Dr. C. R. Chandrashekar
Publisher - ನವಕರ್ನಾಟಕ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
"ನಿಮ್ಮ ಮಗು, ನಿಮ್ಮ ಕರುಳಿನ ಕುಡಿ"
"ನಿಮ್ಮ ಮನೆಯ, ನಿಮ್ಮ ಮುಪ್ಪಿನ ಆಧಾರ ಸ್ತಂಭ"
ಅದರ ಪಾಲನೆ-ಪೋಷಣೆಯ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಮಗು ಬೆಳೆದು ಪ್ರೌಢನಾಗುವುದು ಒಂದು ಸಂಕೀರ್ಣ ಪ್ರಕ್ರಿಯೆ. ಬೆಳವಣಿಗೆ ಎಂದರೆ ಕೇವಲ ದೇಹ ಬೆಳೆಯುವುದಲ್ಲ. ಮನಸ್ಸು ಬೆಳೆಯಬೇಕು, ಬುದ್ಧಿ ವಿಕಾಸವಾಗಬೇಕು. ಇದಕ್ಕೆ ಪುಷ್ಟಿಕರವಾದ ಆಹಾರ, ಆಟ, ಪಾಠ ಎಷ್ಟು ಮುಖ್ಯವೋ, ನಿಮ್ಮ ಮಮತೆ, ಮಾರ್ಗದರ್ಶನ, ಆಸರೆ ಪ್ರೋತ್ಸಾಹಗಳೂ ಅಷ್ಟೇ ಮುಖ್ಯ. ಬೆಳೆಯುವ ಮಗು ಅನಾರೋಗ್ಯಪೀಡಿತವಾಗುವುದು ಸಹಜ. ಅನಾರೋಗ್ಯ ದೇಹಕ್ಕೆ ಬರಬಹುದು, ಮನಸ್ಸಿಗೆ ಬರಬಹುದು. ಯಾವುದೇ ಅನಾರೋಗ್ಯವನ್ನು ಪ್ರಾರಂಭದಲ್ಲೇ ಗುರುತಿಸಬೇಕು. ಸೂಕ್ತ ಚಿಕಿತ್ಸೆ ಮತ್ತು ಪರಿಹಾರವನ್ನು ನಡೆಸಬೇಕು. ಮಾನಸಿಕ ಅನಾರೋಗ್ಯ ಮಕ್ಕಳಲ್ಲಿ ಹಲವು ಬಗೆಯಲ್ಲಿ ಕಾಣಿಸಿಕೊಳ್ಳುತ್ತದೆ.
ಡಾ. ಸಿ. ಆರ್. ಚಂದ್ರಶೇಖರ್‌ರವರ ಕಿರು ಹೊತ್ತಿಗೆ ಈ ದಿಶೆಯಲ್ಲಿ ನಿಮಗೊಂದು ದಿಕ್ಸೂಚಿ.
