Dr. N. Mogasale
ನೀರು
ನೀರು
Publisher - ಅಂಕಿತ ಪುಸ್ತಕ
Regular price
Rs. 295.00
Regular price
Rs. 295.00
Sale price
Rs. 295.00
Unit price
/
per
- Free Shipping Above ₹250
- Cash on Delivery (COD) Available
Pages - 263
Type - Paperback
ನೀರಿಗೆ ನಿರ್ಮಲ ಅನ್ನುವ ಅರ್ಥವೂ ಇದೆ. ಎಲ್ಲವನ್ನೂ ಶುದ್ಧ ಮಾಡುವುದು ನೀರು, 'ಶುದ್ಧ ಮಾಡುವಿಕೆ' ಈ ಕಾದಂಬರಿಯ ಮೂಲದ್ರವ್ಯ ಕೂಡ. ಹಾಗಾದರೆ ಶುಚಿಯಾಗಬೇಕಾಗಿರುವುದೇನು? ಮನೆಯೋ, ಮಂದಿರವೋ ಅಥವಾ ಮನವೋ? ಎಂಬ ಬಹುಕಾಲದ ಪ್ರಶ್ನೆಯಲ್ಲಿ ಪುನರುದ್ಭವಿಸಿದೆ. ಹೀಗೇ, ಸಾರ್ವಕಾಲಿಕವೆನಿಸುವ ಸಂಗತಿಯೊಂದನ್ನು ತಮ್ಮದೇ ಅನುಭವದ ಜರಡಿಯಲ್ಲಿ ಸಾಣಿಸಿ ನೋಡುವ ಮೊಗಸಾಲೆಯವರ ವಿಶಿಷ್ಟ ಕಥನ ಶೈಲಿಗೆ "ನೀರು" ಸಾಕ್ಷಿಯಂತಿದೆ.
ನದಿಯೊಂದರ ನೀರ ಹರಿವಿನೊಂದಿಗೇ ಸಾಗುವ ಅಸಂಖ್ಯ ಜೀವ ಜಂತುಗಳು, ಕಸ ಕಡ್ಡಿ ಕಲ್ಮಷಗಳು, ಮಾನವ ನಿರ್ಮಿತ ಹಡಗು ಹಾಯಿಗಳಂತೆ; ಮನುಷ್ಯ ಸಂಬಂಧಗಳ ನಡುವಿನ ಸಂಘರ್ಷ, ಸೋಲು ಗೆಲುವಿನ ಮೇಲಿಳಿತ, ಜಾತಿ ಜತನದ ರಾಜಕೀಯ ಈ ಕಾದಂಬರಿಯುದ್ದಕ್ಕೂ ಹರಿದಿದೆ. ಅಣ್ಣ ತಮ್ಮಂದಿರ ನಡುವೆ ಹಂಚಿ ಹೋದ ಭೂಮಿ ಹಾಗೂ ಅದರೊಂದಿಗೇ ಪಾಲಾದ ನೀರಿನ ಒಡೆತನ ಹೇಗೆ ಮನಸ್ಸುಗಳನ್ನು ಒಡೆಯುವುದರಲ್ಲಿ ಸಫಲವಾಗುತ್ತದೆ, ಹೆಣ್ಮನವನ್ನು ನಲುಗಿಸುತ್ತದೆ; ಅಲ್ಲೇ ಹುಟ್ಟಿದ ದ್ವೇಷ ಅಸೂಯೆಯ ಸೆಲೆ ಅದು ಹೇಗೆ ಮನುಷ್ಯನ ವೃತ್ತಿ ಪ್ರವೃತ್ತಿಗೂ ಆವರಿಸಿಕೊಳ್ಳುತ್ತದೆ ಎಂಬುದನ್ನು ಈ ಕಾದಂಬರಿ ಹಂತ ಹಂತವಾಗಿ ಕಾಣಿಸುತ್ತಾ ಹೋಗುತ್ತದೆ. ಸಣ್ಣ ಊರೊಂದರ ಜನಜೀವನ, ಸಾಂಸ್ಕೃತಿಕ ಆಚರಣೆ ಇತ್ಯಾದಿಗಳ ದಟ್ಟ ವಿವರಗಳ ಜೊತೆಗೇ ಕಾಲಾಂತರದಲ್ಲಿ ಅವುಗಳಲ್ಲಾಗುವ ಪಲ್ಲಟವನ್ನೂ ಮನೋಜ್ಞವಾಗಿ ಈ ಕೃತಿ ಹಿಡಿದು- ಕೊಡುತ್ತದೆ.
ಪಾತ್ರಗಳ ಮನೋಖನನ ಹಾಗೂ ಯಾರು ಸರಿ, ಯಾರು ತಪ್ಪೆಂಬ ಮಾಪನದ ನಿರಾಕರಣೆಗಳೆರಡೂ ಇಲ್ಲಿ ಏಕಕಾಲಕ್ಕೆ ಸಂಭವಿಸುತ್ತದೆ. ಆ ಮುಖೇನ, ಪ್ರತಿ ಪಾತ್ರವೂ ವ್ಯವಸ್ಥೆ ಹಾಗೂ ಕಾಲದ ಬಲಿಪಶುಗಳು ಎಂಬ ಸಂದೇಶವೂ ಪ್ರತಿಫಲಿಸುತ್ತದೆ.
-ಕರ್ಕಿ ಕೃಷ್ಣಮೂರ್ತಿ

Share
Subscribe to our emails
Subscribe to our mailing list for insider news, product launches, and more.