Dr. D. N. Shankara Batt
Publisher - ಡಿ. ಎನ್. ಶಂಕರ ಬಟ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡದಲ್ಲಿ ನುಡಿಯರಿಮೆಯ ಕುರಿತಾಗಿ ಬಂದಿರುವ ಬರಹಗಳು ತುಂಬಾ ಕಡಿಮೆ. ಇವುಗಳಲ್ಲಿ ಹೆಚ್ಚಿನವೂ ಇಂಗ್ಲೀಶ್ ಪದಗಳಿಗೆ ಬದಲಿಗೆ ಸಂಸ್ಕ್ರುತ ಪದಗಳನ್ನು ಇಲ್ಲವೇ ಸಂಸ್ಕ್ರುತ ಪದ ಮತ್ತು ಒಟ್ಟು(ಪ್ರತ್ಯಯ)ಗಳನ್ನು ಬಳಸಿ ಹೊಸದಾಗಿ ಉಂಟುಮಾಡಿದ ಪದಗಳನ್ನು ಬಳಸುತ್ತವೆ. ಇಂತಹ ಬರಹಗಳನ್ನು ಓದಿ ತಿಳಿದುಕೊಳ್ಳುವುದು ಕಶ್ಟ. ಇದಲ್ಲದೆ, ಇಂತಹ ಬರಹಗಳನ್ನು ಕನ್ನಡದಲ್ಲಿ ಹೊಸದಾಗಿ ಬರೆಯಬೇಕೆಂದಿರುವವರಿಗೆ ತಮಗೆ ಬೇಕಾಗುವ ಹೊಸಪದಗಳನ್ನು ಉಂಟುಮಾಡಲು ಸಂಸ್ಕ್ರುತದ ತಿಳಿವು ಬೇಕಾಗುತ್ತದೆ.
ಇಂತಹ ಬರಹಗಳಿಗೆ ಬೇಕಾಗುವ ಹೊಸಪದಗಳನ್ನು ಕನ್ನಡದಲ್ಲೇ ಉಂಟುಮಾಡಲು ಬರುತ್ತದೆ ಎಂಬುದನ್ನು ಈ ಪದನೆರಕೆ ತೋರಿಸಿಕೊಡುತ್ತದೆ, ಮತ್ತು ಅಂತಹ ಹಲವಾರು ಪದಗಳನ್ನು ಕಟ್ಟಿಕೊಡುತ್ತದೆ. ಇದಲ್ಲದೆ, ಈ ಪದಗಳ ಕುರಿತಾಗಿ ವಿವರಣೆಯನ್ನೂ ಉದಾಹರಣೆಗಳೊಂದಿಗೆ ಕೊಡುತ್ತದೆ.
