ಬಾಲಕಿಯರಿಗಾಗಿ ಇವರು ರಚಿಸಿಕೊಟ್ಟ 'ಬಾಲಪ್ರಪಂಚ'ದ ಮೂರು ಸಂಪುಟಗಳು ಹಾಗೂ ವಿಚಾರ ಪ್ರಪಂಚ'ದ ನಾಲ್ಕು ಸಂಪುಟಗಳು ಅತ್ಯಂತ ಉಪಯುಕ್ತ ಕೃತಿಗಳಾಗಿ, ಎಲ್ಲರ ಮೆಚ್ಚುಗೆ ಗಳಿಸಿವೆ. ಕಾರಂತರು 'ಸಿರಿಗನ್ನಡ ಅರ್ಥಕೋಶ' ರಚಿಸಿ, ನಿಘಂಟು ಕ್ಷೇತ್ರದಲ್ಲೂ ತಮ್ಮ ಸಾಧನೆಯನ್ನು ಮೆರೆದಿದ್ದಾರೆ. ದೇಶ ವಿದೇಶಗಳಲ್ಲಿ ಸಂಚರಿಸಿ, ಪ್ರವಾಸ ಸಾಹಿತ್ಯವನ್ನೂ ರಚಿಸಿದ್ದಾರೆ.

ನೃತ್ಯ ಮತ್ತು ಯಕ್ಷಗಾನಗಳಲ್ಲಿ ಪರಿಣತಿ ಪಡೆದಿರುವ 'ಕಡಲ ತೀರದ ಭಾರ್ಗವ' ಎಂದು ಖ್ಯಾತರಾಗಿರುವ ಕಾರಂತರಂತಹ ವ್ಯಕ್ತಿ ಯಾವ ರಾಷ್ಟ್ರಕ್ಕಾದರೂ ಭೂಷಣ. ತಮ್ಮ ಸ್ವಂತ ಭಾಷೆಯಲ್ಲೇ ತಮ್ಮ ಆಲೋಚನೆಗಳನ್ನು ಪ್ರಕಟಿಸಿದರೂ, ಅವರು ವಿಶ್ವಮಾನವರು. ಪ್ರಪಂಚದ ಇತರ ಸಾಹಸಿಗಳಂತೆ ಇವರೂ ಸಮಾಜದಿಂದ ಪ್ರತ್ಯೇಕವಾಗಿ ನಿಲ್ಲುವ ವ್ಯಕ್ತಿ ಧ್ರುವತಾರೆ.

ಕಾರಂತರು ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ, ಒಂದು ಸಂಸ್ಥೆ. ಅವರು ಕೃತಿವೀರರು, ಸಾಹಸಜೀವಿ, ಸಮಾಜದ ವಿಮರ್ಶಕ, ಪ್ರಯೋಗಪ್ರಿಯ, ಕಲೆ, ಸಾಹಿತ್ಯ, ನೃತ್ಯ, ಪ್ರವಾಸ, ಖಂಡಿತವಾದ ಈ ಒಂದೊಂದರಲ್ಲಿಯೂ ಕಾರಂತರದ್ದೇ ವಿಶಿಷ್ಟ ಛಾಪು, ನೇರವಾದ ನಡೆ ನುಡಿ, ಉಲ್ಲಾಸ ಪ್ರವೃತ್ತಿ, ಉದ್ಯಮಶೀಲವಾದ ಚೇತನ, ಪ್ರವಾಸಪ್ರಿಯ, ನಿಸರ್ಗಪ್ರೇಮಿ. ತಮ್ಮ ಅನುಭವಕ್ಕೆ ನಿಲುಕದ ಯಾವ ಒಂದು ಮಾತನ್ನೂ ಅವರು ಆಡರು, ಬರೆಯರು.

ತಮ್ಮ 'ಮೂಕಜ್ಜಿಯ ಕನಸುಗಳು' ಕಾದಂಬರಿಗಾಗಿ ಭಾರತೀಯ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕಾರಂತರಿಗೆ ಕೇಂದ್ರ ಸರಕಾರವು ಪದಭೂಷಣ' ಪ್ರಶಸ್ತಿ ನೀಡಿ ಗೌರವ ಸೂಚಿಸಿದೆ. ಕೇಂದ್ರ ಸಾಹಿತ್ಯ ಅಕಾದೆಮಿಯ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ನಾಡಿನ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಹದವಿಯನ್ನಿತ್ತು ಗೌರವಿಸಿವೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)