Goruru Ramaswamy Iyengar
ನಮ್ಮ ಊರಿನ ರಸಿಕರು
ನಮ್ಮ ಊರಿನ ರಸಿಕರು
Publisher - ಐಬಿಹೆಚ್ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 116
Type - Paperback
ಈ ಪುಸ್ತಕ ಯಾವ ಆಯಾಮದಿಂದ ನೋಡಿದಾಗಲೂ ಅದ್ಭುತವೆನ್ನಿಸುವ ಅನೇಕ ಕಾರಣಗಳನ್ನು ಹೊಂದಿದೆ. ಹಳ್ಳಿಯ ಜೀವನದ ಬಹುಬಗೆಯ ಸೊಗಸುಗಳು, ಅಲ್ಲಿಯ ಶಾಂತಿ, ನಿರಾಳವಾಗಿ ಹರಿಯುವ ಬದುಕಿನ ಓಟ, ಕಷ್ಟನಷ್ಟಗಳಲ್ಲೂ ಕಂಡುಕೊಳ್ಳುವ ಜೀವನ ಪ್ರೀತಿ, ಸೌಹಾರ್ದತೆ, ಸಂಬಂಧಗಳ ಆರ್ದತೆ ಈ ಎಲ್ಲವನ್ನೂ ಸಹಜವಾಗಿ ತೆರೆದಿಡುತ್ತಲೇ ಎಲ್ಲದರಲ್ಲೂ ಇರಬಹುದಾದ ವ್ಯಂಗ್ಯಗಳನ್ನು, ಮನಸಿನ ವಿಕಾರಗಳನ್ನು, ಅಹಮಿಕೆಯನ್ನು ಚಂದದ ಹಾಸ್ಯದ ಮೂಲಕವೇ ತೋರಿಸಿಕೊಡುತ್ತದೆ.
ಹಾಸ್ಯ ಪ್ರವೃತ್ತಿ ಬಹುದೊಡ್ಡದು. ನಗಿಸಲು ನಿಂತವನು ಮೊದಲು ತನ್ನನ್ನು ತಾನು ನೋಡಿ ನಗಬೇಕು. ಆಗ ಮಾತ್ರವೇ ಇತರರಲ್ಲಿ ನಗುವಿನ ಸೆಲೆ ಹುಟ್ಟಿಸಲು ಸಾಧ್ಯವಾಗುತ್ತದೆ. ಈ ರೀತಿಯ ಬದುಕಿಗೆ ಅಗತ್ಯವಾಗಿ ಬೇಕೇ ಆದ ಹಾಸ್ಯವನ್ನು ಅತಿಯಾದ ಮೊನಚಿನ ವ್ಯಂಗ್ಯವಿಲ್ಲದೇ ನವಿರಾಗಿ, ನಿಶ್ಕಲ್ಮಷವಾಗಿ ರೂಪಿಸುವುದಿದೆಯಲ್ಲ ಅದು ಸುಲಭಕ್ಕೆ ಸಾಧ್ಯವಾಗುವಂತದ್ದಲ್ಲ. ಆದರೆ ಅದು ಈ ಓದಿನಲ್ಲಿ ದಕ್ಕಿಯೇ ತೀರುತ್ತದೆ.
