M. Narasimhamurthy
ನೆನೆ ಮನವೇ
ನೆನೆ ಮನವೇ
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹300
- Cash on Delivery (COD) Available
Pages - 320
Type - Paperback
Couldn't load pickup availability
ಇಂದು ಬೆಂಗಳೂರು ಚಹರೆ ಇಲ್ಲದ ನಗರ. ಹಳಬರಿಗೆ ಅದನ್ನು ಕಂಡರೆ ಹಳವಂಡ; ಹೊಸಬರಿಗೆ ಉದ್ಯೋಗಪರ್ವದ ಹೇಷಾರವ. ನಾಗರಿಕತೆಯ ಕುರುಡು ರಚನೆಗೆ ಹಳೆಯ ಚಿತ್ರ ಮಾಸಲಾಗಿದೆ, ಚಿತ್ರಪಟ ಹರಿದುಹೋಗಿದೆ. ಆದರೂ ವೃದ್ಧ ಕಲಾವಿದನ ಜಬ್ಬಲು ಬಟ್ಟೆ ಬರೆ ಒಂದು ಕಾಲಕ್ಕೆ ಆತ ಗೌರವಾನ್ವಿತವಾಗಿ ಬಾಳಿದ್ದನ್ನು ಸೂಚಿಸುವಂತೆ ಹಳೆಯ ಬೆಂಗಳೂರಿನ ಗೌರವಶಾಲಿ ಬಾಳು ಇಲ್ಲಿ ರೇಖಾಂಕಿತವಾಗಿದೆ. ಬರುವ ದಿನಗಳಲ್ಲಿ ನರಸಿಂಹಮೂರ್ತಿಯವರ 'ನೆನೆ ಮನವೇ? ಪುಸ್ತಕ ಕಳೆದುಹೋದ ದಕ್ಷಿಣ ಬೆಂಗಳೂರಿನ ಸಾಂಸ್ಕೃತಿಕ ನೆನಪಿನ ಶಾಲೆಯಾಗಿ ಉಳಿಯಲಿದೆ.
ಯಾವುದೋ ಹಳೆಯ ನೆನಪು, ಒಂದು ನೆನಪಿನ ಪಕಳೆ, ಒಂದು ಹೂವಿನ ಅಂದ, ಮೂಗಿಗೆ ಹೀರಿಕೊಂಡ ಸೌರಭ ಎಲ್ಲವೂ ನರಸಿಂಹಮೂರ್ತಿಯವರಿಗೆ ಮುಖ್ಯ. ಹಳೆಯ ಸಿನಿಮಾ ಟೆಂಟುಗಳು, ಆ ಕಾಲದ ಸಿನಿಮಾ ನಟರು, ಬೆಂಗಳೂರಿನ ಕೆರೆ, ಹೊಲ, ಗದ್ದೆ ಬೆದ್ದಲಗಳು ಈ ಪುಸ್ತಕದಲ್ಲಿ ಮತ್ತೆ ಪುನರ್ಜನ್ಮ ಪಡೆದಿವೆ. ಕರ್ಣಾಟಕದ ರಾಜಕೀಯ ಪರ್ವದ ಹೃದಯವಾಗಿರುವ ಬೆಂಗಳೂರಿನ ವನಪರ್ವ ಸಭಾಪರ್ವಗಳು ಇಲ್ಲಿ ಸುಂದರವಾಗಿ ಮೂಡಿದೆ. ನಗರವು ಮಹಾನಗರವಾಗಿ ಬೆಳೆಯುವಾಗ ಕಳೆದು ಹೋದ ಗ್ರಾಮಪರ್ವ-ಅರಣ್ಯಪರ್ವಗಳ ನೆನಪು ಖಚಿತವಾಗಿ ಮೂಡಿದೆ. ಹೀಗಾಗಿ ನಮ್ಮ ನಾಡಿನ ಸಮಾಜಶಾಸ್ತ್ರ ನಗರಶಾಸ್ತ್ರದ ಇತಿಹಾಸವನ್ನು ಅಭ್ಯಾಸ ಮಾಡುವ ಜಿಜ್ಞಾಸುಗಳಿಗೆ ನರಸಿಂಹಮೂರ್ತಿಯವರ ಈ ಪುಸ್ತಕವು ಅತ್ಯಂತ ಅನಿವಾರ್ಯ.
-ಡಾ. ಜಿ.ಬಿ.ಹರೀಶ
Share


Subscribe to our emails
Subscribe to our mailing list for insider news, product launches, and more.