Keshava Malagi
ನೇರಳೆ ಮರ
ನೇರಳೆ ಮರ
Publisher -
- Free Shipping Above ₹300
- Cash on Delivery (COD) Available
Pages - 115
Type - Paperback
Couldn't load pickup availability
ತಮ್ಮ ಕಾವ್ಯಾತ್ಮಕ ಭಾಷೆಯ ಮೂಲಕ ಸಮುದಾಯಗಳ ಅತ್ಯಂತ ಖಾಸಗಿ ಹಾಗೂ ಸಾರ್ವಜನಿಕವಾದ ಸಂಕೀರ್ಣ ಅನುಭವಗಳನ್ನು ಸಮರ್ಥವಾಗಿ ದಾಖಲಿಸುತ್ತ ಬಂದಿರುವ ಕೇಶವ ಮಳಗಿ ಅವರ ಹೊಸ ಬಗೆಯ ಕಥನಗಳನ್ನು 'ನೇರಳೆ ಮರ' ಅನಾವರಣಗೊಳಿಸುತ್ತದೆ. ಕಥೆ, ಕಾವ್ಯ, ಲಲಿತ ಪ್ರಬಂಧಗಳ ಅಂಶಗಳನ್ನು ಒಳಗೊಂಡಿರುವ ಇಲ್ಲಿನ ಕಥನಗಳು ಅವರ ವಿಶಿಷ್ಟ ಅನುಭವಗಳನ್ನು: ವಿಸ್ತಾರವಾದ ಓದನ್ನು ಏಕಕಾಲಕ್ಕೆ ಪ್ರಕಟಿಸುತ್ತವೆ. ಮನುಷ್ಯನ ಅತಿಮೂಲಭೂತ ಗುಣಲಕ್ಷಣಗಳಾದ ಅನುರಾಗ, ಅಗಲಿಕೆ, ಅಸ್ತಿತ್ವ ಹಾಗೂ ಸಾವಿನ ಭಯ; ಸಂಬಂಧಗಳ ಗೋಜಲು ಇತ್ಯಾದಿಗಳನ್ನು ಈ ಕಥನಗಳು ಹೊಸ ಛಂದಸ್ಸಿನ ಮೂಲಕ ಪ್ರಸ್ತುತಪಡಿಸಿ ಓದುಗರನ್ನು ಚಕಿತರನ್ನಾಗಿಸುತ್ತ ಚಿಂತನೆಗೆ ಹಚ್ಚುತ್ತವೆ. ಇಲ್ಲಿ ಸೃಷ್ಟಿಗೊಂಡಿರುವ ನೂರಾರು ರೂಪಕಗಳು ಈ ಕಥನಗಳ ಮೌಲ್ಯವನ್ನು ಹೆಚ್ಚಿಸಿವೆ. ಮಳಗಿಯವರ ಬರಹಗಳು ಮುಗ್ಧತೆ ಮತ್ತು ಭಾವುಕತೆ ಸಂಲಗ್ನಗೊಂಡ; ಹೊಸ ಸಂಬಂಧಗಳಿಗಾಗಿ ತೀವ್ರವಾಗಿ ಹಾತೊರೆವ ಕಾರಣಕ್ಕೆ ರಾಜಕೀಕರಣಗೊಳ್ಳುವ ಪ್ರಜ್ಞೆಯ ಅಭಿವ್ಯಕ್ತಿ ಎಂಬ ಡಿ.ಆರ್. ನಾಗರಾಜ್ ಅವರ ಗ್ರಹಿಕೆ ಈ ದೃಷ್ಟಿಯಿಂದ ಗಮನಾರ್ಹ.
Share


Subscribe to our emails
Subscribe to our mailing list for insider news, product launches, and more.