Gopalakrishna Kuntini
ONLY ಪಾಲಿಟಿಕ್ಸ್
ONLY ಪಾಲಿಟಿಕ್ಸ್
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 168
Type - Paperback
ಮರು ಭೂಮಿಯ ರಾಜ್ಯವೊಂದರ ರಾಜನಿಗೆ ಒಮ್ಮೆ ಒಂಟೆಗಳೆಲ್ಲಾ ನಕ್ಕಂತೆ ಕನಸು ಬೀಳುತ್ತದೆ.
'ಒಂಟೆಗಳೇಕೆ ನಕ್ಕವು?' ಎಂದು ರಾಜ ಪಂಡಿತರ ಸಭೆ ಕರೆದು ಕೇಳುತ್ತಾನೆ.
ಒಂಟೆಗಳು ನಗುವುದಿಲ್ಲ, ನಗುವುದು ಮನುಷ್ಯರು ಮಾತ್ರಾ ದೊರೆಯೇ' ಎಂದು ಪಂಡಿತರು ಹೇಳುತ್ತಾರೆ.
ರಾಜ,'ಹಾಗಾದರೆ ನನ್ನ ರಾಜ್ಯದಲ್ಲಿ ಪ್ರಜೆಗಳೆಲ್ಲರೂ ನಗುತ್ತಾರೆಯೇ?' ಎಂದು ಅಚ್ಚರಿಯಿಂದ ಕೇಳುತ್ತಾನೆ. ಅದಕ್ಕೆ ಪಂಡಿತರು, 'ಮನುಷ್ಯರು ನಗುವುದು ಸಹಜ ಧರ್ಮ' ಎಂದು ವಿವರಿಸುತ್ತಾರೆ. ಮರುದಿನ ಮತ್ತೆ ಪಂಡಿತರ ಸಭೆ ಕರೆದ ರಾಜ, 'ಕಳೆದ ರಾತ್ರಿ ನನಗೆ ಕನಸಲ್ಲಿ ಪ್ರಜೆಗಳೆಲ್ಲಾ ಅತ್ತಂತೆ ಕಾಣಿಸಿತು' ಎಂದು ಹೇಳುತ್ತಾನೆ. ಪಂಡಿತರು, 'ಮನುಷ್ಯರು ಅಳುವುದೂ ಸಹಜ ಧರ್ಮ' ಎಂದು ವಿವರಿಸುತ್ತಾರೆ. ಮೂರನೇ ದಿನ ರಾಜ ಅದೇ ಪಂಡಿತರ ಸಭೆ ಕರೆದು 'ನನಗೆ ಕನಸಲ್ಲಿ ಪ್ರಜೆಗಳೆಲ್ಲಾ ನಕ್ಕಂತೆಯೂ, ಒಂಟೆಗಳೆಲ್ಲಾ ಅತ್ತಂತೆಯೂ ಕನಸು ಬಿತ್ತು' ಎಂದು ಹೇಳುತ್ತಾನೆ. ಈಗ ಪಂಡಿತರು ರಾಜನಿಗೆ ಒಂದು ಸಲಹೆ ನೀಡುತ್ತಾರೆ, 'ರಾಜನೇ ಮೊದಲು ನೀನು ನಗಲು ಕಲಿ. ನಂತರ ಅಳಲು ಕಲಿ. ನಗು ಮತ್ತು ಅಳುವನ್ನು ಧಿಕ್ಕರಿಸಿದ ನೀನು ರಾಜ್ಯವನ್ನು ಹೇಗೆ ಆಳುವೆ? ನೀನು ನಕ್ಕರೆ ಒಂಟೆಗಳು ನಗಲಾರವು, ನೀನು ಅತ್ತರೆ ಪ್ರಜೆಗಳು ಅಳಲಾರರು.'
ಈ ಪುಸ್ತಕ ಈ ಕಾಲದ ರಾಜ ಮತ್ತು ಪ್ರಜೆಗಳ ಕತೆಗಳ ಸಂಗ್ರಹ.
Share
Subscribe to our emails
Subscribe to our mailing list for insider news, product launches, and more.