Rajamma D. K.
Publisher - ಸಾವಣ್ಣ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಜೀವನದಲ್ಲಿ ಪ್ರೇರಣೆ ವಹಿಸುವ ಪಾತ್ರ ಅಪಾರ, ಪ್ರೇರಣೆಗೆ ವಸ್ತು ಅಥವಾ ಏಷಯ ಇಂತಹದೇ ಆಗಿರಬೇಕೆಂಬ ಯಾವುದೇ ನಿಯಮದಿಲ್ಲ. ಶಕ್ತಿಯುತವಾದ ಒಂದು ಹೇಳಿಕೆ, ಸಾಂತ್ವನದ ಒಂದು ಮಾತು ಕೇಳಿದ ಕಥೆ, ನೋಡಿದ ಚಲನಚಿತ್ರ, ಓದಿದ ಪುಸ್ತಕ, ದಿನನಿತ್ಯದ ಜೀವನದಲ್ಲಿ ನಡೆಯುವ ಆಗುಹೋಗುಗಳು, ಭೇಟಿ ಮಾಡುವ ವ್ಯಕ್ತಿಗಳು, ಭಾಗವಹಿಸುವ ಸಭೆಸಮಾರಂಭಗಳು, ಹಿರಿಯರ ಅನುಭವದ ಹಿತನುಡಿಗಳು, ಮಹಾನುಭಾವರ ಜೀವನದಲ್ಲಿ ನಡೆದ ಘಟನೆಗಳು, ಒಂದು ಸಂದೇಶ... ಹೀಗೆ ಯಾವುದೇ ಮೂಲಗಳಿಂದ ಹರಿದು ಬರುವ ಒಳ್ಳೆಯ ವಿಚಾರಗಳು ಒಳ್ಳೆಯ ಬದುಕಿಗೆ ಪ್ರೇರಣೆ ನೀಡುತ್ತವೆ. ಬದುಕು ಇನ್ನೇನು ಮುಗಿದುಹೋಯಿತು ಎಂದು ತಲೆ ಮೇಲೆ ಕೈಹೊತ್ತು ಕುಳಿತವನನ್ನು ಮತ್ತೆ ಎದ್ದು ನಿಲ್ಲುವಂತೆ ಮಾಡುತ್ತವೆ, ಬದುಕಿನ ದಿಕ್ಕನ್ನೇ ಬದಲಿಸುತ್ತವೆ ಎಂಬ ನಂಬಿಕೆ ನನ್ನದು. ಈ ನಿಟ್ಟಿನಲ್ಲಿ ಪ್ರೇರಣೆ ಪ್ರೇರಣೆಗೆ ಕಾರಣವಾಗುತ್ತದೆ ಎಂಬ ಮಾತಿನಂತೆ ವಿವಿಧ ಮೂಲಗಳಿಂದ ಲಭಿಸಿದ ವಸ್ತು ವಿಷಯಗಳಿಂದ ಪ್ರೇರಿತಳಾಗಿ 'ಒಂದು ಕಥೆ ಹೇಳ್ತಾ...' ಎಂಬ ಈ ಕೃತಿ ರಚನೆಗೆ ಮುಂದಾಗಿ, ಎಲ್ಲ ವಯೋಮಾನದವರಿಗೂ ಆಪ್ತವಾಗುವ ರೀತಿಯಲ್ಲಿ, ಸರಳವಾದ ಭಾಷೆಯಲ್ಲಿ, ಚಿಕ್ಕ ಚಿಕ್ಕ ಕಥೆಗಳ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಈ ಕಥೆಗಳಲ್ಲಿ ಪ್ರೇರಣೆಯ ಜೊತೆಗೆ ನೀತಿಯ ಲೇಪನವಿದೆ. ಜೀವನೋತ್ಸಾಹಕ್ಕೆ ಚೈತನ್ಯ ತುಂಬುವ ಪ್ರಸಂಗಗಳಿವೆ. ಇವು ಓದುಗರ ಮನಸ್ಸನ್ನು ಮುಟ್ಟಿ, ಹೃದಯವನ್ನು ತಟ್ಟುತ್ತವೆ ಎಂದು ಭಾವಿಸಿದ್ದೇನೆ.
ರಾಜಮ್ಮ ಡಿ.ಕೆ.
ರಾಜಮ್ಮ ಡಿ.ಕೆ.