ಕಾರಂತರ “ಹಳ್ಳಿಯ ಹತ್ತು ಸಮಸ್ತರು”, ಮತ್ತು ಇತ್ತೀಚಿನ ನಿಂಜೂರರ “ತೆಂಕನಿಡಿಯೂರಿನ ಕುಳುವಾರಿಗಳು” ಕೃತಿಗಳು ಹಳ್ಳಿಯಲ್ಲಿರುವ ಹಲಕೆಲವು ಪ್ರಮುಖರನ್ನು ತೆರೆಗೆ ತಂದು ಅವರ ಪ್ರವೃತ್ತಿ, ಮನೋವೃತ್ತಿ, ವಿಕೃತಿಗಳನ್ನೆಲ್ಲಾ ಲಘುವಾದ ಹಾಸ್ಯದ ಮೂಲಕ ಅಲ್ಲಿಯ ಚೆಲುವನ್ನು ತೆರೆದಿಡುತ್ತವೆ. ಅಂತಹದ್ದೇ ಸಾಲಿಗೆ ಸೇರುವ ಮತ್ತು ಭಾಷ್ಯಾಲಾಲಿತ್ಯದಿಂದಾಗಿ, ನವಿರಾದ ಹಾಸ್ಯದಿಂದಾಗಿ ಇನ್ನಷ್ಟು ಸೊಗಸಾಗಿ ಓದಿಸಿಕೊಂಡು ಹೋಗುವ ಗೊರೂರರ ಈ ಕೃತಿ ಹಳ್ಳಿ ಜೀವನದ ಹತ್ತಾರು ಮುಖಗಳನ್ನು ಅದರೊಳಗಿನ ಹತ್ತಾರು ರಸಗಳನ್ನು ರಂಜನೀಯವಾಗಿ ಉಣಬಡಿಸುತ್ತದೆ.
ನಗರ ಜೀವನದಲ್ಲಿ ನಿಧಾನವಾಗಿ ಆವರಿಸಿಕೊಳ್ಳುತ್ತಿರುವ ಜಡತ್ವ, ಕಳೆದುಕೊಳ್ಳುತ್ತಿರುವ ಸಂಬಂಧಗಳ ಚಲನಶೀಲತೆ, ಯಾಂತ್ರಿಕ ಬದುಕಿನಿಂದುಂಟಾದ ನಿರ್ಲಿಪ್ತಿಗಳಿಗೆ ಬೇಸತ್ತು ಹಳ್ಳಿಯತ್ತ ಮುಖ ಮಾಡಿ ಅಲ್ಲಿ ಕಂಡುಕೊಳ್ಳುವ ಹೊಸ ಅನುಭವಗಳನ್ನು ಆಸ್ವಾಧಿಸುವ ಗುಂಡಣ್ಣನಂತೆ ಎಲ್ಲರ ಮನಸ್ಸುಗಳೂ ಹೋಯ್ದಾಡುತ್ತಿವೆ. ಆದರೆ ಇಂದು ಎಲ್ಲವೂ ಬದಲಾಗಿದೆ. ಹಳ್ಳಿ ಮತ್ತು ಪಟ್ಟಣಗಳ ನಡುವಿನ ಅಂತರ ಬಹಳಷ್ಟು ಕಡಿಮೆಯಾಗಿ ಒಂದು ಗೆರೆಯಷ್ಟೇ ಉಳಿದಿದೆ ಎನ್ನಿಸುತ್ತದೆ. ಆದರೆ ಇಂದಿಗೂ ಹಳ್ಳಿಯಲ್ಲಿ ಸುಪ್ತವಾಗೇ ಉಳಿದು ಹೋದ ಪ್ರಶಾಂತತೆ ಹೊರ ನೋಟದ್ದು ಮಾತ್ರವಾಗಿರದೇ ಆಳದಲ್ಲೇ ಬೇರೂರಿದೆ. ಅದನ್ನು ಇಲ್ಲಿ ಕಾಣಬಹುದು ಕೂಡ.
ಗೊರೂರರ ಬರಹ ಶೈಲಿ ಅದೆಷ್ಟು ಆಕರ್ಷಿಸಿದೆ ಎಂದರೆ ಅವರ ಇತರೆ ಕೃತಿಗಳನ್ನು ಹುಡುಕಿ ಓದಲೇಬೇಕು ಎನ್ನುವ ತುಡಿತ ಹತ್ತಿಕ್ಕಲು ಸಾಧ್ಯವಾಗುವಂತದ್ದಲ್ಲ. ಒಂದು ಚಂದದ ಕೃತಿಯನ್ನು ಓದಿದ ಸಂತೃಪ್ತಿ. ನೀವೂ ಓದಿ.
-ಕವಿತಾ ಭಟ್
Share
Subscribe to our emails
Subscribe to our mailing list for insider news, product launches, and more.