Dr. H. Girijamma
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ತಾಯ್ತನವೆಂಬುದು ಪ್ರಕೃತಿ ಹೆಣ್ಣಿಗೆ ಮಾತ್ರವೇ ನೀಡಿರುವ ಕೊಡುಗೆ ಎಂಬುದನ್ನು, ಗರ್ಭ ಧರಿಸುವುದು ಕಾಯಿಲೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ತಾಯಿಯ ಗರ್ಭದಿಂದ ಹೊರ ಜಗತ್ತಿಗೆ ಬಂದ ಕೂಡಲೇ ಗಾಬರಿಯಿಂದ ಅಳುವ ಮಗು, ಸೃಷ್ಟಿಯ ಅದ್ಭುತಗಳಲ್ಲೊಂದು. ಈ ಅದ್ಭುತ ಶಿಶುವಿನ ಮುಂದಿನ ದಿನಗಳನ್ನು ಸಹ್ಯಗೊಳಿಸುವಲ್ಲಿ ಬೇರೆಲ್ಲರಿಗಿಂತ ಹೆಚ್ಚಾಗಿ ತಾಯಿಯ ಪಾತ್ರ ಮಹತ್ವದ್ದು. ಗರ್ಭ ಧರಿಸಿದ ದಿನದಿಂದಲೇ ತಾಯ್ತನದ ಹೊಣೆಗಾರಿಕೆ ಪ್ರಾರಂಭವಾಗುತ್ತದೆ.
ನಿಮ್ಮ ಮಗುವನ್ನು ಪೋಷಿಸುವಲ್ಲಿ, ಮಗುವಿಗೆ ಕಾಯಿಲೆ ಬಂದ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಕ್ರಮಗಳ ಕುರಿತು, ಆಹಾರ ಮತ್ತು ಪಾಲನೆ-ಪೋಷಣೆ ಕುರಿತು ಎಚ್. ಗಿರಿಜಮ್ಮ ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಿದ್ದಾರೆ. ಪ್ರಸೂತಿ ತಜ್ಞೆಯಾದ ಇವರು, ವೈದ್ಯಕೀಯ ಲೇಖನಗಳೇ ಅಲ್ಲದೆ ಕಥೆ, ಕಾದಂಬರಿಗಳನ್ನೂ ಬರೆದಿದ್ದಾರೆ
ಇವರ 'ಮಿತ ಸಂತಾನಕ್ಕೆ ಸರಳ ಮಾರ್ಗಗಳು', 'ಬಸಿರು', 'Instruments used in Midwifery' ಕೃತಿಗಳನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.
